AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಆಧಾರ್ ದುರ್ಬಳಕೆಯಾಗಿದೆಯಾ? ಆನ್​​ಲೈನ್​ನಲ್ಲೇ ಪರಿಶೀಲಿಸುವ ವಿಧಾನ ಇಲ್ಲಿದೆ

ಆಧಾರ್ ಕಾರ್ಡ್​ ದೇಶದ ನಾಗರಿಕರ ಬಹು ಮುಖ್ಯ ದಾಖಲೆಗಳಲ್ಲೊಂದು. ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಸರ್ಕಾರದ ಸೌಲಭ್ಯಗಳನ್ನು, ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಿದ್ದರೆ ಆಧಾರ್ ಬೇಕೇಬೇಕು. ಆಧಾರ್ ಕಾರ್ಡ್​ ಅನ್ನು ಬೇರೆ ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ ಎಂಬುದನ್ನು ಆನ್​ಲೈನ್​ನಲ್ಲೇ ತಿಳಿಯುವುದು ಹೇಗೆಂಬ ಮಾಹಿತಿ ಇಲ್ಲಿದೆ.

Ganapathi Sharma
|

Updated on:Feb 07, 2023 | 5:14 PM

Share
How to check Aadhaar card being misused Online Aadhaar Authentication History

ಆಧಾರ್​ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳೆಲ್ಲ ಅಡಕವಾಗಿರುತ್ತವೆ. ಹೆಸರು, ವಿಳಾಸ, ಬಯೋಮೆಟ್ರಿಕ್ ವಿವರಗಳೆಲ್ಲ ದಾಖಲಾಗಿರುತ್ತವೆ. ಆಧಾರ್ ದಾಖಲೆಗಳು ಸುರಕ್ಷಿತ ಎಂದು ಸರ್ಕಾರ ಭರವಸೆಯನ್ನೇನೋ ನೀಡಿದೆ. ಆದಾಗ್ಯೂ, ಅವಕಾಶ ಇರುವುದರಿಂದ ಆನ್​​ಲೈನ್ ಮೂಲಕ ನಿಯಮಿತವಾಗಿ ಆಧಾರ್ ದುರ್ಬಳಕೆಯಾಗ್ತಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

1 / 7
How to check Aadhaar card being misused Online Aadhaar Authentication History

ಆಧಾರ್ ಕಾರ್ಡ್​ ಅನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ ಎಂಬುದುನ್ನು ಆನ್​ಲೈನ್​ನಲ್ಲಿ ಪರಿಶೀಲಿಸಲು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಎಂಬ ಆಯ್ಕೆಯನ್ನು ನೀಡಿದೆ.

2 / 7
How to check Aadhaar card being misused Online Aadhaar Authentication History

‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಪರಿಶೀಲಿಸಲು ನೀವು ಮೊದಲು ಯುಐಡಿಎಐ ಅಧಿಕೃತ ವೆಬ್​ಸೈಟ್​ಗೆ (www.uidai.gov.in) ಭೇಟಿ ನೀಡಬೇಕು.

3 / 7
How to check Aadhaar card being misused Online Aadhaar Authentication History

‘ಮೈ ಆಧಾರ್’ ಆಯ್ಕೆಗೆ ಕ್ಲಿಕ್ ಮಾಡಿ ಆಧಾರ್ ಸೇವೆಗಳು ಎಂಬ ಆಯ್ಕೆಯಡಿ ಬರುವ ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ಯನ್ನು ಕ್ಲಿಕ್ ಮಾಡಬೇಕು.

4 / 7
How to check Aadhaar card being misused Online Aadhaar Authentication History

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ಸೆಕ್ಯೂರಿಟಿ ಕೋಡ್ ಹಾಗೂ ಒಟಿಪಿ ಸಹಾಯದಿಂದ ಲಾಗಿನ್ ಆಗಬೇಕು.

5 / 7
ಆಧಾರ್ (ಸಾಂದರ್ಭಿಕ ಚಿತ್ರ)

Aadhaar Card Online services How to Change Name Or Spelling or other details on online see details here in Kannada

6 / 7
How to check Aadhaar card being misused Online Aadhaar Authentication History

ನಿಮ್ಮ ಆಧಾರ್ ಕಾರ್ಡ್​​ಗೆ ಸಂಬಂಧಿಸಿದ ಎಲ್ಲ ವಿವರಗಳು ಮತ್ತು ಹಿಂದಿನ ದೃಢೀಕರಣ ವಿನಂತಿಗಳ ಎಲ್ಲ ವಿವರಗಳು ಸ್ಕ್ರೀನ್​​ನಲ್ಲಿ ಕಾಣಿಸುತ್ತವೆ. ಈ ಮೂಲಕ ನೀವು ಆಧಾರ್ ದುರ್ಬಳಕೆಯಾಗಿದೆಯೇ ಎಂದು ಪರಿಶೀಲಿಸಬಹುದು.

7 / 7

Published On - 5:13 pm, Tue, 7 February 23

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​