ನವದೆಹಲಿ, ಏಪ್ರಿಲ್ 14: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಸತತ ಏಳನೇ ವಾರವೂ ಏರಿಕೆ ಆಗಿದೆ. ಏಪ್ರಿಲ್ 5ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.98 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಭಾರತದ ಒಟ್ಟು ಫಾರೆಕ್ಸ್ ಮೀಸಲು ನಿಧಿ 648.56 ಕೋಟಿ ರೂಗೆ ಏರಿದೆ. ಸತತ ಮೂರನೇ ಬಾರಿ ಗರಿಷ್ಠ ಮಟ್ಟ ಮೀರಿದ ದಾಖಲೆ ಸ್ಥಾಪಿಸಿದೆ. ಇದು ಹೊಸ ಗರಿಷ್ಠ ಫಾರೆಕ್ಸ್ ಮೀಸಲು ನಿಧಿಯಾಗಿದೆ. ಮಾರ್ಚ್ 29ರಂದು ಅಂತ್ಯಗೊಂಡ ವಾರದಲ್ಲಿ 2.95 ಬಿಲಿಯನ್ ಡಾಲರ್ನಷ್ಟು ಏರಿತ್ತು.
ಏಪ್ರಿಲ್ 5ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ನ ಎಲ್ಲಾ ಅಂಶಗಳೂ ಏರಿಕೆ ಆಗಿವೆ. ಆದರೆ, ಚಿನ್ನದ ಸಂಗ್ರಹವನ್ನು ಆರ್ಬಿಐ ಸತತವಾಗಿ ಹೆಚ್ಚಿಸುತ್ತಿದೆ. ಫಾರೆಕ್ಸ್ ರಿಸರ್ವ್ಸ್ನ ಪ್ರಮುಖ ಭಾಗವಾಗಿರುವ ಫಾರೀನ್ ಕರೆನ್ಸಿ ಆಸ್ತಿಯಲ್ಲಿ 549 ಮಿಲಿಯನ್ ಡಾಲರ್ನಷ್ಟು ಏರಿದೆ. ಗೋಲ್ಡ್ ರಿಸರ್ವ್ಸ್ 2.4 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ.
ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್ಡಿಆರ್ಗಳು 24 ಮಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಐಎಂಎಫ್ನಲ್ಲಿರುವ ಮೀಸಲು ನಿಧಿ 9 ಮಿಲಿಯನ್ ಡಾಲರ್ಗೆ ಏರಿರುವುದು ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬರುತ್ತದೆ.
ಒಟ್ಟು ಫಾರೆಕ್ಸ್ ಮೀಸಲು ನಿಧಿ: 648.56 ಬಿಲಿಯನ್ ಡಾಲರ್
ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಸಂಪತ್ತು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ರಷ್ಯಾ ಆರನೇ ಸ್ಥಾನಕ್ಕೆ ಕುಸಿಯುವ ಹಂತದಲ್ಲಿದೆ.
ಚೀನಾ 3.22 ಟ್ರಿಲಿಯನ್ ಡಾಲರ್ನಷ್ಟು ಫಾರೆಕ್ಸ್ ನಿಧಿಯೊಂದಿಗೆ ಅಗ್ರಸ್ಥಾನದಲ್ಲಿದೆ. ಜಪಾನ್ 1.29 ಟ್ರಿಲಿಯನ್ ಡಾಲರ್, ಸ್ವಿಟ್ಜರ್ಲ್ಯಾಂಡ್ 868 ಬಿಲಿಯನ್ ಡಾಲರ್ನೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ