ಟಾಟಾ ಕನ್ಸಲ್ಟನ್ಸಿ ಸರ್ವಿಸ್ ಲಾಭ ಶೇ. 9ರಷ್ಟು ಏರಿಕೆ; ಇಡೀ ವರ್ಷದಲ್ಲಿ 45,908 ಕೋಟಿ ರೂ ನಿವ್ವಳ ಲಾಭ; 28 ರೂ ಡಿವಿಡೆಂಡ್ ಘೋಷಣೆ

TCS quarterly results: ದೇಶದ ಅತಿದೊಡ್ಡ ಐಟಿ ಕಂಪನಿ ಎನಿಸಿರುವ ಟಾಟಾ ಕನ್ಸಲ್ಟನ್ಸಿಯ ಮಾರ್ಚ್ ತ್ರೈಮಾಸಿಕದ ವರದಿ ಬಿಡುಗಡೆ ಆಗಿದೆ. ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಟಿಸಿಎಸ್ ಆದಾಯ 61,237 ಕೋಟಿ ರೂ ಇದ್ದು ನಿವ್ವಳ ಲಾಭ 12,434 ಕೋಟಿ ರೂ ಇದೆ. ಆದಾಯದಲ್ಲಿ ಶೇ. 1.5ರಷ್ಟು ಹೆಚ್ಚಳವಾದರೂ ನಿವ್ವಳ ಲಾಭದಲ್ಲಿ ಶೇ. 9.1ರಷ್ಟು ಏರಿಕೆ ಆಗಿದೆ. ಇಡೀ ಹಣಕಾಸು ವರ್ಷದಲ್ಲಿ ಟಿಸಿಎಸ್​ನ ನಿವ್ವಳ ಲಾಭ 45,908 ಕೋಟಿ ರೂ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 9ರಷ್ಟು ಹೆಚ್ಚಾಗಿದೆ.

ಟಾಟಾ ಕನ್ಸಲ್ಟನ್ಸಿ ಸರ್ವಿಸ್ ಲಾಭ ಶೇ. 9ರಷ್ಟು ಏರಿಕೆ; ಇಡೀ ವರ್ಷದಲ್ಲಿ 45,908 ಕೋಟಿ ರೂ ನಿವ್ವಳ ಲಾಭ; 28 ರೂ ಡಿವಿಡೆಂಡ್ ಘೋಷಣೆ
ಟಿಸಿಎಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2024 | 5:02 PM

ನವದೆಹಲಿ, ಏಪ್ರಿಲ್ 12: ಮಾರುಕಟ್ಟೆ ಬಂಡವಾಳದಲ್ಲಿ (Market cap) ಭಾರತದ ಅತಿದೊಡ್ಡ ಐಟಿ ಕಂಪನಿ ಎನಿಸಿರುವ ಟಿಸಿಎಸ್ (TCS) ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಉತ್ತಮ ಲಾಭ ತೋರಿಸಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ 12,434 ಕೋಟಿ ರೂ ನಿವ್ವಳ ಲಾಭವನ್ನು ಟಿಸಿಎಸ್ ಪಡೆದಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಟಿಸಿಎಸ್​ನ ಲಾಭದಲ್ಲಿ ಶೇ. 9.1ರಷ್ಟು ಹೆಚ್ಚಾಗಿದೆ. ಇಡೀ ಹಣಕಾಸು ವರ್ಷದಲ್ಲಿ (2023-24) ಟಿಸಿಎಸ್​ನ ನಿವ್ವಳ ಲಾಭ 45,908 ಕೋಟಿ ರೂ ಆಗಿದೆ. ಇದರಲ್ಲೂ ಶೇ. 9ರಷ್ಟು ಹೆಚ್ಚಳವಾಗಿದೆ.

ಟಿಸಿಎಸ್​ನ ತ್ರೈಮಾಸಿಕ ವರದಿಯಲ್ಲಿರುವ ಗಮನಾರ್ಹ ಅಂಶ ಎಂದರೆ ಅದರ ಆದಾಯದಲ್ಲಿ ಅಂಥ ಹೆಚ್ಚಳ ಆಗದೇ ಹೋದರೂ ನಿವ್ವಳ ಲಾಭದಲ್ಲಿ ಏರಿಕೆ ಆಗಿದೆ. ಅದರ ಆಪರೇಟಿಂಗ್ ಪ್ರಾಫಿಟ್ ಮಾರ್ಜಿನ್, ಅಂದರೆ ಲಾಭದ ಅಂತರ ಶೇ. 26ಕ್ಕೆ ಏರಿದೆ.

ಇದನ್ನೂ ಓದಿ: ಭಾರ್ತಿ ಹೆಕ್ಸಾಕಾಮ್ ಭರ್ಜರಿ ಬೆಲೆಗೆ ಷೇರು ಮಾರುಕಟ್ಟೆಗೆ ಸೇರ್ಪಡೆ; ಐಪಿಒ ಬೆಲೆ 570 ರೂ, ಲಿಸ್ಟಿಂಗ್ ಬೆಲೆ 755 ರೂ

ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್​ನ ಆದಾಯ 61,237 ಕೋಟಿ ರೂ ಇದೆ. ಇದರಲ್ಲಿ ನಿವ್ವಳ ಲಾಭ 12,434 ಕೋಟಿ ರೂ ಇದೆ. ಇದಕ್ಕೂ ಮುನ್ನ 10 ಬ್ರೋಕರೇಜ್ ಕಂಪನಿಗಳು ಟಿಸಿಎಸ್ ಆದಾಯದ ಬಗ್ಗೆ ಮಾಡಿದ ಅಂದಾಜಿನ ಸರಾಸರಿ ಪಡೆದರೆ ಕಂಪನಿ ಆದಾಯ 61,414 ಕೋಟಿ ಇರಬಹುದು, ನಿವ್ವಳ ಲಾಭ 11,902 ಕೋಟಿ ಇರುಬಹುದು ಎಂಬ ಅಂದಾಜಿತ್ತು. ಆದರೆ, ಈ ನಿರೀಕ್ಷೆಗಿಂತ ಹೆಚ್ಚೇ ನಿವ್ವಳ ಲಾಭ ಕಂಡಿದೆ.

ಕಳೆದ ವರ್ಷದ ಈ ಕ್ವಾರ್ಟರ್​ನಲ್ಲಿ ಅದು 11,392 ಕೋಟಿ ರೂ ನಿವ್ವಳ ಲಾಭ ಕಂಡಿತ್ತು.

ಪ್ರತೀ ಷೇರಿಗೆ 28 ರೂ ಡಿವಿಡೆಂಡ್ ಘೋಷಿಸಿದ ಟಿಸಿಎಸ್

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಕಂಪನಿ ಇದೇ ವೇಳೆ ತನ್ನ ಪ್ರತೀ ಷೇರಿಗೆ 28 ರೂ ಅಂತಿಮ ಲಾಭಾಂಶವನ್ನು ಘೋಷಿಸಿದೆ. ಈ ಹಿಂದೆ ಕಂಪನಿಯು 45 ರೂ ಡಿವಿಡೆಂಡ್ ನೀಡಿತ್ತು. ಇದರೊಂದಿಗೆ, 2023-24ರ ಹಣಕಾಸು ವರ್ಷದಲ್ಲಿ ಟಿಸಿಎಸ್​ನ ಒಂದು ಷೇರಿಗೆ ಒಟ್ಟು 73 ಲಾಭಾಂಶವನ್ನು ಷೇರುದಾರರು ಪಡೆಯಲಿದ್ದಾರೆ.

ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

ಟಿಸಿಎಸ್​ನ ಷೇರು ಬೆಲೆ ಇವತ್ತು ಶುಕ್ರವಾರದ ದಿನಾಂತ್ಯದಲ್ಲಿ 4,003.80 ರೂ ಹೊಂದಿದೆ. ಅಂದರೆ ಷೇರು ಮೊತ್ತಕ್ಕೆ ಒಂದು ವರ್ಷದಲ್ಲಿ ಶೇ. 1.8ರಷ್ಟು ಲಾಭಾಂಶ ಸಿಕ್ಕಂತಾಗುತ್ತದೆ. ಟಿಸಿಎಸ್ ಷೇರುಬೆಲೆ ಕಳೆದ ಒಂದು ವರ್ಷದ ಅಂತರದಲ್ಲಿ ಶೇ. 25ರಷ್ಟು ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ