Bitcoin: ಇದೇ ಮೊದಲ ಬಾರಿಗೆ ಮೇ ತಿಂಗಳ ನಂತರ 50 ಸಾವಿರ ಯುಎಸ್ಡಿ ದಾಟಿದ ಬಿಟ್‌ಕಾಯಿನ್ ದರ
ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಆಗಸ್ಟ್ 23, 2021ರಂದು 50,000 ಯುಎಸ್ಡಿ ದಾಟಿದೆ. ಮೇ ತಿಂಗಳ ನಂತರ ಇದೇ ಮೊದಲ ಬಾರಿಗೆ 50 ಸಾವಿರ ಯುಎಸ್ಡಿ ದಾಟಿದೆ.
ಬಿಟ್‌ಕಾಯಿನ್‌ನ ದರ ಮೇ ತಿಂಗಳಲ್ಲಿ ಕುಸಿತ ಕಂಡ ನಂತರ ಕಳೆದ ಮೂರು ತಿಂಗಳಲ್ಲಿ ಮೊದಲ ಬಾರಿಗೆ ಆಗಸ್ಟ್ 23ರ ಸೋಮವಾರ 50,000 ಯುಎಸ್ಡಿ ದಾಟಿದೆ. ಕಾಯಿನ್ ಡೆಸ್ಕ್ (CoinDesk) ಪ್ರಕಾರ, ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಈ ವರ್ಷದಲ್ಲಿ ಇಲ್ಲಿಯ ತನಕ ಶೇ 72.3ರಷ್ಟು ರಿಟರ್ನ್ ನೀಡಿದ್ದು, ಪ್ರಸ್ತುತ 50,297.19 ಯುಎಸ್ಡಿ ಇದೆ. ಏಪ್ರಿಲ್‌ನಲ್ಲಿ ಬಿಟ್‌ಕಾಯಿನ್ ಸಾರ್ವಕಾಲಿಕ ಗರಿಷ್ಠ 64,000 ಯುಎಸ್ಡಿ ಅನ್ನು ಮುಟ್ಟಿದ ನಂತರ ಮೇ ತಿಂಗಳಲ್ಲಿ ಇಳಿಯಲು ಪ್ರಾರಂಭಿಸಿತು. ಕ್ರಿಪ್ಟೋಕರೆನ್ಸಿ ವಹಿವಾಟುಗಳಿಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಹಣಕಾಸು ಸಂಸ್ಥೆಗಳು ಮತ್ತು ಪಾವತಿ ಕಂಪೆನಿಗಳ ಮೇಲೆ ಚೀನಾದ ನಿಷೇಧ ಮತ್ತು ಸ್ಪೆಕ್ಯುಲೇಟಿವ್ ಕ್ರಿಪ್ಟೋ ವ್ಯವಹಾರದ ವಿರುದ್ಧ ಎಚ್ಚರಿಕೆ ನೀಡಿರುವುದು ಕುಸಿತಕ್ಕೆ ಕಾರಣವಾದ ಪ್ರಮುಖ ಕಾರಣಗಳಾಗಿವೆ.
ಈ ವರದಿ ಆಗುವ ಹೊತ್ತಿಗೆ ಪ್ರತಿಸ್ಪರ್ಧಿ ಡಿಜಿಟಲ್ ಕರೆನ್ಸಿ ಈಥರ್ ಶೇಕಡಾ 3.43ರಷ್ಟು ಹೆಚ್ಚಾಗಿ, 3,342 ಯುಎಸ್ಡಿಗೆ ವಹಿವಾಟು ಮಾಡುತ್ತಿತ್ತು. ಬ್ಲಾಕ್‌ಚೈನ್ ಆಧಾರಿತ ಕರೆನ್ಸಿ ಎಥೆರಿಯಮ್ ಈ ವರ್ಷದಲ್ಲಿ ಇಲ್ಲಿಯವರೆಗೆ ರಿಟರ್ನ್ ಶೇ 348ರಷ್ಟಿದೆ. ಈ ಮಧ್ಯೆ ಪೇಪಾಲ್ ಯುಕೆ ಮಾತನಾಡಿ, ಯುಕೆ ಗ್ರಾಹಕರಿಗೆ ಈ ವಾರದಿಂದ ಬಿಟ್‌ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳ ಖರೀದಿಗೆ, ಮಾರಾಟಕ್ಕೆ ಮತ್ತು ಹೋಲ್ಡಿಂಗ್ಗೆ ಅವಕಾಶ ನೀಡುವುದಾಗಿ ಹೇಳಿದೆ ಎಂದು ಕಂಪೆನಿ ಸೋಮವಾರ ಹೇಳಿದೆ. ಅಮೆರಿಕದ ಹೊರಗಿನ ಪೇಪಾಲ್ ಕ್ರಿಪ್ಟೋಕರೆನ್ಸಿ ಸೇವೆಗಳ ಮೊದಲ ಅಂತರರಾಷ್ಟ್ರೀಯ ವಿಸ್ತರಣೆಯನ್ನು ಗುರುತಿಸುವ ಜಾರಿ, ಹೊಸ ಸ್ವತ್ತು ವರ್ಗದ ಮುಖ್ಯವಾಹಿನಿಯ ಅಳವಡಿಕೆಗೆ ಮತ್ತಷ್ಟು ಸ್ಫೂರ್ತಿ ನೀಡುತ್ತದೆ. ಜಾಗತಿಕವಾಗಿ 40.3 ಕೋಟಿಗೂ ಹೆಚ್ಚು ಸಕ್ರಿಯ ಖಾತೆಗಳನ್ನು ಹೊಂದಿರುವ ಸ್ಯಾನ್ ಹ್ಯೂಸೆ, ಕ್ಯಾಲಿಫೋರ್ನಿಯಾ ಮೂಲದ ಕಂಪೆನಿಯು ಕ್ರಿಪ್ಟೋಕರೆನ್ಸಿಗಳಿಗೆ ಗ್ರಾಹಕರಿಗೆ ಸಂಪರ್ಕವನ್ನು ಒದಗಿಸುವ ಅತಿದೊಡ್ಡ ಮುಖ್ಯವಾಹಿನಿಯ ಹಣಕಾಸು ಕಂಪೆನಿಗಳಲ್ಲಿ ಒಂದಾಗಿದೆ.
ಅಲ್ಲದೆ, ವಿಶ್ವಾದ್ಯಂತ ಕ್ರಿಪ್ಟೋ ಕರೆನ್ಸಿಯನ್ನು ಅಳವಡಿಸಿಕೊಳ್ಳುವ ಪ್ರಮಾಣ 2019ರ ಮೂರನೇ ತ್ರೈಮಾಸಿಕದಿಂದ ಈಚೆಗೆ ಶೇ 2,300ಕ್ಕಿಂತಲೂ ಹೆಚ್ಚಾಗಿದೆ ಮತ್ತು ಕಳೆದ ವರ್ಷದಿಂದ ಈಚೆಗೆ ಶೇ 881ಕ್ಕಿಂತಲೂ ಹೆಚ್ಚಾಗಿದೆ. ಬಿಟ್‌ಕಾಯಿನ್ ಮಾಲೀಕತ್ವದ ವಿಷಯಕ್ಕೆ ಬಂದಲ್ಲಿ, ಬಿಟ್‌ಕಾಯಿನ್ ಮಾಲೀಕತ್ವ ಹೊಂದಿರುವ ಪ್ರಮುಖ ರಾಷ್ಟ್ರಗಳು ಏಷ್ಯಾದಲ್ಲಿವೆ. ಬಿಟ್‌ಕಾಯಿನ್ (ಶೇ 16) ಅತ್ಯಂತ ಜನಪ್ರಿಯವಾಗಿದೆ. ಆ ನಂತರ ಎಥೆರಿಯಮ್ ಮತ್ತು ಬಿಟ್‌ಕಾಯಿನ್ ನಗದು (ಶೇ 6) ಮತ್ತು ರಿಪಲ್ (ಶೇ 8). ಮಹಿಳೆಯರಿಗಿಂತ (ಶೇ 23) ಪುರುಷರು (ಶೇ 32) ಹೆಚ್ಚಿನ ಡಿಜಿಟಲ್ ಕರೆನ್ಸಿ ಹೊಂದಿದ್ದಾರೆ. ಕ್ರಿಪ್ಟೋಕರೆನ್ಸಿ ಮಾಲೀಕತ್ವದ ವಿಷಯಕ್ಕೆ ಬಂದಾಗ 18-24 ವಯಸ್ಸಿನ ಯುವ ವಯಸ್ಕರ ಪ್ರಮಾಣ ಶೇ 32ರಷ್ಟಿದೆ.
ಇದನ್ನೂ ಓದಿ: Bitcoin: ಡಾಮಿನೋಸ್ ಪಿಜ್ಜಾ, ಬಾಸ್ಕಿನ್ ರಾಬಿನ್ ಐಸ್ಕ್ರೀಮ್ ಬಿಟ್‌ಕಾಯಿನ್ ಮೂಲಕವೇ ಭಾರತದಲ್ಲಿ ಖರೀದಿಸಬಹುದು
ಇದನ್ನೂ ಓದಿ: Amazon: ಅಮೆಜಾನ್ನಿಂದ ಶೀಘ್ರದಲ್ಲೇ ಬಿಟ್‌ಕಾಯಿನ್, ಈಥರ್ನಂಥ ಕ್ರಿಪ್ಟೋಕರೆನ್ಸಿ ಪಾವತಿ ಸ್ವೀಕರಿಸುವ ಸಾಧ್ಯತೆ
(Cryptocurrency Bitcoin Price Crossed 50000 USD On August 23 2021)