Updated on: Feb 07, 2023 | 2:52 PM
ಬಾಲಿವುಡ್ನಲ್ಲಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಆನಂದ್ ಮದುವೆ ಆಗುತ್ತಿದ್ದಾರೆ. ಈ ಜೋಡಿ ಜೈಸಲ್ಮೇರ್ನಲ್ಲಿ ಮದುವೆ ಆಗಲಿದ್ದಾರೆ. ಭರ್ಜರಿ ಅದ್ದೂರಿಯಾಗಿ ಇವರು ವಿವಾಹ ನಡೆಯುತ್ತಿದೆ. ಈ ಮದುವೆಗೆ 6 ಕೋಟಿ ರೂಪಾಯಿ ಖರ್ಚಾಗುತ್ತಿದೆ ಎನ್ನಲಾಗಿದೆ.
2021ರ ಡಿಸೆಂಬರ್ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಆಗಿದ್ದರು. ಇವರು ಮದುವೆ ಆಗಿದ್ದು ರಾಜಸ್ಥಾನದಲ್ಲಿ. ಇವರು ಮದುವೆಗೆ 4 ಕೋಟಿ ರೂಪಾಯಿ ವ್ಯಯಿಸಿದ್ದರು ಎನ್ನಲಾಗಿದೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಟಲಿಯಲ್ಲಿ ಮದುವೆ ಆಗಿದ್ದರು. ಇವರು ಮದುವೆಗೆ ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ. ಇದರ ಪಕ್ಕಾ ಲೆಕ್ಕ ಸಿಕ್ಕಿಲ್ಲ. ಇವರು ಮದುವೆ ಆಗಿರೋ ರೆಸಾರ್ಟ್ನ ಬಾಡಿಗೆ ಒಂದು ದಿನಕ್ಕೆ 24 ಲಕ್ಷ ರೂಪಾಯಿ ಇದೆ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಸಿಕ್ಕಾಪಟ್ಟೆ ಅದ್ದೂರಿಯಾಗಿ ನೆರವೇರಿತ್ತು. ಇವರು ಇಟಲಿಯಲ್ಲಿ ಮದುವೆ ಆಗಿದ್ದರು. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ಇವರ ಮದುವೆಗೆ 100 ಕೋಟಿ ರೂಪಾಯಿ ಖರ್ಚಾಗಿದೆ.
ಪ್ರಿಯಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ರಾಜಸ್ಥಾನದ ಉಮೈದ್ ಭವನ್ ಪ್ಯಾಲೇಸ್ನಲ್ಲಿ ಮದುವೆ ಆಗಿದ್ದರು. ಇವರು ಮದುವೆಗೆ 4 ಕೋಟಿ ರೂಪಾಯಿ ಖಾಲಿ ಮಾಡಿದ್ದರು.
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಮದುವೆಗೂ ನಾಲ್ಕು ಕೋಟಿ ರೂಪಾಯಿ ಆಸುಪಾಸಿನಲ್ಲಿ ಖರ್ಚಾಗಿದೆ.