Gold Rate Today: ಚಿನ್ನಾಭರಣ ಖರೀದಿದಾರದಿಗೆ ಗುಡ್ ನ್ಯೂಸ್; ಇಂದು ಸಹ ಇಳಿಕೆಯಾದ ಚಿನ್ನದ ದರ, ಬೆಳ್ಳಿ ಬೆಲೆ ಸ್ಥಿರ
Gold Price Today: ನಿನ್ನೆ ರಕ್ಷಾಬಂಧನ ದಿನದಂದೂ ಸಹ ಚಿನ್ನದ ಮತ್ತು ಬೆಳ್ಳಿ ದರಗಳೆರಡೂ ಇಳಿಕೆ ಕಂಡಿತ್ತು. ಖರೀದಿದಾರರಿಗೆ ಖುಷಿ ತಂದಿರುವ ವಿಚಾರವಾಗಿತ್ತು. ಇಂದು ಸಹ ಚಿನ್ನದ ದರ ಇಳಿಕೆಯಾಗಿದೆ. ಇದು ಚಿನ್ನ ಖರೀದಿದಾರರಿಗೆ ಖುಷಿ ನೀಡುವ ವಿಚಾರ.
Gold Silver Price Today | ಬೆಂಗಳೂರು: ನಗರದಲ್ಲಿ ಇಂದು (ಆಗಸ್ಟ್ 23, ಸೋಮವಾರ) ಚಿನ್ನದರ ದರ (Gold Price) ಇಳಿಕೆಯಾಗಿದೆ. ಹಾಗೆಯೇ ಬೆಳ್ಳಿ ದರದಲ್ಲಿಯೂ (Silver Price) ಇಳಿಕೆ ಕಂಡು ಬಂದಿದೆ. ನಿನ್ನೆ ರಕ್ಷಾಬಂಧನ ದಿನದಂದೂ ಸಹ ಚಿನ್ನದ ಮತ್ತು ಬೆಳ್ಳಿ ದರಗಳೆರಡೂ ಇಳಿಕೆ ಕಂಡಿತ್ತು. ಖರೀದಿದಾರರಿಗೆ ಖುಷಿ ತಂದಿರುವ ವಿಚಾರವಾಗಿತ್ತು. ಮತ್ತೆ ಇಂದು ಚಿನ್ನದ ದರ ಇಳಿಕೆಯಾಗಿದೆ. ಇದು ಚಿನ್ನಾಭರಣ ಪ್ರಿಯರಿಗೆ ಖುಷಿ ನೀಡುವ ವಿಚಾರ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,140 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,41,400 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,160 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,81,600 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 61,700 ರೂಪಾಯಿ ಇದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,290 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,62,900 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,490 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,04,900 ರೂಪಾಯಿ ಇದೆ. ಕೆಜಿ ಬೆಳ್ಳಿ ಬೆಲೆ 61,700 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,640 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,46,400 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,700 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,87,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. 60 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 66,660 ರೂಪಾಯಿ ನಿಗದಿಯಾಗಿದೆ.
ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಜೈಪುರ, ಕೇರಳ ಹೀಗೆ ಅನೇಕ ನಗರಗಳಲ್ಲಿ ಚಿನ್ನದ ದರ ಇಂದು ಇಳಿಕೆ ಕಂಡಿದೆ. ಕೆಲವೆಡೆ ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಕೆಲವಡೆ ಇಳಿಕೆ ಕಂಡಿದೆ. ಇದು ಆಭರಣದ ಖರೀದಿದಾರರಿಗೆ ಸಂತೋಷ ತರುವ ವಿಚಾರ.
ಅದೆಷ್ಟೋ ವರ್ಷಗಳಿಂದ ಚಿನ್ನ ಖರೀದಿಸಬೇಕು ಎಂದು ಹಣ ಕೂಡಿಟ್ಟಿದ್ದರೆ, ಇಂದು ಸರಿಯಾದ ಟೈಂ. ಹಲವು ದಿನಗಳಿಂದ ಚಿನ್ನಾಭರಣ ದರ ಇಳಿಕೆ ಕಾಣುತ್ತಿದೆ. ಕಷ್ಟ ಕಾಲದಲ್ಲಿ ನೆರವಾಗುವ ಚಿನ್ನಕ್ಕೆ ಭಾರತದಲ್ಲಿ ಬೇಡಿಕೆ ಹೆಚ್ಚು. ಅದರಲ್ಲಿಯೂ ಮಹಿಳೆಯರಿಗೆ ಬಂಗಾರದ ಅಭರಣದ ಮೇಲೆ ಮೋಹ ಕೊಂಚ ಜಾಸ್ತಿಯೂ ಹೌದು. ಹೂಡಿಕೆಯ ದೃಷ್ಟಿಯಿಂದ ಚಿನ್ನ ಖರೀದಿಸುವುದರಿಂದ ಇಂದಿನ ದರ ಎಷ್ಟಿದೆ ಎಂಬ ಕುತೂಹಲ ಇದ್ದೇ ಇರುತ್ತದೆ.
ಇದನ್ನೂ ಓದಿ:
Published On - 8:37 am, Mon, 23 August 21