Gold Price Today: ಚಿನ್ನದ ದರ ಮತ್ತೆ ಏರಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ಕೆಲವು ದಿನಗಳಿಂದ ಸತತವಾಗಿ ಏರಿಕೆ ದಾಖಲಿಸಿ ಕಳೆದ ಎರಡು ವಹಿವಾಟಿನಲ್ಲಿ ಕುಸಿದಿದ್ದ ಚಿನ್ನದ ದರ (Gold Price) ಇಂದು ಮತ್ತೆ ತುಸು ಹೆಚ್ಚಳವಾಗಿದೆ. ಭಾರೀ ಏರಿಕೆ ದಾಖಲಿಸಿ ಎರಡು ವಹಿವಾಟುಗಳಲ್ಲಿ ಕುಸಿತ ಕಂಡಿದ್ದ ಬೆಳ್ಳಿ ದರ (Silver Price) ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 250 ರೂ. ಹೆಚ್ಚಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 280 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ ಬದಲಾಗಿಲ್ಲ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 250 ರೂ. ಏರಿಕೆಯಾಗಿ 52,650 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 280 ರೂ. ಹೆಚ್ಚಳವಾಗಿ 57,440 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ ಬದಲಾಗದೆ 71,200 ರೂ. ಇದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 53,650 ರೂ.
- ಮುಂಬೈ- 52,650 ರೂ.
- ದೆಹಲಿ- 52,800 ರೂ.
- ಕೊಲ್ಕತ್ತಾ- 52,650 ರೂ.
- ಬೆಂಗಳೂರು- 52,700 ರೂ.
- ಹೈದರಾಬಾದ್- 52,650 ರೂ.
- ಕೇರಳ- 52,650 ರೂ.
- ಪುಣೆ- 52,650 ರೂ.
- ಮಂಗಳೂರು- 52,700 ರೂ.
- ಮೈಸೂರು- 52,700 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 58,530 ರೂ.
- ಮುಂಬೈ- 57,440 ರೂ.
- ದೆಹಲಿ- 57,590 ರೂ.
- ಕೊಲ್ಕತ್ತಾ- 57,440 ರೂ.
- ಬೆಂಗಳೂರು- 57,490 ರೂ.
- ಹೈದರಾಬಾದ್- 57,440 ರೂ.
- ಕೇರಳ- 57,440 ರೂ.
- ಪುಣೆ- 57,440 ರೂ.
- ಮಂಗಳೂರು- 57,490 ರೂ.
- ಮೈಸೂರು- 57,490 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,000 ರೂ.
- ಮೈಸೂರು- 74,000 ರೂ.
- ಮಂಗಳೂರು- 74,000 ರೂ.
- ಮುಂಬೈ- 71,200 ರೂ.
- ಚೆನ್ನೈ- 74,000 ರೂ.
- ದೆಹಲಿ- 71,200 ರೂ.
- ಹೈದರಾಬಾದ್- 74,000 ರೂ.
- ಕೊಲ್ಕತ್ತಾ- 71,200 ರೂ.