Gold Price on 28th August 2022 | ಬೆಂಗಳೂರು: ಭಾರತದಲ್ಲಿ ಸತತ 3 ದಿನಗಳಿಂದ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಭಾರೀ ಕುಸಿತ ಕಂಡಿದೆ. ಇಂದು ಬಂಗಾರದ ಬೆಲೆ ಬರೋಬ್ಬರಿ 380 ರೂ. ಇಳಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 600 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. ಇದ್ದುದು 47,300 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,980 ರೂ. ಇದ್ದುದು 51,600 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,050 ರೂ. ಮುಂಬೈ- 47,300 ರೂ, ದೆಹಲಿ- 47,450 ರೂ, ಕೊಲ್ಕತ್ತಾ- 47,300 ರೂ, ಬೆಂಗಳೂರು- 47,350 ರೂ, ಹೈದರಾಬಾದ್- 47,300 ರೂ, ಕೇರಳ- 47,300 ರೂ, ಪುಣೆ- 47,330 ರೂ, ಮಂಗಳೂರು- 47,350 ರೂ, ಮೈಸೂರು- 47,350 ರೂ. ಇದೆ.
ಇದನ್ನೂ ಓದಿ: Gold Price Today: ಬೆಂಗಳೂರು ಸೇರಿ ಹಲವೆಡೆ ಚಿನ್ನದ ಬೆಲೆ 320 ರೂ. ಏರಿಕೆ; ಬೆಳ್ಳಿ ದರವೂ ಹೆಚ್ಚಳ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,420 ರೂ, ಮುಂಬೈ- 51,600 ರೂ, ದೆಹಲಿ- 51,760 ರೂ, ಕೊಲ್ಕತ್ತಾ- 51,600 ರೂ, ಬೆಂಗಳೂರು- 51,650 ರೂ, ಹೈದರಾಬಾದ್- 51,600 ರೂ, ಕೇರಳ- 51,600 ರೂ, ಪುಣೆ- 51,630 ರೂ, ಮಂಗಳೂರು- 51,650 ರೂ, ಮೈಸೂರು- 51,650 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ಬೆಲೆಯಲ್ಲಿ ಇಂದು 600 ರೂ. ಕುಸಿತವಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 55,400 ರೂ. ಇದ್ದುದು ಇಂದು 54,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,700 ರೂ., ಮಂಗಳೂರು- 60,700 ರೂ., ಮುಂಬೈ- 54,800 ರೂ, ಚೆನ್ನೈ- 60,700 ರೂ, ದೆಹಲಿ- 54,800 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 54,800 ರೂ. ಆಗಿದೆ.