Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

Gita GPT: ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ಸಿದ್ಧಪಡಿಸಿದ ಗೂಗಲ್ ಎಂಜಿನಿಯರ್, ವೈಶಿಷ್ಟ್ಯವೇನು?
ಗೀತಾ ಜಿಪಿಟಿImage Credit source: Newsbytes
Follow us
ನಯನಾ ರಾಜೀವ್
|

Updated on: Feb 08, 2023 | 8:18 AM

ಇದೀಗ ಎಲ್ಲೆಲ್ಲೂ Chat GPTಯದ್ದೇ ಸುದ್ದಿ,  ಓಪನ್ ಎಐನ ಚಾಟ್ ಜಿಪಿಟಿಯು ಟೆಕ್ ಕಂಪನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಗೂಗಲ್​ನಂತಹ ಕಂಪನಿಗಳು ತಮ್ಮ ಎಐ ಆಧಾರಿತ ಚಾಟ್​ಬಾಟ್ ಬಾರ್ಡ್​ ಅನ್ನು ಅಕಾಲಿಕವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ ಈ ಅಂಶದಿಂದ ಇದರ ಶಕ್ತಿ ಹಾಗೂ ಜನಪ್ರಿಯತೆಯನ್ನು ಅಳೆಯಬಹುದಾಗಿದೆ. ಗೀತಾ ಜಿಪಿಟಿಯನ್ನು ಗೂಗಲ್ ಇಂಡಿಯಾದ ಸಾಫ್ಟ್​ವೇರ್ ಎಂಜಿನಿಯರ್ ಸುಕುರು ಸಾಯಿ ವಿನೀತ್ ಸಿದ್ಧಪಡಿಸಿದ್ದಾರೆ.

ಈ ಅಪ್ಲಿಕೇಶನ್​ನಿಂದ ನೀವು ಪ್ರಶ್ನೆಗಳನ್ನು ಕೇಳಿದಾಗ ಇದು ಗೀತಾ ಬೋಧನೆಗಳ ಆಧಾರದ ಮೇಲೆ ಉತ್ತರಗಳನ್ನು ನೀಡುತ್ತದೆ. ಇದರಲ್ಲಿ ‘ಗೀತಾ ಸೆ ಪರಾಮರ್ಶ್​’ ಸೌಲಭ್ಯವಿದೆ. ಈ ಎಐ ಅಪ್ಲಿಕೇಷನ್ ಗೀತಾ ಪಾಠಗಳ ಮೂಲಕ ಬಳಕೆದಾರರಿಗೆ ಸರಿಯಾದ ಮಾಹಿತಿ, ಸಲಹೆಯನ್ನು ನೀಡುತ್ತದೆ. https://gita.kishans.in ನಲ್ಲಿ, ಚಾಟ್‌ಬಾಟ್ ಶ್ರೀಕೃಷ್ಣನ ಪಾತ್ರವನ್ನು ನಿರ್ವಹಿಸುತ್ತದೆ, ಆದರೆ ಬಳಕೆದಾರರು ಅರ್ಜುನನಂತೆ ಸಲಹೆ ಪಡೆಯಬಹುದು.

ನೀವು ವೆಬ್‌ಸೈಟ್‌ಗೆ ಹೋದಾಗ, ಅರ್ಜುನಾ, ನನ್ನ ಸ್ನೇಹಿತ, ನಿಮಗೆ ಏನು ತೊಂದರೆಯಾಗುತ್ತಿದೆ? ಎಂದು ಕೇಳುವ ಚಾಟ್‌ಬಾಟ್ ಕೃಷ್ಣನ ಪಾತ್ರವನ್ನು ನೀವು ನೋಡುತ್ತೀರಿ. ಅಪ್ಲಿಕೇಶನ್ 1.20 ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿದೆ ಎಂದು ಹೇಳುತ್ತದೆ.

ಮತ್ತಷ್ಟು ಓದಿ: ಚಾಟ್​ಜಿಪಿಟಿ ಕಾರ್ನರ್​​! ನಾವು ಎಲ್ಲವನ್ನೂ ‘ಭಾರತೀಯ’ಗೊಳಿಸುವಲ್ಲಿ ಚಾಣಾಕ್ಷರು

ಜೀವನದ ಅರ್ಥವೇನು, ನಾನು ದ್ವೇಷಸಬೇಕೆ? ಎನ್ನುವ ಪ್ರಶ್ನೆ ಕೇಳಿದಾಗ, ಗೀತಾ ಜಿಪಿಟಿಯು ದ್ವೇಷವು ಶಾಂತಿ ಮತ್ತು ನೆಮ್ಮದಿಯ ಮಾರ್ಗವಲ್ಲ. ಎಲ್ಲಾ ಜೀವಿಗಳ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯ ಭಾವನೆಗಳನ್ನು ಬೆಳೆಸಲು ಪ್ರಯತ್ನಿಸಿ ಎಂದು ಉತ್ತರ ನೀಡಿದೆ. ಭಗವದ್ಗೀತೆಯು ಮಹಾಭಾರತದ ಯುದ್ಧದ ಸಮಯದಲ್ಲಿ ಅರ್ಜುನ ಮತ್ತು ಅವನ ಸಾರಥಿ ಕೃಷ್ಣನ ನಡುವಿನ ಸಂಭಾಷಣೆಯನ್ನು ಆಧರಿಸಿದ ಸಿದ್ಧಪಡಿಸಲಾಗಿದೆ.

ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ, ರಾಜಯೋಗ ಮುಂತಾದವುಗಳನ್ನು ಚರ್ಚಿಸಲಾಗಿದೆ. ಗೀತೆಯು ಮನುಷ್ಯನಿಗೆ ಕರ್ಮದ ಮಹತ್ವವನ್ನು ವಿವರಿಸುತ್ತದೆ. ಗೀತೆಯಲ್ಲಿ ಮಾನವ ಜೀವನದ ಸಾರವನ್ನು ವಿವರಿಸಲಾಗಿದೆ.

ಇದು 18 ಅಧ್ಯಾಯಗಳು ಮತ್ತು 700 ಪದ್ಯಗಳನ್ನು ಹೊಂದಿದೆ. ಗೀತಾ ಮಾನವರು ತಮ್ಮ ಉದ್ದೇಶವನ್ನು ಕಂಡುಕೊಳ್ಳಲು ಮತ್ತು ಶುದ್ಧತೆ, ಶಕ್ತಿ, ಶಿಸ್ತು, ಪ್ರಾಮಾಣಿಕತೆ, ದಯೆ ಮತ್ತು ಸಮಗ್ರತೆಯ ಜೀವನವನ್ನು ನಡೆಸಲು ಪ್ರೋತ್ಸಾಹಿಸುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ