AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interest on savings account: ಈ ಮೂರು ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆಗೇ ಎಫ್​.ಡಿ.ಗಿಂತ ಉತ್ತಮ ಬಡ್ಡಿ ಸಿಗುತ್ತೆ

ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್) ಮೇಲೆ ಎಫ್​ಡಿಗಿಂತ (ಫಿಕ್ಸೆಡ್ ಡೆಪಾಸಿಟ್​) ಉತ್ತಮ ಬಡ್ಡಿ ದರ ನೀಡುವ ಮೂರು ಬ್ಯಾಂಕ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

Interest on savings account: ಈ ಮೂರು ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆಗೇ ಎಫ್​.ಡಿ.ಗಿಂತ ಉತ್ತಮ ಬಡ್ಡಿ ಸಿಗುತ್ತೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Jun 10, 2021 | 11:37 AM

Share

ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್) ಮೇಲಿನ ಬಡ್ಡಿ ದರದ ಬಗ್ಗೆ ಬಹಳ ಮುಖ್ಯವಾದ ಮಾಹಿತಿ ಇಲ್ಲಿದೆ. ಉಳಿತಾಯ ಖಾತೆಯಲ್ಲಿ ಹಣ ಇದ್ದಲ್ಲಿ ತುರ್ತು ಸಂದರ್ಭಕ್ಕೆ ಕೂಡ ಸಲೀಸಾಗಿ ದೊರೆಯುತ್ತದೆ. ಜತೆಗೆ ಸುರಕ್ಷಿತವಾಗಿಯೂ ಇರುತ್ತದೆ. ಇದು ಹಣ ಉಳಿತಾಯಕ್ಕೆ ಮಾತ್ರವಲ್ಲ, ಹೂಡಿಕೆದಾರರಿಗೂ ಉತ್ತಮ ಆಯ್ಕೆಯಾಗಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಯಾರಿಗೆ ಅಲ್ಪಾವಧಿಯಲ್ಲಿ ಹೂಡಿಕೆ ಆಯ್ಕೆಗಳು ಬೇಕು ಎನಿಸಿದಲ್ಲಿ ಉಳಿತಾಯ ಖಾತೆಯನ್ನೇ ಪರಿಗಣಿಸುವುದಕ್ಕೆ ಅಡ್ಡಿ ಇಲ್ಲ. ಯಾವ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಗೆ ಹೆಚ್ಚಿನ ಬಡ್ಡಿದರ ನೀಡುತ್ತಾರೋ ಅಂಥ ಕಡೆಗೆ ಹಣವನ್ನು ಇಡಬಹುದು. ಅಂದ ಹಾಗೆ ಇಲ್ಲಿ ಮೂರು ಬ್ಯಾಂಕ್​ಗಳ ಬಗ್ಗೆ ಮಾಹಿತಿ ಇದ್ದು, ಇವು ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದರ ನೀಡುತ್ತವೆ.

ಆರ್​ಬಿಎಲ್ ಬ್ಯಾಂಕ್ ಸೇವಿಂಗ್ಸ್ ಅಕೌಂಟ್ ಬಡ್ಡಿ ದರ ಭಾರತೀಯ ಬ್ಯಾಂಕ್​ಗಳಲ್ಲಿ ಆರ್​ಬಿಎಲ್​ ಬ್ಯಾಂಕ್​ನಿಂದ ಉಳಿತಾಯ ಖಾತೆಗೆ ಅತಿ ಹೆಚ್ಚಿನ ಬಡ್ಡಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಬ್ಯಾಂಕ್​ನ ಅಧಿಕೃತ ವೆಬ್​ಸೈಟ್​ ಪ್ರಕಾರ- rblbank.comನಲ್ಲಿ ಆ ಬಗ್ಗೆ ಮಾಹಿತಿ ಇದ್ದು, ಶೇ 4.5ರಿಂದ ಶೇ 6.25ರಷ್ಟು ಬಡ್ಡಿ ದರ ಇದೆ. ದಿನದ ಬ್ಯಾಲೆನ್ಸ್ ಆಧಾರದಲ್ಲಿ 1 ಲಕ್ಷ ರೂಪಾಯಿ ತನಕ, ಆರ್​ಬಿಎಲ್ ಬ್ಯಾಂಕ್ ಉಳಿತಾಯ ಬಡ್ಡಿ ದರ ಶೇ 4.5ರಷ್ಟಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟು 10 ಲಕ್ಷ ರೂಪಾಯಿ ತನಕ ಶೇ 6ರ ಬಡ್ಡಿ ದರ ಇದೆ. ದಿನದ ಬ್ಯಾಲೆನ್ಸ್ ಲೆಕ್ಕದಲ್ಲಿ 10 ಲಕ್ಷ ಮೇಲ್ಪಟ್ಟು ಮೊತ್ತಕ್ಕೆ ವಾರ್ಷಿಕ ಬಡ್ಡಿ ದರ ಶೇ 6.25 ಇದೆ.

ಬಂಧನ್ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ ಬಂಧನ್ ಬ್ಯಾಂಕ್​ನಿಂದ ಉಳಿತಾಯ ಖಾತೆ ಬಡ್ಡಿ ದರ ಶೇ 3ರಿಂದ ಶೇ 6ರಷ್ಟು ನೀಡಲಾಗುತ್ತಿದೆ. ಇದು ದಿನದ ಬ್ಯಾಲೆನ್ಸ್ ಮೇಲೆ ಆಧಾರವಾಗಿರುತ್ತದೆ. ಬಂಧನ್ ಬ್ಯಾಂಕ್ ಅಧಿಕೃತ ವೆಬ್​ಸೈಟ್ bandhanbank.comನಲ್ಲಿ ಇರುವ ಮಾಹಿತಿಯಂತೆ, ದಿನದ ಬ್ಯಾಲೆನ್ಸ್ ರೂ. 1 ಲಕ್ಷ ರೂಪಾಯಿಯೊಳಗೆ ಶೇ 3ರಷ್ಟು ಬಡ್ಡಿ ದರ ನೀಡುತ್ತಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟು 10 ಲಕ್ಷ ರೂಪಾಯಿಯೊಳಗಿನ ಬ್ಯಾಲೆನ್ಸ್​ಗೆ ಶೇ 4ರ ಬಡ್ಡಿ ದರ ದೊರೆಯುತ್ತದೆ. 10 ಲಕ್ಷ ರೂಪಾಯಿ ಮೇಲ್ಪಟ್ಟ ಬ್ಯಾಲೆನ್ಸ್​ಗೆ ಶೇ 6ರಷ್ಟು ಬಡ್ಡಿ ದರ ನೀಡುತ್ತದೆ.

ಯೆಸ್ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರ ಬ್ಯಾಂಕ್​ನ ಅಧಿಕೃತ ವೆಬ್​ಸೈಟ್ yesbank.in ಮಾಹಿತಿ ಪ್ರಕಾರ, ಉಳಿತಾಯ ಖಾತೆಗೆ ಶೇ 4ರಿಂದ ಶೇ 5.5ರಷ್ಟು ಬಡ್ಡಿ ದರ ದೊರೆಯುತ್ತದೆ. 1 ಲಕ್ಷ ರೂಪಾಯಿ ತನಕದ ದಿನದ ಬ್ಯಾಲೆನ್ಸ್ ಆಧಾರದಲ್ಲಿ ಶೇ 4ರ ಬಡ್ಡಿ ದರ ನೀಡುತ್ತಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟು 10 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ ವಾರ್ಷಿಕ ಬಡ್ಡಿ ದರ ಶೇ 4.75 ಇದೆ. ಇನ್ನು ದಿನದ ಆಧಾರದಲ್ಲಿ 1 ಲಕ್ಷದಿಂದ 100 ಕೋಟಿ ರೂಪಾಯಿಯೊಳಗಿನ ಬ್ಯಾಲೆನ್ಸ್​ಗೆ ಶೇ 5.5ರ ಬಡ್ಡಿ ದರ ನೀಡಲಾಗುತ್ತದೆ.

ಇನ್ನು ತಮ್ಮ ಮೊತ್ತವನ್ನು ಯಾವ ಬ್ಯಾಂಕ್​ನಲ್ಲಿ ಇಡಬೇಕು ಎಂಬುದನ್ನು ಠೇವಣಿದಾರರೇ ನಿರ್ಧರಿಸಬೇಕು.

ಇದನ್ನೂ ಓದಿ: ಕೊವಿಡ್ 19 ಲಸಿಕೆ ಹಾಕಿಸಿಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಎಫ್​ಡಿ ಮೇಲೆ ಹೆಚ್ಚುವರಿ ಬಡ್ಡಿ

(These 3 banks offering interest on savings bank account more than fixed deposits)