IPL 2025: 6,6,6,6,6,6,6,6.! ಕೆಕೆಆರ್ ವಿರುದ್ಧ ಪೂರನ್ ಪರಾಕ್ರಮ; ವಿಡಿಯೋ ನೋಡಿ
Nicholas Pooran's Explosive 87 Runs: ಲಕ್ನೋ ಸೂಪರ್ ಜೈಂಟ್ಸ್ ಏತಕ್ಕೆ ನಿಕೋಲಸ್ ಪೂರನ್ ಅವರನ್ನು 21 ಕೋಟಿ ರೂಪಾಯಿ ಖರೀದಿಸಿತು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೆಕೆಆರ್ ವಿರುದ್ಧ ಅವರು 36 ಎಸೆತಗಳಲ್ಲಿ ಅಜೇಯ 87 ರನ್ ಗಳಿಸಿದರು. 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಒಳಗೊಂಡ ಈ ಇನ್ನಿಂಗ್ಸ್‌ನಿಂದಾಗಿ ಲಕ್ನೋ ತಂಡ 238 ರನ್ ಗಳಿಸಿತು.
ನಿಕೋಲಸ್ ಪೂರನ್… ಲಕ್ನೋ ಸೂಪರ್‌ಜೈಂಟ್ಸ್ ಈ ಆಟಗಾರನಿಗೆ 21 ಕೋಟಿ ರೂಪಾಯಿಗಳನ್ನು ಏಕೆ ನೀಡಿತು ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಕೆಕೆಆರ್ ವಿರುದ್ಧ ಕೇವಲ 36 ಎಸೆತಗಳಲ್ಲಿ 87 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಬಾರಿಸಿದ ಪೂರನ್ ಅವರ ಇನ್ನಿಂಗ್ಸ್ನ ಆಧಾರದ ಮೇಲೆ ಲಕ್ನೋ ತಂಡ 20 ಓವರ್‌ಗಳಲ್ಲಿ 238 ರನ್ ಗಳಿಸಿತು.
ಪೂರನ್ ಪರಾಕ್ರಮ
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ ನಿಕೋಲಸ್ ಪೂರನ್ 11 ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದರು. ಬಂದ ತಕ್ಷಣ ಹೊಡಿಬಡಿ ಆಟಕ್ಕೆ ಮುಂದಾದ ಪೂರನ್ ವರುಣ್ ಚಕ್ರವರ್ತಿ ಎಸೆದ 14 ನೇ ಓವರ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದರು. ನಂತರ, ಸುನಿಲ್ ನರೈನ್ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಹರ್ಷಿತ್ ರಾಣಾ ಅವರ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ 21 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು.
ಅರ್ಧಶತಕದ ನಂತರವೂ ಆರ್ಭಟ ಮುಂದುವರೆಸಿದ ನಿಕೋಲಸ್ ಪೂರನ್ ತಮ್ಮ 87 ರನ್‌ಗಳ ಇನ್ನಿಂಗ್ಸ್‌ನಲ್ಲಿ ಐಪಿಎಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಂಬರ್ 1 ಸ್ಥಾನವನ್ನು ಮರಳಿ ಪಡೆದರು. ಈ ಸೀಸನ್‌ನಲ್ಲಿ ಪೂರನ್ 24 ಸಿಕ್ಸರ್‌ಗಳ ಸಹಾಯದಿಂದ 288 ರನ್ ಕಲೆಹಾಕಿದ್ದಾರೆ. ಪೂರನ್ ಅವರ ಬ್ಯಾಟಿಂಗ್ ಸರಾಸರಿ 71 ಕ್ಕಿಂತ ಹೆಚ್ಚಿದ್ದು, 225.98 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಸೀಸನ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಪೂರನ್ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ