AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಡಿಪಿ ಬೆಳವಣಿಗೆ ಈ ವರ್ಷ ಶೇ. 6.5ರಿಂದ 7 ಸಾಧ್ಯತೆ; ಮೊದಲ ಕ್ವಾರ್ಟರ್​ನಲ್ಲಿ ಶೇ. 6ಕ್ಕೆ ಸೀಮಿತ?

GDP growth projection of India for 2025FY: ಬಜೆಟ್ ವೇಳೆ ಮಂಡನೆಯಾದ ಆರ್ಥಿಕ ಸಮೀಕ್ಷೆ ಭಾರತದ ಈ ವರ್ಷದ ಜಿಡಿಪಿ ದರ ಶೇ. 6.5ರಿಂದ ಶೇ. 7 ಇರಬಹುದು ಎಂದು ಅಂದಾಜಿಸಿತ್ತು. ಇದೀಗ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಜುಲೈನ ವರದಿಯಲ್ಲಿ ಇದೇ ಅಂದಾಜನ್ನು ಪುರಸ್ಕರಿಸಿದೆ. ಇನ್ನು, ರೇಟಿಂಗ್ ಏಜೆನ್ಸಿಯಾದ ಐಸಿಆರ್​ಎ ಈ ವರ್ಷದ ಜಿಡಿಪಿ ದರ ಶೇ. 6.8ರಷ್ಟು ಇರಬಹುದು ಎಂದು ಹೇಳಿದೆ.

ಜಿಡಿಪಿ ಬೆಳವಣಿಗೆ ಈ ವರ್ಷ ಶೇ. 6.5ರಿಂದ 7 ಸಾಧ್ಯತೆ; ಮೊದಲ ಕ್ವಾರ್ಟರ್​ನಲ್ಲಿ ಶೇ. 6ಕ್ಕೆ ಸೀಮಿತ?
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2024 | 6:36 PM

Share

ನವದೆಹಲಿ, ಆಗಸ್ಟ್ 22: ಭಾರತದ ಆರ್ಥಿಕತೆ ಸ್ಥಿರವಾಗಿ ಮುನ್ನಡೆಯುತ್ತಿದೆ. ಮುಂಗಾರು ಮಳೆ ತುಸು ಆಚೆ ಈಚೆ ಆಗಬಹುದಾದರೂ ಒಟ್ಟಾರೆ ಆರ್ಥಿಕತೆ ಸುಗಮವಾಗಿ ಸಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ (2024-25) ಶೇ. 6.5ರಿಂದ 7ರಷ್ಟು ಜಿಡಿಪಿ ಬೆಳೆಯಬಹುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾದ ಅಂದಾಜು ನಿಜವಾಗಬಹುದು ಎಂದು ಹಣಕಾಸು ಸಚಿವಾಲಯ ತನ್ನ ಜುಲೈನ ಮಾಸಿಕ ಆರ್ಥಿಕ ಪರಾಮರ್ಶೆ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಭಾರತ ಹಿಂದಿನ ಹಣಕಾಸು ವರ್ಷದಲ್ಲಿ (2023-24) ಶೇ. 8.2ರಷ್ಟು ಜಿಡಿಪಿ ಬೆಳವಣಿಗೆ ಹೊಂದಿತ್ತು. ಅದಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಬೆಳವಣಿಗೆ ತುಸು ಮಂದಗೊಳ್ಳಬಹುದು.

ಆದಾಗ್ಯೂ ಬೇರೆ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತದ ಓಟ ವೇಗವಾಗಿ ಇದೆ. ಹಣಕಾಸು ಸಚಿವಾಲಯವು ಉತ್ಪಾದನಾ ವಲಯದ ಸಾಧನೆ ಮತ್ತು ಸರ್ವಿಸ್ ಸೆಕ್ಟರ್​ನ ಮುನ್ನಡೆಯನ್ನು ಉಲ್ಲೇಖಿಸಿ ಆರ್ಥಿಕ ವೃದ್ಧಿ ಬಗ್ಗೆ ಆಶಾದಾಯಕವಾಗಿದೆ.

ಇದನ್ನೂ ಓದಿ: ತನಿಖಾ ಸಂಸ್ಥೆಗಳ ಉಪಟಳ; ಭಾರತದಿಂದ ಕಾಲ್ಕಿತ್ತು ಸಿಂಗಾಪುರ, ದುಬೈಗೆ ಹೋಗುತ್ತಿರುವ ಉದ್ಯಮಿಗಳು: ರುಚಿರ್ ಶರ್ಮಾ

ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ (ಏಪ್ರಿಲ್​ನಿಂದ ಜುಲೈವರೆಗೆ) ಸಂಗ್ರಹವಾದ ಜಿಎಸ್​ಟಿ ಮೊತ್ತವು ದೇಶದಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಿರುವುದನ್ನು ಮತ್ತು ಟ್ಯಾಕ್ಸ್ ಬೇಸ್ ವಿಸ್ತರಣೆ ಆಗಿರುವುದನ್ನು ಸೂಚಿಸುತ್ತದೆ ಎಂದು ಸಚಿವಾಲಯವು ತನ್ನ ವರದಿಯಲ್ಲಿ ಹೇಳಿದೆ.

ಮೊದಲ ಕ್ವಾರ್ಟರ್​ನಲ್ಲಿ ಶೇ. 6ರ ಜಿಡಿಪಿ ದರ: ಐಸಿಆರ್​ಎ ಅಂದಾಜು

ಇದೇ ವೇಳೆ ರೇಟಿಂಗ್ ಏಜೆನ್ಸಿಯಾದ ಐಸಿಆರ್​ಎ ಪ್ರಕಾರ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ (2024ರ ಎಪ್ರಿಲ್​ನಿಂದ ಜೂನ್) ಭಾರತದ ಆರ್ಥಿಕ ಬೆಳವಣಿಗೆ ಶೇ. 6ಕ್ಕೆ ಸೀಮಿತವಾಗಬಹುದು. ಇದು ಕಳೆದ ಆರು ಕ್ವಾರ್ಟರ್​ಗಳಲ್ಲೇ ಭಾರತ ಕಾಣಲಿರುವ ಅತ್ಯಂತ ಕಡಿಮೆ ಬೆಳವಣಿಗೆ ಆಗುತ್ತದೆ.

ಸರ್ಕಾರದಿಂದ ಬಂಡವಾಳ ವೆಚ್ಚ ಕಡಿಮೆ ಆಗಿರುವುದು, ನಗರ ಭಾಗದ ಗ್ರಾಹಕ ಬೇಡಿಕೆ ಇಳಿಮುಖವಾಗಿರುವುದು ಈ ಮಂದ ಬೆಳವಣಿಗೆಗೆ ಕಾರಣವಾಗಬಹುದು ಎಂದು ಐಸಿಆರ್​ಎ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಪೇಟಿಎಂನ ಎಂಟರ್​ಟೈನ್ಮೆಂಟ್ ಟಿಕೆಟ್ ಬಿಸಿನೆಸ್ ಜೊಮಾಟೊಗೆ ಮಾರಲು ನಿರ್ಧಾರ; 2,048 ಕೋಟಿ ರೂಗೆ ಡೀಲ್

ಆದರೆ, ಇಡೀ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.8ರಷ್ಟು ಇರಬಹುದು ಎಂದು ಐಸಿಆರ್​ಎ ಹೇಳಿರುವುದು ಗಮನಾರ್ಹ. ಇದು ಆರ್ಥಿಕ ಸಮೀಕ್ಷೆ ಮತ್ತು ಹಣಕಾಸು ಸಚಿವಾಲಯ ಮಾಡಿರುವ ಅಂದಾಜಿನ ವ್ಯಾಪ್ತಿಯಲ್ಲೇ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?