Gold Price Today: ಇಂದು ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಬೆಲೆ ಕೊಂಚ ಇಳಿಕೆ

Silver Price Today: ಬೆಂಗಳೂರಿನಲ್ಲಿ 22 ಕ್ಯಾರೆಟ್ ಹತ್ತು ಗ್ರಾಂಗೆ 49,850 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,98,500 ರೂಪಾಯಿ ಇದೆ. ನಿನ್ನೆಯೂ ಚಿನ್ನದ ದರ ಇಷ್ಟೇ ಇತ್ತು. ಇನ್ನು 24 ಕ್ಯಾರೆಟ್ 10 ಗ್ರಾಂಗೆ 54,380 ರೂ. ಇದ್ದರೆ, 100 ಗ್ರಾಂಗೆ 5,43,800 ರೂಪಾಯಿ ಇದೆ.

Gold Price Today: ಇಂದು ಚಿನ್ನದ ಬೆಲೆ ಸ್ಥಿರ, ಬೆಳ್ಳಿ ಬೆಲೆ ಕೊಂಚ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Apr 20, 2022 | 9:27 AM

ಬೆಂಗಳೂರು: ಸದ್ಯ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಮದುವೆಯಂತಹ ಕಾರ್ಯಗಳಿಗೆ ಆಭರಣ ಬೇಕಾಗುತ್ತದೆ. ಹೀಗಾಗಿ ಆಭರಣದ ದರ ಎಷ್ಟಿದೆ ಅಂತ ಹಲವರಿಗೆ ಕುತೂಹಲ ಇರುತ್ತದೆ. ಇಂದು (ಏಪ್ರಿಲ್ 20) ಆಭರಣ ಕೊಳ್ಳುವವರಿಗೆ ಚಿನ್ನ ಮತ್ತ ಬೆಳ್ಳಿ ಬೆಲೆ ಎಷ್ಟಿದೆ ಅಂತ ಇಲ್ಲಿ ತಿಳಿಸಲಾಗಿದೆ. ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ದೇಶದಲ್ಲಿ ಆಭರಣದ ಬೆಲೆ ಹೆಚ್ಚಾಗಿದೆ. ಆದರೆ ಮದುವೆಯಂತಹ ಕಾರ್ಯಗಳಿಗೆ ಆಭರಣದ ಬೆಲೆ ಹೆಚ್ಚಾದರೂ ಕೊಳ್ಳುವ ಅನಿವಾರ್ಯ ಇದೆ. ಇಂದಿನ ದರ ಗಮನಿಸಿದಾಗ ಚಿನ್ನ (Gold) ಮತ್ತು ಬೆಳ್ಳಿ (Silver) ಬೆಲೆ ಹೆಚ್ಚಾಗಿಲ್ಲ. ನಿನ್ನೆ ಇದ್ದ ದರವೇ ಇಂದು ಇದೆ. ಆದರೆ ಕೆಲ ನಗರಗಳಲ್ಲಿ ಬೆಳ್ಳಿ ಬೆಲೆ ಇಳಿದಿದೆ.

ಬೆಂಗಳೂರಿನಲ್ಲಿ ಆಭರಣದ ಬೆಲೆ ಹೀಗಿದೆ: ಬೆಂಗಳೂರಿನಲ್ಲಿ 22 ಕ್ಯಾರೆಟ್ ಹತ್ತು ಗ್ರಾಂಗೆ 49,850 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,98,500 ರೂಪಾಯಿ ಇದೆ. ನಿನ್ನೆಯೂ ಚಿನ್ನದ ದರ ಇಷ್ಟೇ ಇತ್ತು. ಇನ್ನು 24 ಕ್ಯಾರೆಟ್ 10 ಗ್ರಾಂಗೆ 54,380 ರೂ. ಇದ್ದರೆ, 100 ಗ್ರಾಂಗೆ 5,43,800 ರೂಪಾಯಿ ಇದೆ. ಒಂದು ಕೆಜಿ ಬೆಳ್ಳಿಗೆ ನಿನ್ನೆ 75,200 ರೂ. ಇತ್ತು ಇಂದು 74,900 ರೂ. ಆಗಿದೆ. ನಿನ್ನೆಗಿಂತ 300 ರೂಪಾಯಿ ಕಡಿಮೆ ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ: ಮುಂಬೈ: 49,850 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ), 54,380 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಒಂದು ಕೆಜಿ ಬೆಳ್ಳಿಗೆ ನಗರದಲ್ಲಿ 70,000 ರೂ. ಇದೆ. ನಿನ್ನೆಗಿಂತ 100 ರೂ. ಹೆಚ್ಚಾಗಿದೆ.

ಮಂಗಳೂರು: 49,850 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ) 54,380 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಗೆ 70,000 ಇದೆ. ನಿನ್ನೆಗಿಂತ 5,200 ರೂ. ಕಡಿಮೆಯಾಗಿದೆ.

ಮೈಸೂರು: 49,850 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ) 54,380 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಲ್ಲಿ ಒಂದು ಕೆಜಿ ಬೆಳ್ಳಿಗೆ 70,000 ರೂ. ಇದೆ. ಇಲ್ಲಿಯೂ ಕೂಡಾ ನಿನ್ನಗಿಂತ 5,200 ರೂಪಾಯಿ ಕಡಿಮೆಯಾಗಿದೆ.

ಚೆನ್ನೈ: 50,290 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ) 54,870 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಲ್ಲಿ ಒಂದು ಕೆಜಿ ಬೆಳ್ಳಿಗೆ 74,900 ರೂ. ಇದೆ. ನಿನ್ನೆಗಿಂತ 300 ರೂಪಾಯಿ ಕಡಿಮೆಯಾಗಿದೆ.

ದೆಹಲಿ: 49,850 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ) 54,380 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ದೆಹಲಿಯಲ್ಲಿ ಬೆಳ್ಳಿ ದರ 1 ಕೆಜಿಗೆ 70,000 ಇದೆ. ನಿನ್ನೆಗಿಂತ 100 ರೂಪಾಯಿ ಹೆಚ್ಚಾಗಿದೆ.

ಹೈದರಾಬಾದ್: 49,850 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನ) 54,380 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನ). ಇಲ್ಲಿ ಒಂದು ಕೆಜಿ ಬೆಳ್ಳಿಗೆ 74,900 ರೂಪಾಯಿ ನಿಗದಿಯಾಗಿದೆ. ನಿನ್ನೆಗಿಂತ 300 ರೂ. ಕಡಿಮೆಯಾಗಿದೆ.

ಇದನ್ನೂ ಓದಿ

ನಟಿ ಆಗ್ಬೇಕು ಅಂತ ಮನೆ ಬಿಟ್ಟು ಓಡಿಬಂದಿದ್ದ ಯುವತಿ: ಇಂದು ಏನಾಗಿದ್ದಾರೆ ನೋಡಿ; ಇದು ಶಾಲಿನಿ ಸಿನಿಜರ್ನಿ

ದೇವರಾಜ ಮಾರುಕಟ್ಟೆ ಹೊಸದಾಗಿ ನಿರ್ಮಾಣಕ್ಕೆ ವಿರೋಧಿಸಿ ಮೈಸೂರಿನ ಚಿಕ್ಕಗಡಿಯಾರ ಬಳಿ ಇಂದು ಪ್ರತಿಭಟನೆ

Published On - 9:03 am, Wed, 20 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ