ಅತ್ಯಂತ ಕಡಿಮೆ ಅವಧಿಯಲ್ಲಿಯೇ ಹಾಲ್ಮಾರ್ಕಿಂಗ್ ಯೋಜನೆಯು ಭಾರೀ ಯಶಸ್ಸು ಕಂಡಿದೆ. ಈಗಾಗಲೇ 1 ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್ಮಾರ್ಕ್ ಹಾಕಲಾಗಿದೆ. 90,000ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ನೋಂದಾವಣಿ ಮಾಡಿಕೊಂಡಿದ್ದಾರೆ. ಆಭರಣ ವ್ಯಾಪಾರಿಗಳ ಬೆಂಬಲ ಮತ್ತು ಸಹಕಾರದಿಂದ ಈ ಯೋಜನೆ ಯಶಸ್ಸುಗಳಿಸಲು ಸಾಧ್ಯಯವಾಯಿತು ಎಂದು ಭಾರತದಲ್ಲಿ ಹಾಲ್ಮಾರ್ಕಿಂಗ್ ಪ್ರಗತಿಯ ಕುರಿತಾದ ಪ್ರತಿಕಾಗೋಷ್ಠಿಯಲ್ಲಿ ಬಿಐಎಸ್ ಮಹಾನಿರ್ದೇಶಕರು ಹೇಳಿದ್ದಾರೆ.
ನೋಂದಾಯಿತ ಆಭರಣಕಾರರ ಸಂಖ್ಯೆ 91,603 ಕ್ಕೂ ಹೆಚ್ಚಾಗಿದೆ. 2021 ಜುಲೈ 1ರಿಂದ ಆಗಸ್ಟ್ 20ರವರೆಗೆ 1ಕೋಟಿ 17 ಲಕ್ಷ ಆಭರಣಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 1 ಕೋಟಿಗೂ 2 ಲಕ್ಷ ಆಭರಣಗಳಿಗೆ ಹಾಲ್ಮಾರ್ಕ್ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹಾಲ್ಮಾರ್ಕಿಂಗ್ ಹಾಕುವ ವೇಗದಲ್ಲಿ ದಿನ ಸಾಗುತ್ತಿದ್ದಂತೆಯೇ ಹೆಚ್ಚಳ ಕಂಡು ಬಂದಿದೆ. ಕಳೆದ ಜುಲೈ 1ರಿಂದ 15ರವರೆಗೆ 14.28 ಲಕ್ಷ ಆಭರಣಗಳಿಗೆ ಹಾಲ್ಮಾರ್ಕ್ ಮಾಡಲಾಗಿದೆ. ಬಳಿಕ ಆಗಸ್ಟ್ 1ರಿಂದ 15ರ ಅವಧಿಯಲ್ಲಿ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಸಂಖ್ಯೆಯಲ್ಲಿ 41.81 ಲಕ್ಷಕ್ಕೆ ಏರಿಕೆ ಕಂಡು ಬಂದಿದೆ. ಆಗಸ್ಟ್ 20ನೇ ತಾರೀಕಿನಂದು ಒಂದೇ ದಿನದಲ್ಲಿ 3 ಲಕ್ಷ 90 ಸಾವಿರ ಆಭರಣಗಳನ್ನು ಹಾಲ್ಮಾರ್ಕ್ ಮಾಡಲಾಗಿದೆ. ಇದೇ ರೀತಿ ಸಾಗಿದರೆ ಒಂದು ವರ್ಷದಲ್ಲಿ 10 ಕೋಟಿ ಆಭರಣಗಳನ್ನು ಹಾಲ್ಮಾರ್ಕ್ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅವರು ಮಾತನಾಡಿದ್ದಾರೆ.
ಆಭರಣದ ಉದ್ಯಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು
ಎಎಚ್ಸಿ ಹೊಂದಿರುವ 256 ಜಿಲ್ಲೆಗಳಲ್ಲಿ ಮಾತ್ರ ಹಾಲ್ಮಾರ್ಕ್ ಕಡ್ಡಾಯಗೊಳಿಸಲಾಗಿದೆ
ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡದಲಾಗಿದೆ
ಹಾಲ್ಮಾರ್ಕಿಂಗ್ಗೆ 20, 23 ಮತ್ತು 24 ಕ್ಯಾರೆಟ್ ಚಿನ್ನದ ಆಭರಣಗಳನ್ನು ಅನುಮತಿಸಲಾಗಿದೆ
ಭಾರತೀಯ ಮಾನದಂಡವನ್ನು ತಿದ್ದುಪಡಿ ಮಾಡಲಾಗಿದ್ದು, ಒಂದೇ ರೀತಿಯ ಶುದ್ಧತೆಯ ಸಣ್ಣ ವಿಶ್ರಣಗಳಿಗೂ ಸಹ ಹಾಲ್ಮಾರ್ಕಿಂಗ್ ಅನುಮತಿಸುತ್ತದೆ
ಆಭರಣ ವ್ಯಾಪಾರಿಗಳು ಬಿಐಎಸ್ ಪೋರ್ಟಲ್ನಲ್ಲಿ ಮಾರಾಟದ ವಿವರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಎಂಬ ತಪ್ಪು ಮಾಹಿತಿಯ ಕುರಿತಾಗಿ ಸ್ಪಷ್ಟಪಡಿಸಿ ಬಿಐಎಸ್ ಮಹಾ ನಿರ್ದೇಶಕರು. ಆಭರಣ ವ್ಯಾಪಾರಿಗಳು ಅಂತಹ ಯಾವುದೇ ವಿವರ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಚಿನ್ನದ ಗುಣಮಟ್ಟವನ್ನು ಯಂತ್ರದ ಸಹಾಯದಿಂದ ಅಳೆದು ಅದಕ್ಕೆ ಪ್ರಮಾಣ ಪತ್ರವನ್ನು ನೀಡುವುದಕ್ಕೆ ಹಾಲ್ಮಾರ್ಕಿಂಗ್ ಎನ್ನಲಾಗುತ್ತದೆ. ಉದಾಹರಣೆಗೆ ನೀವು ಒಂದು ಬಂಗಾರದ ಸರವನ್ನು ಖರೀದಿಸಿದ್ದೀರಿ ಎಂದಾದರೆ ನಿಮ್ಮೆದುರಿಗೇ ತೂಕ ಮಾಡಿ ತೋರಿಸಲಾಗುತ್ತದೆ. ಆದರೆ ಅದು ಎಷ್ಟು ಶುದ್ಧವಾದ ಚಿನ್ನ ಎಂಬುದು ನಿಮಗೆ ಹೇಗೆ ತಿಳಿಯುತ್ತದೆ? ಅದಕ್ಕಾಗಿಯೇ ಹಾಲ್ ಮಾರ್ಕಿಂಗ್ ಮಾಡಲಾಗುತ್ತದೆ. ಅದರಲ್ಲಿ ಎಷ್ಟು ಕ್ಯಾರೆಟ್ ಎಂದು ಹಾಕಲಾಗಿದೆಯೋ ಅದು ಶುದ್ಧತೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ:
Gold jewelry hallmarking: ಚಿನ್ನದ ಆಭರಣಗಳಿಗೆ ಇಂದಿನಿಂದ ಹಾಲ್ಮಾರ್ಕ್ ಕಡ್ಡಾಯ; ಏನಿದು ಹಾಲ್ಮಾರ್ಕಿಂಗ್?
Gold Rate Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಶುಭ ಶುಕ್ರವಾರದಂದು ಚಿನ್ನದ ದರ ಇಳಿಕೆ
Published On - 10:23 am, Sun, 22 August 21