Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುರೂನ್ಸ್ ಶ್ರೀಮಂತರು: ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ; ಇಲ್ಲಿ ಭಾರತೀಯ ಸಿರಿವಂತರ ಪಟ್ಟಿ

Hurun India Rich List 2023: ಹುರೂನ್ ಇಂಡಿಯಾ ಮತ್ತು 360 ಒನ್ ವೆಲ್ತ್ ಸಂಸ್ಥೆಗಳು ಜಂಟಿಯಾಗಿ ಪ್ರತೀ ವರ್ಷ ಅತಿಶ್ರೀಮಂತ ಭಾರತೀಯರ ಪಟ್ಟಿ ಮಾಡುತ್ತವೆ. ಈ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಅವರು ಹೊಂದಿರುವ ಷೇರುಸಂಪತ್ತು ಒಟ್ಟು 8,08,700 ಕೋಟಿ ರೂನಷ್ಟಿದೆ. ಇನ್ನು, ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ 4,74,800 ಕೋಟಿ ರೂನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಹುರೂನ್ಸ್ ಶ್ರೀಮಂತರು: ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ; ಇಲ್ಲಿ ಭಾರತೀಯ ಸಿರಿವಂತರ ಪಟ್ಟಿ
ಮುಕೇಶ್ ಅಂಬಾನಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 10, 2023 | 3:40 PM

ನವದೆಹಲಿ, ಅಕ್ಟೋಬರ್ 10: ಈ ವರ್ಷದ ಹುರೂನ್ ಇಂಡಿಯಾ (Hurun India) ಶ್ರೀಮಂತರ ಪಟ್ಟಿಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಅಧಿಪತಿ ಮುಕೇಶ್ ಅಂಬಾನಿ ನಿರೀಕ್ಷೆಯಂತೆ ಮೊದಲ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷ ನಂಬರ್ ಒನ್ ಸ್ಥಾನದಲ್ಲಿದ್ದ ಗೌತಮ್ ಅದಾನಿಯನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಜನವರಿಯಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಅದಾನಿ ಗ್ರೂಪ್ ಕಂಪನಿಗಳ ವಿರುದ್ದ ಸ್ಫೋಟಕ ವರದಿ ಪ್ರಟಿಸಿದ ಬೆನ್ನಲ್ಲೇ ಗೌತಮ್ ಅದಾನಿ ಷೇರುಸಂಪತ್ತು ಸಾಕಷ್ಟು ಕರಗಿಹೋಗಿದೆ. ಆದರೂ ಕೂಡ ಅವರು ‘360 ಒನ್ ವೆಲ್ತ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023’ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ.

ಹುರೂನ್ ಇಂಡಿಯಾ ಮತ್ತು 360 ಒನ್ ವೆಲ್ತ್ ಸಂಸ್ಥೆಗಳು ಜಂಟಿಯಾಗಿ ಪ್ರತೀ ವರ್ಷ ಅತಿಶ್ರೀಮಂತ ಭಾರತೀಯರ ಪಟ್ಟಿ ಮಾಡುತ್ತವೆ. ಈ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಅವರು ಹೊಂದಿರುವ ಷೇರುಸಂಪತ್ತು ಒಟ್ಟು 8,08,700 ಕೋಟಿ ರೂನಷ್ಟಿದೆ. ಇನ್ನು, ಅದಾನಿ ಗ್ರೂಪ್ ಛೇರ್ಮನ್ ಗೌತಮ್ ಅದಾನಿ 4,74,800 ಕೋಟಿ ರೂನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಸೀರಮ್ ಸಂಸ್ಥೆಯ ಮುಖ್ಯಸ್ಥ ಸೈರಸ್ ಪೂನಾವಾಲ ಅವರು 2,78,500 ಕೋಟಿ ರೂನೊಂದಿಗೆ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ಬೆಳವಣಿಗೆಯ ಪರಿಯನ್ನು ಹುರೂನ್ ವರದಿಯಲ್ಲಿ ಗುರುತಿಸಲಾಗಿದೆ. ಕಳೆದ ಒಂದು ದಶಕದಲ್ಲಿ ರಿಲಾಯನ್ಸ್ ಗ್ರೂಪ್​ನಿಂದ 150 ಬಿಲಿಯನ್ ಡಾಲರ್​ನಷ್ಟು (13 ಲಕ್ಷಕೋಟಿ ರೂ) ಹೂಡಿಕೆ ಆಗಿದೆ. 2014ರಲ್ಲಿ 1,65,100 ರೂ ಇದ್ದ ಅಂಬಾನಿ ಷೇರುಸಂಪತ್ತು 2023ರಲ್ಲಿ 8,08,700 ಕೋಟಿ ರೂಗೆ ಏರಿದೆ ಎಂದು ಹುರೂನ್ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪಬ್ಲಿಕ್ ಪ್ರಾವಿಡೆಂಟ್ ಫಂಡ್, ವಾಲಂಟರಿ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಪೆನ್ಷನ್ ಸಿಸ್ಟಂ; ಇವುಗಳಲ್ಲಿ ಯಾವುದರಲ್ಲಿ ಹೂಡಿಕೆ ಉತ್ತಮ?

ಇನ್ನು, ಕಳೆದ ವರ್ಷಾಂತ್ಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತ ಎನಿಸಿದ್ದ ಗೌತಮ್ ಅದಾನಿ ಹಿಂಡನ್ಬರ್ಗ್ ರಿಸರ್ಚ್ ವರದಿ ಪರಿಣಾಮ ಅರ್ಧಕ್ಕಿಂತ ಹೆಚ್ಚು ಸಂಪತ್ತು ಕಳೆದುಕೊಳ್ಳಬೇಕಾಯಿತು. ಇದರ ಪರಿಣಾಮವಾಗಿ ಈಗ ಅವರು ವಿಶ್ವಶ್ರೀಮಂತರ ಪಟ್ಟಿಯಲ್ಲಿ 30ಕ್ಕಿಂತ ಕೆಳಗಿನ ಸ್ಥಾನಕ್ಕೆ ಇಳಿದಿದ್ದಾರೆ.

ಹುರೂನ್ ಇಂಡಿಯಾ 2023ರ ಶ್ರೀಮಂತರು

  1. ಮುಕೇಶ್ ಅಂಬಾನಿ: 8,08,700 ಕೋಟಿ ರೂ
  2. ಗೌತಮ್ ಅದಾನಿ: 4,74,800 ಕೋಟಿ ರೂ
  3. ಸೈರಸ್ ಎಸ್ ಪೂನಾವಾಲ, ಸೀರಂ ಇನ್ಸ್​ಟಿಟ್ಯೂಟ್: 2,78,500 ಕೋಟಿ ರೂ
  4. ಶಿವ್ ನಾದರ್, ಎಚ್​ಸಿಎಲ್: 2,28,900 ಕೋಟಿ ರೂ
  5. ಗೋಪಿಚಂದ್ ಹಿಂದೂಜ ಅಂಡ್ ಫ್ಯಾಮಿಲಿ: 1,76,500 ಕೋಟಿ ರೂ
  6. ದಿಲೀಪ್ ಶಾಂಘವಿ, ಸನ್ ಫಾರ್ಮಸ್ಯೂಟಿಕಲ್ಸ್: 1,64,300 ಕೋಟಿ ರೂ
  7. ಎಲ್ ಎನ್ ಮಿಟ್ಟಲ್ ಅಂಡ್ ಫ್ಯಾಮಿಲಿ: 1,62,300 ಕೋಟಿ ರೂ
  8. ರಾಧಾಕೃಷ್ಣ ದಾಮನಿ, ಅವೆನ್ಯೂ ಸೂಪರ್​ಮಾರ್ಟ್ಸ್: 1,43,900 ಕೋಟಿ ರೂ
  9. ಕುಮಾರಮಂಗಲಂ ಬಿರ್ಲಾ ಅಂಡ್ ಫ್ಯಾಮಿಲಿ: 1,25,600 ಕೋಟಿ ರೂ
  10. ನೀರಜ್ ಬಜಾಜ್ ಅಂಡ್ ಫ್ಯಾಮಿಲಿ: 1,20,700 ಕೋಟಿ ರೂ

ಇದನ್ನೂ ಓದಿ: ಸ್ವಿಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯೋದು ಹೇಗೆ? ಎಷ್ಟು ಗೌಪ್ಯತೆ ಕಾಯ್ದುಕೊಳ್ಳಲಾಗುತ್ತದೆ? ಇಲ್ಲಿದೆ ಡೀಟೇಲ್ಸ್

1,319 ವ್ಯಕ್ತಿಗಳು ಸಹಸ್ರ ಕೋಟಿ ಒಡೆಯರು

ಒಂದು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಸಂಪತ್ತನ್ನು ಹೊಂದಿರುವವರ ಸಂಖ್ಯೆ 1,319ಕ್ಕೆ ಏರಿದೆ. ಕಳೆದ ಐದು ವರ್ಷದಲ್ಲಿ ಸಹಸ್ರ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ. 76ರಷ್ಟು ಹೆಚ್ಚಾಗಿದೆ. ನಮ್ಮ ಪಟ್ಟಿಯಲ್ಲಿರುವ ವ್ಯಕ್ತಿಗಳ ಬಳಿಯ ಒಟ್ಟು ಸಂಪತ್ತು 109 ಲಕ್ಷ ಕೋಟಿ ರೂ ಆಗಿದೆ. ಸಿಂಗಾಪುರ, ಯುಎಇ ಮತ್ತು ಸೌದಿ ಅರೇಬಿಯಾ ದೇಶಗಳ ಒಟ್ಟೂ ಜಿಡಿಪಿಗಿಂತಲೂ ಇದು ಹೆಚ್ಚಾಗಿದೆ ಎಂದು 360 ಒನ್ ಸಂಸ್ಥೆಯ ಸಹ-ಸಂಸ್ಥಾಪಕ ಯತಿನ್ ಶಾ ಹೇಳಿದ್ದಾರೆ.

ಇನ್ನು, ಈ ಹುರುನ್ ವರದಿಯಲ್ಲಿ ಇನ್ನೂ ಕೆಲ ಕುತೂಹಲ ಸಂಗತಿಗಳಿವೆ. ಸ್ವಂತವಾಗಿ ಬೆಳೆದ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಜೋಹೋ ಕಾರ್ಪೊರೇಶನ್​ನ ರಾಧಾ ವೆಂಬು ಅವರು ನೈಕಾದ ಫಾಲ್ಗುಣಿ ನಾಯ್ಯರ್ ಅವರನ್ನು ಹಿಂದಿಕ್ಕಿದ್ದಾರೆ. ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿರುವ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನೇಹಾ ನರ್ಖೆಡೆ ಅವರಿಗೆ ಲಭಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ