Amartya Sen: ಅಂತರ್ಜಾಲದಲ್ಲಿ ಹರಿದಾಡಿದ ಅಮರ್ತ್ಯ ಸೇನ್ ನಿಧನದ ಸುದ್ದಿ; ಅಪ್ಪ ಸತ್ತಿಲ್ಲ, ಬದುಕಿದ್ದಾರೆ ಎಂದು ಮಗಳ ಸ್ಪಷ್ಟನೆ
Fake News: ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನ ಹೊಂದಿದವರೆಂದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು. ಇದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ತಮ್ಮ ತಂದೆ ಸತ್ತಿಲ್ಲ, ಬದುಕಿದ್ದಾರೆ ಎಂದು ಅಮರ್ತ್ಯ ಸೇನ್ ಅವರ ಮಗಳೇ ಸ್ವತಃ ಸ್ಪಷ್ಟಪಡಿಸಿದ್ದಾರೆ. ನಂದನಾ ದೇಬ್ ತಮ್ಮ ತಂದೆ ಸತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿರುವ ಬಗ್ಗೆ ಪಿಟಿಐ ಟ್ವೀಟ್ ಮಾಡಿದೆ.
ನವದೆಹಲಿ, ಅಕ್ಟೋಬರ್ 10: ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನ ಹೊಂದಿದವರೆಂದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು. ಇದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ತಮ್ಮ ತಂದೆ ಸತ್ತಿಲ್ಲ, ಬದುಕಿದ್ದಾರೆ ಎಂದು ಅಮರ್ತ್ಯ ಸೇನ್ ಅವರ ಮಗಳೇ ಸ್ವತಃ ಸ್ಪಷ್ಟಪಡಿಸಿದ್ದಾರೆ. ನಂದನಾ ದೇಬ್ ತಮ್ಮ ತಂದೆ ಸತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿರುವ ಬಗ್ಗೆ ಪಿಟಿಐ ಟ್ವೀಟ್ ಮಾಡಿದೆ.
ಭಾರತದ ಧೀಮಂತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಕೆಲವೇ ಕ್ಷಣಗಳ ಹಿಂದೆ (ಅ. 10) ಸಾವನ್ನಪ್ಪಿದ್ದಾರೆ ಎಂದು ಹಾಲಿ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞೆ ಕ್ಲಾಡಿಯಾ ಗೋಲ್ಡಿನ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಷೇರ್ ಮಾಡಲಾಗಿತ್ತು. ಈ ಟ್ವೀಟ್ ಆಧಾರದ ಮೇಲೆ ಬಹುತೇಕ ಮಾಧ್ಯಮಗಳು ಅಮರ್ತ್ಯ ಸೇನ್ ಸಾವಿನ ಸುದ್ದಿಯನ್ನು ವರದಿ ಮಾಡಿದ್ದವು. ಪಿಟಿಐ ಸುದ್ದಿ ಸಂಸ್ಥೆ ಕೂಡ ಇದೇ ಆಧಾರದ ಮೇಲೆ ಟ್ವೀಟ್ ಮಾಡಿತ್ತು. ಆದರೆ, ಮಗಳು ನಂದನಾ ದೇಬ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
ಹಾಗೆಯೇ, ಅಮರ್ತ್ಯ ಸೇನ್ ಸತ್ತಿದ್ದಾರೆಂದು ಮೊದಲು ಷೇರ್ ಮಾಡಲಾಗಿದ್ದ ಕ್ಲಾಡಿಯಾ ಗೋಲ್ಡಿನ್ ಖಾತೆ ನಕಲಿ ಎಂಬುದು ಗೊತ್ತಾಗಿದೆ. ಇದು ಕ್ಲಾಡಿಯಾ ಅವರ ಅಧಿಕೃತ ಖಾತೆಯಾಗಿರಲಿಲ್ಲ.
A terrible news. My dearest Professor Amartya Sen has died minutes ago. No words. pic.twitter.com/giIdK0t2XA
— Claudia Goldin (@profCGoldin) October 10, 2023
‘ಸ್ನೇಹಿತರೆ, ನಿಮ್ಮ ಕಾಳಜಿಗೆ ಧನ್ಯವಾದ. ಆದರೆ, ಇದು ಸುಳ್ಳು ಸುತ್ತಿ. ಬಾಬಾ (ತಂದೆ) ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್ನಲ್ಲಿ ಈ ವಾರ ನಾವು ಕುಟುಂಬದವರು ಚೆನ್ನಾಗಿ ಮಜಾ ಮಾಡಿದೆವು. ಕಳೆದ ರಾತ್ರಿ ಅವರನ್ನು ಬಿಟ್ಟು ಬರುವಾಗ ಅವರ ಅಪ್ಪುಗೆ ಎಂದಿನಂತೆ ಗಾಢವಾಗಿತ್ತು. ಹಾರ್ವರ್ಡ್ನಲ್ಲಿ ಅವರು ವಾರಕ್ಕೆ ಎರಡು ಕೋರ್ಸ್ ಪಾಠ ಮಾಡುತ್ತಿದ್ದಾರೆ. ಪುಸ್ತಕ ಬರೆಯುತ್ತಿದ್ದಾರೆ. ಎಂದಿನಂತೆ ಅವರು ಬ್ಯುಸಿಯಾಗಿದ್ದಾರೆ’ ಎಂದು ನಂದನಾ ದೇಬ್ ಸೇನ್ ಅವರು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಟ್ವೀಟ್ ಮಾಡಿದ್ದಾರೆ.
Friends, thanks for your concern but it’s fake news: Baba is totally fine. We just spent a wonderful week together w/ family in Cambridge—his hug as strong as always last night when we said bye! He is teaching 2 courses a week at Harvard, working on his gender book—busy as ever! pic.twitter.com/Fd84KVj1AT
— Nandana Sen (@nandanadevsen) October 10, 2023
1998ರಲ್ಲಿ ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಪಾರಿತೋಷಕ ಪಡೆದಿರುವ ಅಮರ್ತ್ಯ ಸೇನ್ ಸದ್ಯ ಬ್ರಿಟನ್ ದೇಶದಲ್ಲಿ ವಾಸವಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅವರು ಎಕನಾಮಿಕ್ಸ್ ಪಾಠ ಮಾಡುತ್ತಿದ್ದಾರೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತರೂ ಆಗಿರುವ ಅವರು 89ರ ಇಳಿ ವಯಸ್ಸಿನಲ್ಲೂ ಬಹಳ ಸಕ್ರಿಯರಾಗಿದ್ದಾರೆ.
‘ನಾನು ನಿವೃತ್ತನಾಗಬಹುದು ಎಂಬ ಆಶಯವನ್ನೇ ಜನರು ಕೈಬಿಟ್ಟಿದ್ದಾರೆ. ನನಗೆ ಕೆಲಸ ಮಾಡುವುದೆಂದರೆ ಬಹಳ ಇಷ್ಟ. ನನಗೆ ಆಸಕ್ತಿ ಇಲ್ಲದ ಕೆಲಸವನ್ನು ಯಾವತ್ತು ಮಾಡಿಲ್ಲ. ನಾನು ಇನ್ನೂ ಸಕ್ರಿಯವಾಗಿರುವುದಕ್ಕೆ ಇದು ಕಾರಣ’ ಎಂದು ಎರಡು ವರ್ಷಗಳ ಹಿಂದೆ ಅಮರ್ತ್ಯ ಸೇನ್ ಹೇಳಿದ್ದು ನೆನಪಿಗೆ ಬರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 10 October 23