Gold Price Today: ಚಿನ್ನ, ಬೆಳ್ಳಿ ದರ ಏರಿಕೆಯ ಓಟ ಮತ್ತೆ ಮುಂದುವರಿಕೆ; ಇಂದಿನ ಬೆಲೆ ವಿವರ ಇಲ್ಲಿ ತಿಳಿಯಿರಿ

|

Updated on: Feb 08, 2023 | 5:00 AM

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ, ಬೆಳ್ಳಿ ದರ ಏರಿಕೆಯ ಓಟ ಮತ್ತೆ ಮುಂದುವರಿಕೆ; ಇಂದಿನ ಬೆಲೆ ವಿವರ ಇಲ್ಲಿ ತಿಳಿಯಿರಿ
ಚಿನ್ನ (ಸಾಂದರ್ಭಿಕ ಚಿತ್ರ)
Follow us on

Gold Silver Price in Bangalore | ಬೆಂಗಳೂರು: ಕಳೆದ ವರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದ  ಚಿನ್ನದ ದರಕ್ಕೆ (Gold Price) ಎರಡು ದಿನಗಳ ಹಿಂದೆ ಬ್ರೇಕ್ ಬಿದ್ದಿತ್ತು. ಎರಡು ದಿನಗಳ ಕಾಲ ತುಸು ಇಳಿಕೆಯಾಗಿದ್ದ ಚಿನ್ನದ ದರ ಮತ್ತೆ ಸತತ ಎರಡನೇ ದಿನ ಏರಿಕೆ ದಾಖಲಿಸಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಬೆಳ್ಳಿ ದರ (Silver Price) ಕೂಡ ಇಂದು ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 100 ರೂ. ಹೆಚ್ಚಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ ಕೂಡ 100 ರೂ. ಹೆಚ್ಚಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 100 ರೂ. ಏರಿಕೆಯಾಗಿ 52,750 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಹೆಚ್ಚಳವಾಗಿ 57,550 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 100 ರೂ. ಏರಿಕೆಯಾಗಿ 71,300 ರೂ. ಇದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,730 ರೂ.
  • ಮುಂಬೈ- 52,750 ರೂ.
  • ದೆಹಲಿ- 52,900 ರೂ.
  • ಕೊಲ್ಕತ್ತಾ- 52,750 ರೂ.
  • ಬೆಂಗಳೂರು- 52,800 ರೂ.
  • ಹೈದರಾಬಾದ್- 52,750 ರೂ.
  • ಕೇರಳ- 52,750 ರೂ.
  • ಪುಣೆ- 52,750 ರೂ.
  • ಮಂಗಳೂರು- 52,800 ರೂ.
  • ಮೈಸೂರು- 52,800 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,620 ರೂ.
  • ಮುಂಬೈ- 57,550 ರೂ.
  • ದೆಹಲಿ- 57,700 ರೂ.
  • ಕೊಲ್ಕತ್ತಾ- 57,550 ರೂ.
  • ಬೆಂಗಳೂರು- 57,600 ರೂ.
  • ಹೈದರಾಬಾದ್- 57,550 ರೂ.
  • ಕೇರಳ- 57,550 ರೂ.
  • ಪುಣೆ- 57,550 ರೂ.
  • ಮಂಗಳೂರು- 57,600 ರೂ.
  • ಮೈಸೂರು- 57,600 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,000 ರೂ.
  • ಮೈಸೂರು- 74,000 ರೂ.
  • ಮಂಗಳೂರು- 74,000 ರೂ.
  • ಮುಂಬೈ- 71,300 ರೂ.
  • ಚೆನ್ನೈ- 74,000 ರೂ.
  • ದೆಹಲಿ- 71,300 ರೂ.
  • ಹೈದರಾಬಾದ್- 74,000 ರೂ.
  • ಕೊಲ್ಕತ್ತಾ- 71,300 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ