Gold Price Today: ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ಹೆಚ್ಚಳ; ಇಲ್ಲಿದೆ ಪೂರ್ಣ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಇಳಿಕೆ, ಬೆಳ್ಳಿ ಬೆಲೆ ಹೆಚ್ಚಳ; ಇಲ್ಲಿದೆ ಪೂರ್ಣ ವಿವರ
ಚಿನ್ನದ ಬೆಲೆ
Edited By:

Updated on: Dec 13, 2022 | 5:00 AM

Gold Silver Price in Bangalore | ಬೆಂಗಳೂರು: ಹಿಂದಿನ ಎರಡೂ ಅವಧಿಯ ವಹಿವಾಟಿನಲ್ಲಿ ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ ಏರಿಕೆಯ ಹಾದಿ ಹಿಡಿದಿದ್ದ ಚಿನ್ನದ ಬೆಲೆ ಇಂದು ತುಸು ಇಳಿಕೆಯಾಗಿದೆ. ಆದರೆ, ಬೆಳ್ಳಿ ದರ ಮಾತ್ರ ಏರಿಕೆಯ ಹಾದಿಯಲ್ಲೇ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಚಿನ್ನ, ಬೆಳ್ಳಿ ದರ ಕ್ರಮವಾಗಿ 150 ರೂ. ಹಾಗೂ 500 ರೂ. ಏರಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನದ ದರ 100 ರೂ. ಇಳಿಕೆಯಾಗಿದ್ದರೆ, 1 ಕೆಜಿ ಬೆಳ್ಳಿ ದರ 900 ರೂ. ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 150 ರೂ. ಇಳಿಕೆಯಾಗಿ 49,800 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಇಳಿಕೆಯಾಗಿ 54,330 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 900 ರೂ. ಏರಿಕೆಯಾಗಿ 69,000 ರೂಪಾಯಿ ಆಗಿದೆ.

ಇದನ್ನೂ ಓದಿ: Gold Smuggling: ಈ ವರ್ಷ ಬರೋಬ್ಬರಿ 3,083 ಕೆಜಿ ಚಿನ್ನ ಜಪ್ತಿ; ಕೇರಳದಲ್ಲೇ ಅತಿಹೆಚ್ಚು

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 50,450 ರೂ. ಮುಂಬೈ- 49,800 ರೂ, ದೆಹಲಿ- 49,950 ರೂ, ಕೊಲ್ಕತ್ತಾ- 49,800 ರೂ, ಬೆಂಗಳೂರು- 49,850 ರೂ, ಹೈದರಾಬಾದ್- 49,800 ರೂ, ಕೇರಳ- 49,800 ರೂ, ಪುಣೆ- 49,800 ರೂ, ಮಂಗಳೂರು- 49,850 ರೂ, ಮೈಸೂರು- 49,850 ರೂ. ಆಗಿದೆ.

ಚೆನ್ನೈ- 55,040 ರೂ, ಮುಂಬೈ- 54,330 ರೂ, ದೆಹಲಿ- 54,490 ರೂ, ಕೊಲ್ಕತ್ತಾ- 54,330 ರೂ, ಬೆಂಗಳೂರು- 54,390 ರೂ, ಹೈದರಾಬಾದ್- 54,330 ರೂ, ಕೇರಳ- 54,330 ರೂ, ಪುಣೆ- 54,330 ರೂ, ಮಂಗಳೂರು- 54,390 ರೂ, ಮೈಸೂರು- 54,390 ರೂ. ಆಗಿದೆ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 72,800 ರೂ, ಮೈಸೂರು- 72,800 ರೂ., ಮಂಗಳೂರು- 72,800 ರೂ., ಮುಂಬೈ- 69,000 ರೂ, ಚೆನ್ನೈ- 72,800 ರೂ, ದೆಹಲಿ- 69,000 ರೂ, ಹೈದರಾಬಾದ್- 72,800 ರೂ, ಕೊಲ್ಕತ್ತಾ- 69,000 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ