Petrol Price: ಪೆಟ್ರೋಲ್, ಡೀಸೆಲ್, ಎಣ್ಣೆ ಬೆಲೆಗಳ ಇಳಿಕೆಗೆ ಮುಂದಾದ ಕೇಂದ್ರ

Central Govt Move To Reduce fuel prices: ಇಂಧನ, ಎಣ್ಣೆ, ಜೋಳ ಇತ್ಯಾದಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಪರಿಣಾಮವಾಗಿ ಅವುಗಳ ಬೆಲೆ ಇಳಿಯುವ ನಿರೀಕ್ಷೆ ಇದೆ. ಹಣದುಬ್ಬರ ನಿಯಂತ್ರಣಕ್ಕೆ ತರಲು ಈ ಹೆಜ್ಜೆ ಇಡಲಾಗುತ್ತಿದೆ.

Petrol Price: ಪೆಟ್ರೋಲ್, ಡೀಸೆಲ್, ಎಣ್ಣೆ ಬೆಲೆಗಳ ಇಳಿಕೆಗೆ ಮುಂದಾದ ಕೇಂದ್ರ
ಪೆಟ್ರೋಲ್ ಹಾಗೂ ಡೀಸೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2023 | 10:45 AM

ನವದೆಹಲಿ: ವಾಹನ ಸವಾರರಿಗೆ ಖುಷಿಯ ಸುದ್ದಿ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol and Diesel Prices) ಇಳಿಕೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಎಣ್ಣೆ, ಪೆಟ್ರೋಲ್​ಗಳ ಬೆಲೆಯಲ್ಲೂ ತುಸು ಇಳಿಕೆಯಾಗಬಹುದು. ಹಣದುಬ್ಬರ (Inflation) ಮಿತಿಮೀರಿ ಏರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂಧನದ ಮೇಲಿನ ತೆರಿಗೆಯನ್ನು ಸರ್ಕಾರ ಕಡಿಮೆ ಮಾಡಲು ನಿರ್ಧರಿಸಿದೆ. ಹಾಗೆಯೇ, ಜೋಳ ಇತ್ಯಾದಿ ಆಹಾರವಸ್ತುಗಳ ಮೇಲಿನ ತೆರಿಗೆಯನ್ನೂ ಸರ್ಕಾರ ತಗ್ಗಿಸಲು ಯೋಜಿಸಿದೆ. ಹಣದುಬ್ಬರ ಕಡಿಮೆ ಮಾಡಲು ಆರ್​ಬಿಐ ಕೆಲ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರ ಹೆಜ್ಜೆ ಇಡಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ.

ಇದೇ ವೇಳೆ, ದೇಶೀಯವಾಗಿ ಉತ್ಪಾದನೆಯಾಗುವ ಕಚ್ಛಾ ತೈಲ, ವೈಮಾನಿಕ ಟರ್ಬೈನ್ ಇಂಧನ (ATF- Aviation Turbine Fuel) ಮತ್ತು ಡೀಸೆಲ್ ರಫ್ತು ಮೇಲಿನ ವಿಂಡ್​ಫಾಲ್ ಪ್ರಾಫಿಟ್ ತೆರಿಗೆಯನ್ನು (Windfall Profit Tax) ಕಡಿಮೆಗೊಳಿಸಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳಿಗೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ತೈಲದ ಮೇಲಿನ ತೆರಿಗೆಯನ್ನು ಪ್ರತೀ ಟನ್​ಗೆ 5,050 ರೂನಿಂದ 4,350 ರೂಗೆ ಇಳಿಸಲಾಗಿದೆ. ಇನ್ನು, ಏವಿಯೇಶನ್ ಟರ್ಬೈನ್ ಫುಯಲ್ ಮೇಲೆ ವಿಧಿಸಲಾಗುವ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್​ಗೆ 6 ರೂನಿಂದ 1 ರೂಗೆ ಇಳಿಕೆ ಮಾಡಲಾಗಿದೆ. ಹಾಗೆಯೇ, ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತೀ ಲೀಟರ್​ಗೆ 7.5 ರೂನಿಂದ 3 ರೂಪಾಯಿಗೆ ತಗ್ಗಿಸಲಾಗಿದೆ.

ಇಲ್ಲಿ ವಿಂಡ್​ಫಾಲ್ ಪ್ರಾಫಿಟ್ ಟ್ಯಾಕ್ಸ್ ಎಂದರೆ ಅನಿರೀಕ್ಷಿತವಾಗಿ ಸಿಗುವ ಲಾಭಕ್ಕೆ ಹಾಕಲಾಗುವ ತೆರಿಗೆ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಎಂದೂ ಇದನ್ನು ಕರೆಯುವುದುಂಟು. ಜಾಗತಿಕ ಮಾರುಕಟ್ಟೆಗಳಲ್ಲಿ ಸಂಸ್ಕರಿತ ಕಚ್ಛಾ ತೈಲದ ಮಾರಾಟ ಮೂಲಕ ಸಿಕ್ಕ ಲಾಭಕ್ಕೆ ತೆರಿಗೆ ವಿಧಿಸುವ ಕ್ರಮವನ್ನು ಸರ್ಕಾರ ಕಳೆದ ವರ್ಷದಿಂದ ಜಾರಿಗೆ ತಂದಿತ್ತು. ಈ ಮೇಲಿನ ಕ್ರಮದಿಂದ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳ ಮೇಲಿರುವ ಒತ್ತಡ ತುಸು ತಗ್ಗುವ ನಿರೀಕ್ಷೆ ಇದೆ. ಇದೂ ಕೂಡ ಬೆಲೆ ಇಳಿಕೆಗೆ ಸಹಾಯವಾಗಬಹುದು.

ಇದನ್ನೂ ಓದಿ: Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಫೆ.15ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಭಾರತದಲ್ಲಿ ಡಿಸೆಂಬರ್ ತಿಂಗಳಲ್ಲಿ ಶೇ. 5.72ರಷ್ಟು ಇದ್ದ ಹಣದುಬ್ಬರ ಜನವರಿಯಲ್ಲಿ ಶೇ 6.52ಕ್ಕೆ ಹೆಚ್ಚಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುತ್ತದೆ. ಪೆಟ್ರೋಲ್, ಡೀಸೆಲ್, ಎಣ್ಣೆ, ಬೇಳೆ ಕಾಳು ಇತ್ಯಾದಿ ಅಗತ್ಯವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದರೆ ಹಣದುಬ್ಬರವೂ ಬಹುತೇಕ ನಿಯಂತ್ರಣದಲ್ಲಿರುತ್ತದೆ.

ಮನಿಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ ಜೋಳ ಇತ್ಯಾದಿ ವಸ್ತುಗಳಿಗೆ ಶೇ. 60ರಷ್ಟು ಸುಂಕವನ್ನು ಹಾಕಲಾಗುತ್ತಿದೆ. ಇದನ್ನು ಸರ್ಕಾರ ಕಡಿತಗೊಳಿಸಲು ಮುಂದಾಗಿದೆ.

ಪೆಟ್ರೋಲ್ ಬೆಲೆ, ವ್ಯವಹಾರ ಇತ್ಯಾದಿ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ