ಯುಪಿಐನ ಹೊಸ ಫೀಚರ್ ಕ್ರೆಡಿಟ್ ಲೈನ್ ಹೇಗೆ ಬಳಸುವುದು? ಇಲ್ಲಿದೆ ಅದರ ಅನುಕೂಲತೆಗಳು

UPI Credit Line: ಸದ್ಯ ಯುಪಿಐ ಆ್ಯಪ್​ಗಳಿಗೆ ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಪ್ರೀಪೇಯ್ಡ್ ವ್ಯಾಲಟ್, ಓವರ್​ಡ್ರಾಫ್ಟ್ ಅಕೌಂಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಲಿಂಕ್ ಮಾಡಲು ಅವಕಾಶ ಇದೆ. ಈಗ ಬ್ಯಾಂಕುಗಳಿಂದ ಮೊದಲೇ ಅನುಮೋದನೆ ಪಡೆದ ಕ್ರೆಡಿಟ್ ಲೈನ್ ಅನ್ನೂ ಯುಪಿಐಗೆ ಲಿಂಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐನಲ್ಲಿ ಕ್ರೆಡಿಟ್ ಲೈನ್ ಅನ್ನು ಉಪಯೋಗಿಸಬಹುದು.

ಯುಪಿಐನ ಹೊಸ ಫೀಚರ್ ಕ್ರೆಡಿಟ್ ಲೈನ್ ಹೇಗೆ ಬಳಸುವುದು? ಇಲ್ಲಿದೆ ಅದರ ಅನುಕೂಲತೆಗಳು
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2023 | 2:44 PM

ಕಾಲಕ್ಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಯುಪಿಐನಲ್ಲಿ ಹೊಸ ಫೀಚರ್​ಗಳನ್ನು ತರಲಾಗುತ್ತಲೇ ಇದೆ. ಇತ್ತೀಚೆಗಷ್ಟೇ ಯುಪಿಐನಲ್ಲಿ ಪೂರ್ವ ಅನುಮೋದಿತ ಕ್ರೆಡಿಟ್ ಲಿಮಿಟ್ (UPI credit) ಹೊಂದುವ ಹೊಸ ಫೀಚರ್ ಅನ್ನು ಘೋಷಿಸಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಈ ಫೀಚರ್ ಬಗ್ಗೆ ಮಾಹಿತಿ ನೀಡಿದ್ದರು. ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂದು ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಗ್ಲೋಬಲ್ ಫಿನ್​ಟೆಕ್ ಫೆಸ್ಟಿವಲ್​ನಲ್ಲಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಪ್ರಾಯೋಗಿಕವಾಗಿ ತೋರಿಸಿತ್ತು. ಶೀಘ್ರದಲ್ಲೇ ಈ ಫೀಚರ್ ಅನುಷ್ಠಾನಕ್ಕೆ ಬರಲಿದೆ. ಸದ್ಯ ಯುಪಿಐ ಆ್ಯಪ್​ಗಳಿಗೆ ಸೇವಿಂಗ್ಸ್ ಬ್ಯಾಂಕ್ ಅಕೌಂಟ್, ಪ್ರೀಪೇಯ್ಡ್ ವ್ಯಾಲಟ್, ಓವರ್​ಡ್ರಾಫ್ಟ್ ಅಕೌಂಟ್ ಮತ್ತು ಕ್ರೆಡಿಟ್ ಕಾರ್ಡ್​ಗಳನ್ನು ಲಿಂಕ್ ಮಾಡಲು ಅವಕಾಶ ಇದೆ. ಈಗ ಬ್ಯಾಂಕುಗಳಿಂದ ಮೊದಲೇ ಅನುಮೋದನೆ ಪಡೆದ ಕ್ರೆಡಿಟ್ ಲೈನ್ ಅನ್ನೂ ಯುಪಿಐಗೆ ಲಿಂಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಯುಪಿಐನಲ್ಲಿ ಕ್ರೆಡಿಟ್ ಲೈನ್ (UPI credit line) ಅನ್ನು ಉಪಯೋಗಿಸಬಹುದು.

ಬ್ಯಾಂಕ್​ನಲ್ಲಿ ಅರ್ಜಿ ಸಲ್ಲಿಸಿ ಕ್ರೆಡಿಟ್ ಲೈನ್ ಪಡೆಯಬೇಕು

ಯುಪಿಐ ಬಳಕೆದಾರರು ತಮ್ಮ ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಜೊತೆಗೆ ನಿಮ್ಮ ಆದಾಯ ವರದಿ, ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ಇತ್ಯಾದಿ ದಾಖಲೆಗಳನ್ನು ಜೊತೆಗೆ ಕೊಡಬೇಕು. ಕ್ರೆಡಿಟ್ ಕಾರ್ಡ್​ಗೆ ಲಿಮಿಟ್ ನಿರ್ಧರಿಸುವಾಗ ಪರಿಗಣಿಸಲಾಗುವ ಅಂಶಗಳೇ ಬಹುತೇಕ ಯುಪಿಐ ಕ್ರೆಡಿಟ್ ಲೈನ್ ನೀಡಲು ಬಳಕೆ ಆಗುತ್ತವೆ. ಗ್ರಾಹಕರ ಹಣಕಾಸು ಸ್ಥಿತಿ, ಆದಾಯ, ಕ್ರೆಡಿಟ್ ಸ್ಕೋರ್, ಸಾಲ ಮರುಪಾವತಿಯ ಇತಿಹಾಸ ಇವೆಲ್ಲವನ್ನೂ ಬ್ಯಾಂಕು ಪರಿಶೀಲಿಸಿ ಕ್ರೆಡಿಟ್ ಲೈನ್​ ಮೊತ್ತವನ್ನು ನಿರ್ಧರಿಸುತ್ತದೆ.

ಇದನ್ನೂ ಓದಿ: ಸರ್ಕಾರ ಕಳುಹಿಸುವ ಎಮರ್ಜೆನ್ಸಿ ಅಲರ್ಟ್ ಟೆಸ್ಟ್ ಮೆಸೇಜ್ ನಿಮ್ಮ ಮೊಬೈಲ್​ಗೆ ಬಂದಿಲ್ಲವಾ? ಕಾರಣಗಳೇನಿರಬಹುದು?

ಕ್ರೆಡಿಟ್ ಲೈನ್ ಹೇಗೆ ಬಳಸಬಹುದು?

ಒಮ್ಮೆ ನಿಮ್ಮ ಬ್ಯಾಂಕ್ ನಿಮಗೆ ಕ್ರೆಡಿಟ್ ಲೈನ್​ಗೆ ಹಣವನ್ನು ಸ್ಯಾಂಕ್ಷನ್ ಮಾಡಿದರೆ, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಯಾವುದೇ ಯುಪಿಐ ಆ್ಯಪ್​ನಲ್ಲೂ ಕ್ರೆಡಿಟ್ ಲೈನ್ ಸೌಲಭ್ಯ ಬಳಸಬಹುದು.

ನಿಮ್ಮ ಕ್ರೆಡಿಟ್ ಲೈನ್​ನ ಮಿತಿಯವರೆಗೂ ನೀವು ಹಣ ಬಳಸಬಹುದು. ಕ್ರೆಡಿಟ್ ಕಾರ್ಡ್​ನಲ್ಲಿರುವಂತೆ ನಿರ್ದಿಷ್ಟ ಅವಧಿಯವರೆಗೆ ನೀವು ಬಳಸುವ ಹಣಕ್ಕೆ ಬಡ್ಡಿ ಇರುವುದಿಲ್ಲ. ಆ ಬಳಿಕ ಬಡ್ಡಿ ಇರುತ್ತದಾದರೂ ಕ್ರೆಡಿಟ್ ಕಾರ್ಡ್​ನಲ್ಲಿರುವಷ್ಟು ಹೆಚ್ಚಿನ ಮಟ್ಟದಲ್ಲಿ ಬಡ್ಡಿ ಇರುವುದಿಲ್ಲ.

ಹಾಗೆಯೇ, ನೀವು ಕ್ರೆಡಿಟ್ ಲೈನ್ ಸೌಲಭ್ಯದಲ್ಲಿ ಬಳಸಿದ ಹಣವನ್ನು ನಿಗದಿತ ದಿನದಲ್ಲಿ ಮರುಪಾವತಿಗೆ ಅವಕಾಶ ಕೊಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್