ಬೆಂಗಳೂರು: ನಿನ್ನೆ 230 ರೂ. ಏರಿಕೆಯಾಗಿದ್ದ ಚಿನ್ನದ ಬೆಲೆ (Gold Prices) ಇಂದು ಮತ್ತೆ ಗಗನಕ್ಕೇರಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು 10 ಗ್ರಾಂ.ಗೆ 260 ರೂ. ಏರಿಕೆಯಾಗಿದೆ. ಆದರೆ, ನಿನ್ನೆ ದಾಖಲೆಯ 4,800 ರೂ. ಏರಿಕೆ ಕಂಡಿದ್ದ ಬೆಳ್ಳಿಯ ಬೆಲೆ (Silver Price) ಇಂದು ಒಂದೇ ದಿನದಲ್ಲಿ 4,200 ರೂ. ಕುಸಿತ ಕಂಡಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 48,000 ರೂ. ಇದ್ದುದು 48,250 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,370 ರೂ. ಇದ್ದುದು 52,630 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. 2 ದಿನಗಳ ಹಿಂದೆ ಚೆನ್ನೈ- 48,820 ರೂ. ಮುಂಬೈ- 48,250 ರೂ, ದೆಹಲಿ- 48,250 ರೂ, ಕೊಲ್ಕತ್ತಾ- 48,250 ರೂ, ಬೆಂಗಳೂರು- 48,250 ರೂ, ಹೈದರಾಬಾದ್- 48,250 ರೂ, ಕೇರಳ- 48,250 ರೂ, ಪುಣೆ- 48,350 ರೂ, ಮಂಗಳೂರು- 48,250 ರೂ, ಮೈಸೂರು- 48,250 ರೂ. ಇದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,260 ರೂ, ಮುಂಬೈ- 52,630 ರೂ, ದೆಹಲಿ- 52,630 ರೂ, ಕೊಲ್ಕತ್ತಾ- 52,630 ರೂ, ಬೆಂಗಳೂರು- 52,630 ರೂ, ಹೈದರಾಬಾದ್- 52,630 ರೂ, ಕೇರಳ- 52,630 ರೂ, ಪುಣೆ- 52,730 ರೂ, ಮಂಗಳೂರು- 52,630 ರೂ, ಮೈಸೂರು- 52,630 ರೂ. ಆಗಿದೆ.
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಮಾತ್ರ ಕುಸಿತವಾಗುತ್ತಲೇ ಇದೆ.
ಇಂದಿನ ಬೆಳ್ಳಿಯ ದರ:
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 4,200 ರೂ. ಕುಸಿತ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 71,000 ರೂ. ಇದ್ದುದು ಇಂದು 66,800 ರೂ.ಗೆ ಕುಸಿತವಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,300 ರೂ, ಮೈಸೂರು- 71,300 ರೂ., ಮಂಗಳೂರು- 71,300 ರೂ., ಮುಂಬೈ- 71,300 ರೂ, ಚೆನ್ನೈ- 71,300 ರೂ, ದೆಹಲಿ- 66,800 ರೂ, ಹೈದರಾಬಾದ್- 71,300 ರೂ, ಕೊಲ್ಕತ್ತಾ- 66,800 ರೂ. ಆಗಿದೆ.
ಇದನ್ನೂ ಓದಿ: Gold Price Today: ಬೆಳ್ಳಿ ಬೆಲೆ 1 ಕೆಜಿಗೆ 300 ರೂ. ಕುಸಿತ; ಇಂದಿನ ಚಿನ್ನದ ದರ ಹೀಗಿದೆ
Gold Rate: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ದರ ಹೀಗಿದೆ