Gautam Adani: 2021ರಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಾಯಿತು ಅದಾನಿ ಆಸ್ತಿ; ಇದು ಅಪಾಯದ ಅದೃಷ್ಟ ಎನ್ನುತ್ತಾರೆ ವಿಶ್ಲೇಷಕರು

Gautam Adani: 2021ರಲ್ಲಿ 3 ಲಕ್ಷ ಕೋಟಿ ರೂ.ಗೂ ಹೆಚ್ಚಾಯಿತು ಅದಾನಿ ಆಸ್ತಿ; ಇದು ಅಪಾಯದ ಅದೃಷ್ಟ ಎನ್ನುತ್ತಾರೆ ವಿಶ್ಲೇಷಕರು
ಗೌತಮ್ ಅದಾನಿ (ಸಂಗ್ರಹ ಚಿತ್ರ)

ಏಷ್ಯಾದ ಎರಡನೇ ಅತಿ ಶ್ರೀಮಂತ ಗೌತಮ್ ಅದಾನಿ ಆಸ್ತಿ 2021ರಲ್ಲಿ ಇಲ್ಲಿಯ ತನಕ 3,14,223 ಕೋಟಿ ರೂಪಾಯಿಗೂ ಹೆಚ್ಚು ಮೇಲೇರಿದೆ. ಈ ಬಗ್ಗೆ ಆಸಕ್ತಿಕರ ಸಂಗತಿ ಇಲ್ಲಿದೆ.

TV9kannada Web Team

| Edited By: Srinivas Mata

Jun 10, 2021 | 5:16 PM

2021ರಲ್ಲಿ ಇಲ್ಲಿಯ ತನಕ ಈ ಸಿರಿವಂತನ ಆಸ್ತಿಯಲ್ಲಿ 4300 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಆ ವ್ಯಕ್ತಿಯ ಹೆಸರು ಗೌತಮ್ ಅದಾನಿ. ಅವರ ಒಡೆತನದ ಕಂಪೆನಿಗಳ ಷೇರು ಮೌಲ್ಯದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಗಿರುವ ಬೆಳವಣಿಗೆ ಇದು. ಗೌತಮ್ ಈಗ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿ. ಆದರೆ ಕೆಲವು ವಿಶ್ಲೇಷಕರು ಅಭಿಪ್ರಾಯ ಪಡುವಂತೆ, ಈ ಲಾಭಗಳು ತುಂಬ ಅಪಾಯದಿಂದ ಕೂಡಿವೆ. ನಿಮಗೆ ಗೊತ್ತಿರಲಿ, ಈ ವರ್ಷದ ಐದೂ ಚಿಲ್ಲರೆ ತಿಂಗಳಲ್ಲಿ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ ಗೌತಮ್ ಅದಾನಿ ಹೆಚ್ಚಿಸಿಕೊಂಡಿರುವ ಆಸ್ತಿ ಮೊತ್ತ 3,14,223 ಕೋಟಿಗೂ ಹೆಚ್ಚು. ತಮಿಳುನಾಡಿನ ಒಂದು ವರ್ಷದ ಬಜೆಟ್​ಗಿಂತ ಹೆಚ್ಚು ಅಂದರೆ ಇನ್ನೂ ಸ್ಪಷ್ಟವಾಗಿ ಅರ್ಥವಾಗಬಹುದು. ಸದ್ಯಕ್ಕೆ ನಿವ್ವಳ ಆಸ್ತಿ ಮೌಲ್ಯ 7670 ಕೋಟಿ ಅಮೆರಿಕನ್ ಡಾಲರ್ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ 5,60,486 ಕೋಟಿಗೂ ಜಾಸ್ತಿ ಆಗುತ್ತದೆ. ಒಂದೇ ಒಂದು ರೂಪಾಯಿ ಆದಾಯ ಇಲ್ಲದಂತೆ ಕರ್ನಾಟಕ ಹಾಗೂ ತಮಿಳುನಾಡು ಈ ಎರಡೂ ರಾಜ್ಯಗಳನ್ನು ಒಂದಿಡೀ ವರ್ಷ ನಡೆಸುವಷ್ಟು ಆಸ್ತಿ ಮೊತ್ತ ಇದಾಯಿತು.

ಈ ವರ್ಷ ಗೌತಮ್ ಅದಾನಿ ಆಸ್ತಿಯಲ್ಲಿ ಇಷ್ಟೆಲ್ಲ ಜಾಸ್ತಿ ಆಗಲು ಕಾರಣವಾಗಿದ್ದು ಅವರ ಒಡೆತನದ ಕಂಪೆನಿಯಲ್ಲಿನ ಷೇರು ಮೌಲ್ಯ. ಅದಾನಿ ಟೋಟಲ್ ಗ್ಯಾಸ್ ಲಿ. ಷೇರಿನ ಬೆಲೆ ಶೇ 330ರಷ್ಟು ಏರಿದರೆ, ಅದಾನಿ ಎಂಟರ್​ಪ್ರೈಸಸ್ ಶೇ 235, ಅದಾನಿ ಟ್ರಾನ್ಸ್​ಮಿಷನ್ ಶೇ 263ರಷ್ಟು ಏರಿಕೆ ಕಂಡಿದೆ. ಅದಾನಿ ಸಮೂಹದ ಕಂಪೆನಿಗಳಲ್ಲಿ ಈ ಮೂರು ಕಂಪೆನಿಗಳ ಷೇರು ಭರ್ಜರಿ ಗಳಿಕೆ ಕಂಡಿವೆ. ಅತಿ ದೊಡ್ಡ ವಿದೇಶಿ ಹೂಡಿಕೆದಾರರಲ್ಲಿ ಕೆಲವೇ ಮಾರಿಷಿಯಸ್ ಮೂಲದ ಫಂಡ್​ಗಳು ತಮ್ಮ ಬಳಿಯ ಈ ಶೇ 95ಕ್ಕೂ ಹೆಚ್ಚು ಆಸ್ತಿಯನ್ನು ಈ ಮೂರು ಕಂಪೆನಿಗಳ ಮೇಲೆ ಹೂಡಿ, ಷೇರಿನ ಪಾಲನ್ನು ಹೊಂದಿವೆ. ಇಷ್ಟು ದೊಡ್ಡ ಮಟ್ಟದ ಪಾಲು ಹೊಂದಿರುವುದು ಮತ್ತು ಜತೆಗೆ ದೇಶೀಯ ಮಾಲೀಕತ್ವ ಬಹಳ ಕಡಿಮೆ ಇರುವುದರಿಂದ ದೊಡ್ಡದೊಡ್ಡ ಹೂಡಿಕೆದಾರರು ಅದಾನಿ ಷೇರುಗಳ ಮೇಲಿನ ಹೂಡಿಕೆಯನ್ನು ತಪ್ಪಿಸುತ್ತಿದ್ದಾರೆ. ಇದರಿಂದ ಅಮರ್ಪಕ ಅಪಾಯದ ರಿವಾರ್ಡ್ ಸೃಷ್ಟಿಸುತ್ತಿವೆ. ​

2021ರಲ್ಲಿ ಅದಾನಿ ಆಸ್ತಿಯಲ್ಲಿ ಕಂಡಿರುವ ಏರಿಕೆಯ ದೌರ್ಬಲ್ಯವನ್ನು ವಿಶ್ಲೇಷಕರು ಬೊಟ್ಟು ಮಾಡಿ ತೋರಿಸುತ್ತಾರೆ. ವಾರೆನ್ ಬಫೆಟ್ ಹಾಗೂ ಮುಕೇಶ್ ಅಂಬಾನಿಗಿಂತ ಹೆಚ್ಚಿನ ಗಳಿಕೆಯನ್ನು ಅದಾನಿ ಕಂಡಿದ್ದಾರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಅದಾನಿ ಸಮೂಹದ ಪ್ರತಿನಿಧಿ ನಿರಾಕರಿಸಿದ್ದಾರೆ. ವಿದೇಶೀ ಫಂಡ್​ಗಳು ದೊಡ್ಡ ಪ್ರಮಾಣದಲ್ಲಿ ಅದಾನಿ ಷೇರುಗಳನ್ನು ಹೊಂದಿದ್ದು, ಸಾರ್ವಜನಿಕರ ವಹಿವಾಟು ಕಡಿಮೆ ಇದೆ. ಇದರಿಂದ ಷೇರುಗಳಲ್ಲಿ ಏರಿಳಿತ ಕಂಡಿಲ್ಲ ಎಂಬುದು ವಿಶ್ಲೇಷಕರ ಅಭಿಮತ. ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್, ಎಪಿಎಂಸ್ ಇನ್ವೆಸ್ಟ್​ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಅಲ್ಬುಲಾ ಇನ್ವೆಸ್ಟ್​ಮೆಂಟ್ ಫಂಡ್, ಎಲ್​ಟಿಎಸ್ ಇನ್ವೆಸ್ಟ್​ಮೆಂಟ್ ಮತ್ತು ಏಷ್ಯಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಷನ್ ತಮ್ಮ ಒಟ್ಟು ಆಸ್ತಿಯ ಶೇ 95ಕ್ಕೂ ಹೆಚ್ಚು ಭಾಗವನ್ನು ಅದಾನಿ ಸಮೂಹದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿವೆ ಎಂದು ಸಮಗ್ರವಾದ ಲೆಕ್ಕಾಚಾರ ಮುಂದಿಟ್ಟಿದೆ ಬ್ಲೂಮ್​ಬರ್ಗ್ ಇಂಟೆಲಿಜೆನ್ಸ್.

ಬಂದರಿನಿಂದ ವಿದ್ಯುಚ್ಛಕ್ತಿ ತನಕ ಅದಾನಿ ಸಮೂಹದಲ್ಲಿ ಎಲ್ಲ ಕಂಪೆನಿಗಳಿವೆ. ಕಳೆದ ತಿಂಗಳು ಎಂಎಸ್​ಸಿಐ ಇಂಕ್​ನಿಂದ ಅದಾನಿಯ ಮೂರು ಸಂಸ್ಥೆಗಳನ್ನು ಭಾರತದ ಬೆಂಚ್​ಮಾರ್ಕ್ ಸೂಚ್ಯಂಕಕ್ಕೆ ಸೇರ್ಪಡೆ ಮಾಡಲಾಯಿತು. ಆ ಮೂಲಕ ಸಮೂಹದ ಹೆಜ್ಜೆ ಗುರುತು ಐದಕ್ಕೆ ಏರಿತು. ಇದರೊಂದಿಗೆ ಯಾರು ಸೂಚ್ಯಂಕವನ್ನು ಅನುಸರಿಸುತ್ತಾರೋ ಅಂಥ ಹೂಡಿಕೆದಾರರು ಖರೀದಿ ಮಾಡುವುದು ಕಡ್ಡಾಯ ಅನ್ನೋ ಹಾಗೆ ಮಾಡಿದೆ. ಇನ್ನು ಅದಾನಿ ಷೇರುಗಳು ಶೇ 150ರಿಂದ ಶೇ 200ರಷ್ಟು 200 ದಿನಗಳ ಮೇಲ್ಪಟ್ಟ ಸರಾಸರಿಯಲ್ಲಿವೆ. ಇದಿನ್ನೂ ವಿಸ್ತರಣೆ ಆಗುವಂತೆ ಕಾಣುತ್ತಿದೆ ಎಂದು ಅಭಿಪ್ರಾಯ ಪಡಲಾಗಿದೆ. ಈ ವರ್ಷ ಗರಿಷ್ಠ ಮಟ್ಟದಲ್ಲಿದ್ದಾಗ ಟೆಸ್ಲಾ ಕಂಪೆನಿಯ ಷೇರು 200- ದಿನದ ಸರಾಸರಿಯಲ್ಲಿ ಶೇ 126 ಇತ್ತು.

ಇದನ್ನೂ ಓದಿ: Gautam Adani: ಏಷ್ಯಾದ ಎರಡನೇ ಅತಿ ದೊಡ್ಡ ಸಿರಿವಂತ ಸಿಂಹಾಸನದಲ್ಲಿ ಈಗ ಗೌತಮ್ ಅದಾನಿ; ಒಟ್ಟು ಆಸ್ತಿ 4.85 ಲಕ್ಷ ಕೋಟಿ ರೂಪಾಯಿ

(Asia’s second richest Gautam Adani wealth increased more thank Rs 3 lakh crore in 2021 till June. Analysts says, there will be risk behind this fortune)

Follow us on

Related Stories

Most Read Stories

Click on your DTH Provider to Add TV9 Kannada