Gold Price Today: ಮತ್ತೆ ದುಬಾರಿಯಾಯ್ತು ಬಂಗಾರ; ಚಿನ್ನ, ಬೆಳ್ಳಿ ಬೆಲೆ ಏರಿಕೆ
Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.
Gold Silver Price in Bangalore | ಬೆಂಗಳೂರು: ದೇಶದಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆ ಟ್ರೆಂಡ್ ಮುಂದವರಿದಿದೆ. ಪರಿಣಾಮವಾಗಿ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೇಡಿಕೆ ಕುಸಿದಿದೆ ಎಂದು ವರದಿಯಾಗಿದೆ. ಬೇಡಿಕೆ ಕುಸಿತದ ಪರಿಣಾಮ ಚಿನ್ನದ ಆಮದಿನ ಮೇಲೂ ಆಗಿದೆ. 2022ರ ಡಿಸೆಂಬರ್ನಲ್ಲಿ ಚಿನ್ನದ ಆಮದಿನಲ್ಲಿ ಶೇಕಡಾ 79ರಷ್ಟು ಕುಸಿತ ಕಂಡುಬಂದಿದೆ. 2022ರ ಡಿಸೆಂಬರ್ನಲ್ಲಿ ಭಾರತ ಕೇವಲ 20 ಟನ್ ಚಿನ್ನ ಆಮದು ಮಾಡಿಕೊಂಡಿದೆ. ಅದಕ್ಕೂ ಹಿಂದಿನ ವರ್ಷ ಡಿಸೆಂಬರ್ನಲ್ಲಿ 95 ಟನ್ ಚಿನ್ನ ಆಮದು ಮಾಡಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 100 ರೂ. ಹೆಚ್ಚಾಗಿದ್ದು, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ದರ 110 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 400 ರೂ. ಹೆಚ್ಚಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 100 ರೂ. ಹೆಚ್ಚಾಗಿದ್ದು, 51,400 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 110 ರೂ. ಏರಿಕೆಯಾಗಿ 56,070 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಏರಿಕೆಯಾಗಿ 71,900 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ – 52,360 ರೂ.
- ಮುಂಬೈ- 51,400 ರೂ.
- ದೆಹಲಿ- 51,550 ರೂ.
- ಕೊಲ್ಕತ್ತಾ- 51,400 ರೂ.
- ಬೆಂಗಳೂರು- 51,450 ರೂ.
- ಹೈದರಾಬಾದ್- 51,400 ರೂ.
- ಕೇರಳ- 51,400 ರೂ.
- ಪುಣೆ- 51,400 ರೂ.
- ಮಂಗಳೂರು- 51,450 ರೂ.
- ಮೈಸೂರು- 51,450 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
- ಚೆನ್ನೈ- 57,120 ರೂ.
- ಮುಂಬೈ- 56,070 ರೂ.
- ದೆಹಲಿ- 56,220 ರೂ.
- ಕೊಲ್ಕತ್ತಾ- 56,070 ರೂ.
- ಬೆಂಗಳೂರು- 56,120 ರೂ.
- ಹೈದರಾಬಾದ್- 56,070 ರೂ.
- ಕೇರಳ- 56,070 ರೂ.
- ಪುಣೆ- 56,070 ರೂ.
- ಮಂಗಳೂರು- 56,120 ರೂ.
- ಮೈಸೂರು- 56,120 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
- ಬೆಂಗಳೂರು- 74,000 ರೂ.
- ಮೈಸೂರು- 74,000 ರೂ.
- ಮಂಗಳೂರು- 74,000 ರೂ.
- ಮುಂಬೈ- 71,900 ರೂ.
- ಚೆನ್ನೈ- 74,000 ರೂ.
- ದೆಹಲಿ- 71,900 ರೂ.
- ಹೈದರಾಬಾದ್- 74,000 ರೂ.
- ಕೊಲ್ಕತ್ತಾ- 71,900 ರೂ.