Gold Price Today: ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ಬೆಲೆ ಕುಸಿತ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ಬೆಲೆ ಕುಸಿತ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Image Credit source: PTI

Updated on: Feb 16, 2023 | 5:00 AM

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ದರ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಏರಿಕೆಯಾಗಿದ್ದ ಬೆಳ್ಳಿ ದರ ಇಂದು ತುಸು ಇಳಿಕೆಯಾಗಿದೆ. ಹಿಂದಿನ ವಾರದ ವಹಿವಾಟಿನಲ್ಲಿಯೂ ಚಿನ್ನ ಹಾಗೂ ಬೆಳ್ಳಿ ದರದ ಏರಿಳಿತ ಮುಂದುವರಿದಿತ್ತು. ಒಟ್ಟಾರೆಯಾಗಿ ಫೆಬ್ರವರಿ ತಿಂಗಳ ವಹಿವಾಟಿನಲ್ಲಿ ದರ ಏರಿಳಿತದ ಟ್ರೆಂಡ್ ಮುಂದುವರಿದಿದೆ. ಇಂದು 1 ಕೆಜಿ ಬೆಳ್ಳಿ ಬೆಲೆ 450 ರೂ. ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಬದಲಾಗದೆ 52,400 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡು 57,160 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 450 ರೂ. ಏರಿಕೆಯಾಗಿ 69,950 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,150 ರೂ.
  • ಮುಂಬೈ- 52,400 ರೂ.
  • ದೆಹಲಿ- 52,550 ರೂ.
  • ಕೊಲ್ಕತ್ತಾ- 52,400 ರೂ.
  • ಬೆಂಗಳೂರು- 52,450 ರೂ.
  • ಹೈದರಾಬಾದ್- 52,400 ರೂ.
  • ಕೇರಳ- 52,400 ರೂ.
  • ಪುಣೆ- 52,400 ರೂ.
  • ಮಂಗಳೂರು- 52,450 ರೂ.
  • ಮೈಸೂರು- 52,450 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 57,980 ರೂ.
  • ಮುಂಬೈ- 57,160 ರೂ.
  • ದೆಹಲಿ- 57,310 ರೂ.
  • ಕೊಲ್ಕತ್ತಾ- 57,160 ರೂ.
  • ಬೆಂಗಳೂರು- 57,210 ರೂ.
  • ಹೈದರಾಬಾದ್- 57,160 ರೂ.
  • ಕೇರಳ- 57,160 ರೂ.
  • ಪುಣೆ- 57,160 ರೂ.
  • ಮಂಗಳೂರು- 57,210 ರೂ.
  • ಮೈಸೂರು- 57,210 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 72,000 ರೂ.
  • ಮೈಸೂರು- 72,000 ರೂ.
  • ಮಂಗಳೂರು- 72,000 ರೂ.
  • ಮುಂಬೈ- 69,950 ರೂ.
  • ಚೆನ್ನೈ- 72,000 ರೂ.
  • ದೆಹಲಿ- 69,950 ರೂ.
  • ಹೈದರಾಬಾದ್- 72,000 ರೂ.
  • ಕೊಲ್ಕತ್ತಾ- 69,950 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us