Gautam Adani: ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತನಾದ ಏಷ್ಯಾದ ಮೊದಲ ವ್ಯಕ್ತಿ ಗೌತಮ್ ಅದಾನಿ

ಅದಾನಿ ಅವರ ಒಟ್ಟು ಸಂಪತ್ತು 137.4 ಶತಕೋಟಿ ಅಮೆರಿಕನ್ ಡಾಲರ್​ ಮೌಲ್ಯ ತಲುಪಿದೆ. ಅದಾನಿ ಅವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಮತ್ತು ಅಮೆಜಾನ್​ನ ಜೆಫ್ ಬೆಜೋಸ್​ ಅವರ ನಂತರದ ಸ್ಥಾನದಲ್ಲಿದ್ದಾರೆ.

Gautam Adani: ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತನಾದ ಏಷ್ಯಾದ ಮೊದಲ ವ್ಯಕ್ತಿ ಗೌತಮ್ ಅದಾನಿ
ಉದ್ಯಮಿ ಗೌತಮ್ ಅದಾನಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 30, 2022 | 12:05 PM

ಮುಂಬೈ: ಭಾರತದ ಖ್ಯಾತ ಉದ್ಯಮಿ ಹಾಗೂ ಅದಾನಿ ಗ್ರೂಪ್​ನ ಅಧ್ಯಕ್ಷ ಗೌತಮ್ ಅದಾನಿ (Gautam Adani) ಫ್ರಾನ್ಸ್​ನ​ ಬರ್ನಾರ್ಡ್ ಅರ್ನೌಲ್ಟ್​ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಶ್ರೀಮಂತನೆಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ‘ಬ್ಲೂಮ್​ಬರ್ಗ್​ ಬಿಲೇನಿಯರ್ಸ್​ ಇಂಡೆಕ್ಸ್​’ ಈ ವಿಷಯವನ್ನು ಬಹಿರಂಗಪಡಿಸಿದೆ. ಅದಾನಿ ಅವರ ಒಟ್ಟು ಸಂಪತ್ತು 137.4 ಶತಕೋಟಿ ಅಮೆರಿಕನ್ ಡಾಲರ್​ ಮೌಲ್ಯ ತಲುಪಿದೆ. ಇದು ಅರ್ನೌಲ್ಟ್​ ಕಂಪನಿಯ ಅಧ್ಯಕ್ಷ ಲೂಯಿಸ್ ವುಟ್ಟನ್ ಅವರ ಸಂಪತ್ತಿಗಿಂತಲೂ ಇದು ಹೆಚ್ಚು. ಅದಾನಿ ಅವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಮತ್ತು ಅಮೆಜಾನ್​ನ ಜೆಫ್ ಬೆಜೋಸ್​ ಅವರ ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾದ ಉದ್ಯಮಿ ಸ್ಥಾನ ಪಡೆದಿರುವುದು ಇದೇ ಮೊದಲು. ರಿಲಯನ್ಸ್​ನ ಮುಕೇಶ್​ ಅಂಬಾನಿ, ಚೀನಾದ ಜ್ಯಾಕ್ ಮಾ ಸಹ ಈ ಹಂತಕ್ಕೆ ತಲುಪಿರಲಿಲ್ಲ. ಈ ಪಟ್ಟಿಯಲ್ಲಿ ಅದಾನಿ ಅವರು 11ನೇ ಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿನ ಒಟ್ಟು ಮೌಲ್ಯವು 91.9 ಅಮೆರಿಕನ್ ಡಾಲರ್ ಇದೆ. ಈ ಸೂಚ್ಯಂಕವು ಪ್ರತಿದಿನ ವಿಶ್ವದ ಅತಿಶ್ರೀಮಂತ ವ್ಯಕ್ತಿಗಳನ್ನು ಘೋಷಿಸುತ್ತದೆ. ಪ್ರತಿ ಶತಕೋಟ್ಯಾಧೀಶರ ವ್ಯಕ್ತಿಚಿತ್ರಕ್ಕಾಗಿ ರೂಪಿಸಿರುವ ವಿಶೇಷ ವೆಬ್​ಪುಟಗಳಲ್ಲಿ ಮಾಹಿತಿಯನ್ನು ಅಪ್​ಡೇಟ್ ಮಾಡಲಾಗುತ್ತದೆ. ನ್ಯೂಯಾರ್ಕ್​ನಲ್ಲಿ ವಹಿವಾಟು ನಡೆಯುವ ಎಲ್ಲ ದಿನಗಳಲ್ಲಿಯೂ ಪ್ರೊಫೈಲ್ ಪುಟಗಳ ಮಾಹಿತಿಯನ್ನು ಪರಿಷ್ಕರಿಸಲಾಗುತ್ತದೆ.

ಎಲಾನ್ ಮಸ್ಕ್ ಹಾಗೂ ಜೆಫ್​ ಬೆಜೋಸ್ ಅವರ ನಿವ್ವಳ ಸಂಪತ್ತು ಪ್ರಸ್ತುತ ಕ್ರಮವಾಗಿ 251 ಶತಕೋಟಿ ಡಾಲರ್ ಹಾಗೂ 153 ಶತಕೋಟಿ ಡಾಲರ್ ಇದೆ. ಅದಾನಿ ಗ್ರೂಪ್ ಹಲವು ವರ್ಷಗಳಿಂದ ಕಲ್ಲಿದ್ದಲು ಹಾಗೂ ಬಂದರು ವಲಯದಲ್ಲಿ ಕಾರ್ಯಪ್ರವೃತ್ತವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ದತ್ತಾಂಶ ವಿಶ್ಲೇಷಣೆ, ಮಾಧ್ಯಮ ಮತ್ತು ಅಲ್ಯುಮಿನಿಯಂ ಸೇರಿದಂತೆ ಹಲವು ವಲಯಗಳಿಗೆ ವಹಿವಾಟು ವಿಸ್ತರಿಸಿತು. ಪ್ರಸ್ತುತ ಅದಾನಿ ಸಮೂಹವು ಭಾರತದಲ್ಲಿ ಖಾಸಗಿ ವಲಯದ ಅತಿದೊಡ್ಡ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣೆ ಕಂಪನಿಯಾಗಿದೆ. ಪರಿಸರ ಸ್ನೇಹಿ ಇಂಧನ ಕ್ಷೇತ್ರದಲ್ಲಿ 90 ಶತಕೋಟಿ ರೂಪಾಯಿ ತೊಡಗಿಸುವ ಪ್ರಸ್ತಾವ ಮುಂದಿಟ್ಟಿದ್ದು, ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಮೂಲಗಳ ಇಂಧನ ಉತ್ಪಾದಕ ಕಂಪನಿಯಾಗಿದೆ.

ಹಾಗೆಂದು ಅದಾನಿ ಸಮೂಹದ ಕಾರ್ಯನಿರ್ವಹಣೆಯಲ್ಲಿ ಎಲ್ಲವೂ ಸರಿಯಾಗಿದೆ ಎಂದೇನಿಲ್ಲ. ಅದಾನಿ ಗ್ರೂಪ್​ ಈಗಾಗಲೇ ಬಹುದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿದೆ. ತುಸು ಹೆಚ್ಚುಕಡಿಮೆಯಾದರೂ ಅದಾನಿ ಗ್ರೂಪ್​ ಸಾಲ ಮರುಪಾವತಿಗೆ ವಿಫಲವಾಗಬಹುದು ಎಂದು ಫಿಚ್​ ಗ್ರೂಪ್​ ಎಚ್ಚರಿಸಿತ್ತು. ಅದಾನಿ ಗ್ರೂಪ್​ ಕಂಪನಿಯ ಷೇರುಗಳ ಮೌಲ್ಯವೂ ಸಹ ಅಸಹಜವಾಗಿ ಏರಿಕೆ ಕಂಡಿದೆ. 2020ರಿಂದೀಚೆಗೆ ಅದಾನಿ ಸಮೂಹದ ಷೇರುಗಳ ಮೌಲ್ಯ 1,000 ಪಟ್ಟು ಹೆಚ್ಚಾಗಿದೆ. ಆದಾಯದ 750 ಹೆಚ್ಚಿನ ಮೊತ್ತಕ್ಕೆ ಕಂಪನಿಯ ಮೌಲ್ಯ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿರುವ ದೀರ್ಘಾವಧಿ ಗುರಿಗಳ ಕ್ಷೇತ್ರಗಳು ಮತ್ತು ವಲಯಗಳಲಲ್ಲಿಯೂ ಅದಾನಿ ಗ್ರೂಪ್ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅದಾನಿ ಗ್ರೂಪ್​ ದಾನ ಮತ್ತು ದತ್ತಿಯನ್ನೂ ಹೆಚ್ಚಿಸಿದೆ. ಗೌತಮ್ ಅದಾನಿ ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬದಂದು 770 ಕೋಟಿ ರೂಪಾಯಿಯನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಡುವುದಾಗಿ ಹೇಳಿದ್ದರು. ಆದರೆ ಅದರ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಭಾರತದಲ್ಲಿ ರಿಲಯನ್ಸ್ ಮತ್ತು ಟಾಟಾ ಗ್ರೂಪ್​ನ ನಂತರದ ಸ್ಥಾನದಲ್ಲಿ ಅದಾನಿ ಸಮೂಹದವು ಷೇರುಪೇಟೆಯಲ್ಲಿ ಪಾಲು ಪಡೆದಿದೆ. ಮುಂದಿನ ದಿನಗಳಲ್ಲಿ ಟೆಲಿಕಾಂ, ಹೈಡ್ರೊಜನ್ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ಆದಾಯ ಗಳಿಸಲು ಅದಾನಿ ಗ್ರೂಪ್ ಯೋಜನೆ ರೂಪಿಸಿಕೊಂಡಿದೆ. ಅದಾನಿ ಎಂಟರ್​ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್ ಹಾಗೂ ಅದಾನಿ ಟ್ರಾನ್ಸ್​ಮಿಷನ್ ಕಂಪನಿಗಳು ಭಾರತದ ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿವೆ.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ