Budget Expectations: ಸಾಮಾನ್ಯ ಜನರ ತೆರಿಗೆ ಹೊರೆ ಇಳಿಸುತ್ತಾ ಬಜೆಟ್? ನಿರೀಕ್ಷೆಗಳೇನು?

ಬಜೆಟ್ ನಲ್ಲಿ ಜನಸಾಮಾನ್ಯರ ಕಣ್ಣು ಹಾಯುವುದು ಸಾಮಾನ್ಯವಾಗಿ ತೆರಿಗೆ ಬಗ್ಗೆ. ಕಳೆದ ಬಾರಿಯ ಬಜೆಟ್ ನಲ್ಲಿ ತೆರಿಗೆದಾರರಿಗೆ ಆಕರ್ಷಕ ಎನಿಸುವ ಯಾವ ಕ್ರಮವೂ ಜಾರಿಯಾಗಿರಲಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳಿವೆ. ಆದಾಯ ತೆರಿಗೆ ದರದ ಇಳಿಕೆಯಿಂದ ಹಿಡಿದು ವಿವಿಧ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದವರೆಗೂ ವಿವಿಧ ನಿರೀಕ್ಷೆಗಳನ್ನು ಜನಸಾಮಾನ್ಯರು ಇಟ್ಟುಕೊಂಡಿದ್ದಾರೆ.

Budget Expectations: ಸಾಮಾನ್ಯ ಜನರ ತೆರಿಗೆ ಹೊರೆ ಇಳಿಸುತ್ತಾ ಬಜೆಟ್? ನಿರೀಕ್ಷೆಗಳೇನು?
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 12, 2023 | 6:40 PM

ಫೆಬ್ರುವರಿ 1ರಂದು ಕೇಂದ್ರೀಯ ಬಜೆಟ್ (Budget 2023) ಮಂಡನೆಯಾಗುತ್ತಿದೆ. ಈಗಾಗಲೇ ವಿವಿಧ ತಜ್ಞರು, ಇಲಾಖೆಗಳು, ರಾಜ್ಯಗಳಿಂದ ಸಲಹೆ ಸಮಾಲೋಚನೆಗಳು ಬಹುತೇಕ ಮುಕ್ತಾಯದ ಹಂತದಲ್ಲಿವೆ. ಕೇಂದ್ರದ ಈ ಸರ್ಕಾರಕ್ಕೆ ಇದು ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರುವುದರಿಂದ ನಿರೀಕ್ಷೆಗಳೂ ಹೆಚ್ಚು ಇವೆ. ಬಜೆಟ್ ನಲ್ಲಿ ಜನಸಾಮಾನ್ಯರ ಕಣ್ಣು ಹಾಯುವುದು ಸಾಮಾನ್ಯವಾಗಿ ತೆರಿಗೆ ಬಗ್ಗೆ. ಕಳೆದ ಬಾರಿಯ ಬಜೆಟ್ ನಲ್ಲಿ ತೆರಿಗೆದಾರರಿಗೆ ಆಕರ್ಷಕ ಎನಿಸುವ ಯಾವ ಕ್ರಮವೂ ಜಾರಿಯಾಗಿರಲಿಲ್ಲ. ಈ ಬಾರಿಯ ಬಜೆಟ್ ನಲ್ಲಿ ಹಲವು ನಿರೀಕ್ಷೆಗಳಿವೆ. ಆದಾಯ ತೆರಿಗೆ ದರದ ಇಳಿಕೆಯಿಂದ ಹಿಡಿದು ವಿವಿಧ ತೆರಿಗೆ ವಿನಾಯಿತಿ ಮಿತಿ (Tax Deduction Limit) ಹೆಚ್ಚಳದವರೆಗೂ ವಿವಿಧ ನಿರೀಕ್ಷೆಗಳನ್ನು ಜನಸಾಮಾನ್ಯರು ಇಟ್ಟುಕೊಂಡಿದ್ದಾರೆ. ಇಂಥ ಕೆಲ ಸಂಗತಿಗಳ ವಿವರ ಇಲ್ಲಿದೆ.

ಆದಾಯ ತೆರಿಗೆ ದರ ಇಳಿಕೆ:

ಬೇರೆ ಹಲವು ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ತೆರಿಗೆ ದರ ಹೆಚ್ಚು. ಅದರಲ್ಲೂ ಆದಾಯ ತೆರಿಗೆ (Income Tax) ಹೆಚ್ಚಿನ ಮಟ್ಟದಲ್ಲಿದೆ. ಹಣದುಬ್ಬರ, ಬೆಲೆ ಏರಿಕೆಯಿಂದ ಕಂಗೆಟ್ಟುಹೋಗಿರುವ ತೆರಿಗೆದಾರ ಪ್ರತೀ ಬಜೆಟ್ ನಲ್ಲೂ ಆದಾಯ ತೆರಿಗೆಯ ದರ ಇಳಿಕೆಯನ್ನು ಕಾಣಲು ಹಾತೊರೆಯುತ್ತಿರುತ್ತಾನೆ.

ಭಾರತದಲ್ಲಿ ಆದಾಯ ತೆರಿಗೆ ದರ ಸದ್ಯ ದಂಡತೆರಿಗೆ (Surcharge), ಸೆಸ್ಸು ಸೇರಿದಂತೆ ಶೇ. 42.744 ಇದೆ. ಇದರಿಂದ ಕೆಲ ದೇಶವಾಸಿಗಳು ಬೇರೆ ದೇಶಗಳಲ್ಲಿ ತಮ್ಮ ಹಣವನ್ನು ಇರಿಸುವುದುಂಟು. ಇದನ್ನು ತಪ್ಪಿಸಬೇಕೆಂದರೆ ಆದಾಯ ತೆರಿಗೆ ದರವನ್ನು ಕಡಿಮೆ ಮಾಡುವುದು ಸರಿಯಾದ ಉಪಾಯ.

ಭಾರತದಲ್ಲಿ ಗರಿಷ್ಠ ಆದಾಯ ತೆರಿಗೆ ದರ ಶೇ. 30ರಷ್ಟಿದೆ. ಇದನ್ನು ಶೇ. 25ಕ್ಕೆ ಇಳಿಸಬೇಕು. ಗರಿಷ್ಠ ತೆರಿಗೆಯನ್ನು ವಾರ್ಷಿಕ 10 ಲಕ್ಷ ರೂಗಿಂತ ಹೆಚ್ಚು ಆದಾಯದವರಿಗೆ ವಿಧಿಸಲಾಗುತ್ತಿದೆ. ಗರಿಷ್ಠ ತೆರಿಗೆ ಹಾಕಲಾಗುವ ಮೊತ್ತವನ್ನು 20 ಲಕ್ಷಕ್ಕೆ ಏರಿಸಬೇಕೆಂಬ ಮನವಿ ಕೇಳಿಬಂದಿದೆ.

ಇದೇ ವೇಳೆ, ಸರ್ಕಾರ ಎರಡು ರೀತಿ ತೆರಿಗೆ ವ್ಯವಸ್ಥೆಯನ್ನು ಮಾಡಿದೆ. ಒಂದು, ಈ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ವ್ಯವಸ್ಥೆ. ಮತ್ತೊಂದು ಹೊಸ ವ್ಯವಸ್ಥೆ. ವಿವಿಧ ತೆರಿಗೆ ವಿನಾಯಿತಿ, ರಿಯಾಯಿತಿಗಳನ್ನು ಬಳಸದಿದ್ದವರಿಗೆ ಈ ಹೊಸ ವ್ಯವಸ್ಥೆ ಇರುತ್ತದೆ. ಇದರಲ್ಲಿ ಏಳು ತೆರಿಗೆ ಸ್ಲಾಬ್ ಗಳನ್ನು ಮಾಡಲಾಗಿದೆ. ಇದರಲ್ಲಿ ಗರಿಷ್ಠ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ.

ಇದನ್ನು ಓದಿ:Budget Expectation: ಲಾಭ ತರದ ಡಿಜಿಟಲ್ ಪೇಮೆಂಟ್: 8000 ಕೋಟಿ ರೂ ಧನಸಹಾಯಕ್ಕೆ ಅಪೇಕ್ಷೆ

ತೆರಿಗೆ ರಿಯಾಯಿತಿಗಳು

ಕೆಲ ಹೂಡಿಕೆ, ಉಳಿತಾಯ ಹಣಕ್ಕೆ ಸರ್ಕಾರ ಕೆಲ ತೆರಿಗೆ ವಿನಾಯಿತಿ, ರಿಯಾಯಿತಿಗಳನ್ನು ನೀಡುತ್ತದೆ. ಉದಾಹರಣೆಗೆ, ವಿಮೆ, ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗೆ ತೊಡಗಿಸುವ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಇನ್ನು, ಉಳಿತಾಯ ಯೋಜನೆಗಳಿಂದ ಸಿಗುವ ಬಡ್ಡಿ ಹಣಕ್ಕೂ ತೆರಿಗೆ ರಿಯಾಯಿತಿ ಇರುತ್ತದೆ.

ಈ ರೀತಿ ಬಡ್ಡಿ ಹಣದಿಂದ ರೂ 10 ಸಾವಿರದವರೆಗೂ ತೆರಿಗೆ ರಿಯಾಯಿತಿ ಪಡೆಯಬಹುದು. ಈಗ ಈ ಮಿತಿಯನ್ನು 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂಬ ಮನವಿ ಕೇಳಿಬಂದಿದೆ.

ಶಿಕ್ಷಣ ವೆಚ್ಚಕ್ಕೆ ಪ್ರತ್ಯೇಕ ತೆರಿಗೆ ವಿನಾಯಿತಿ

ಸದ್ಯ ಆದಾಯ ತೆರಿಗೆ 80ಸಿ ಅಡಿಯಲ್ಲಿ ವಿವಿಧ ಹೂಡಿಕೆ, ವೆಚ್ಚಗಳಿಗೆ ಗರಿಷ್ಠ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷ ರೂ ಇದೆ. ಇದರ ವ್ಯಾಪ್ತಿಯಲ್ಲೇ ಮಕ್ಕಳ ಶಿಕ್ಷಣ ವೆಚ್ಚವೂ ಬರುತ್ತದೆ. ಆದರೆ, ಈಗಿನ ಕಾಲಮಾನದಲ್ಲಿ ಸಾಮಾನ್ಯ ಶಾಲೆಯ ಶುಲ್ಕವೇ ಕನಿಷ್ಠ ಒಂದು ಲಕ್ಷ ರೂ ಆಗಿದೆ. ಇಂಥ ಸಂದರ್ಭದಲ್ಲಿ ಶಿಕ್ಷಣ ವೆಚ್ಚವನ್ನು ಇತರ ಖರ್ಚುಗಳ ಗುಂಪಿಗೆ ಸೇರಿಸುವುದಕ್ಕಿಂತ ಅದಕ್ಕೆಂದೇ ಪ್ರತ್ಯೇಕ ತೆರಿಗೆ ವಿನಾಯಿತಿ ವ್ಯವಸ್ಥೆ ಮಾಡಬೇಕು ಎಂಬುದು ಸಾಮಾನ್ಯ ಜನರ ಬೇಡಿಕೆ.

ಎಲೆಕ್ಟ್ರಿಕ್ ವಾಹನ ಖರೀದಿ ವೆಚ್ಚಕ್ಕೆ ತೆರಿಗೆ ವಿನಾಯಿತಿ

ಈಗ ವಿದ್ಯುತ್ ಚಾಲಿತ ವಾಹನಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಸರ್ಕಾರದಿಂದ ಬಹಳ ಉತ್ತೇಜನ ಸಿಗುತ್ತಿದೆ. ಜನಸಾಮಾನ್ಯರೂ ಕೂಡ ಪರಿಸರ ಮಾಲಿನ್ಯದ ದೃಷ್ಟಿಯಿಂದ ಇವಿಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಇವಿ ಖರೀದಿಗೆ ತೆಗೆದುಕೊಳ್ಳುವ ಸಾಲಕ್ಕೆ ನಾವು ಕಟ್ಟುವ ಬಡ್ಡಿ ಹಣವನ್ನು ತೆರಿಗೆ ವಿನಾಯಿತಿ ಪಡೆಯಲು ಉಪಯೋಗಿಸಬಹುದು. ಸೆಕ್ಷನ್ 80ಇಇಬಿ ಪ್ರಕಾರ 2023 ಮಾರ್ಚ್ 31ರವರೆಗೆ ತೆಗೆದುಕೊಳ್ಳಲಾಗುವ ಇಂಥ ಸಾಲಗಳಿಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ. ಆದರೆ, ಈ ಅವಕಾಶವನ್ನು 2025ರವರೆಗೂ ವಿಸ್ತರಿಸಬೇಕೆಂಬ ಬೇಡಿಕೆ ಇದೆ.

ಹೆಲ್ತ್ ಇನ್ಷೂರೆನ್ಸ್ ತೆರಿಗೆ ವಿನಾಯಿತಿ

ಇಂದಿನ ರೋಗ ರುಜಿನಗಳ ಕಾಲಮಾನದಲ್ಲಿ ಆರೋಗ್ಯ ವಿಮೆ ಅತ್ಯಂತ ಅಗತ್ಯಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಸೆಕ್ಷನ್ 80ಡಿ ಅಡಿಯಲ್ಲಿ ಆರೋಗ್ಯ ವಿಮೆ ಮೇಲಿನ ವೆಚ್ಚಕ್ಕೆ ಇರುವ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂವರೆಗೂ ಏರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Thu, 12 January 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ