ಆಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಕಷ್ಟದ ಸಂದರ್ಭದಲ್ಲಿ ಕೈ ಕೂಡಾ ಹಿಡಿಯುತ್ತದೆ. ಕಷ್ಟದ ಕಾಲದಲ್ಲಿ ಕೈ ಹಿಡಿಯುವ ಆಭರಣದ ಬೆಲೆ ಸ್ಥಿರವಾಗಿರಲ್ಲ. ನಿನ್ನೆಗಿಂತ ಇವತ್ತು ಬೆಲೆ ಏರಿಕೆ ಆಗಬಹುದು, ಅಥವಾ ಇಳಿಕೆಯೂ ಆಗಬಹುದು. ಬೆಲೆಯಲ್ಲಿ ಪ್ರತಿದಿನ ಏರಿಳಿತ ಕಾಣಬಹುದು. ಹಾಗಾದರೆ ಇಂದು (ಡಿಸೆಂಬರ್ 9) ಆಭರಣದ ಬೆಲೆ ಎಷ್ಟಿದೆ? ಇವತ್ತು ಆಭರಣ ಕೊಳ್ಳುವವರಿಗೆ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಅಂತ ಇಲ್ಲಿ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,950 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,49,500 ರೂ. ಇದೆ. ಚಿನ್ನದ ಬೆಲೆ ಗಮನಿಸಿದಾಗ ನಿನ್ನೆಗಿಂತ ಇಂದು ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. 10 ಗ್ರಾಂಗೆ 190 ರೂ. ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,040 ರೂ. ಇದ್ದರೆ, 100 ಗ್ರಾಂಗೆ 4.90,400 ರೂ. ಇದೆ. ಇಂದು 24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನಕ್ಕೆ 210 ರೂಪಾಯಿ ಏರಿಕೆಯಾಗಿದೆ. ಇನ್ನು ನಗರದಲ್ಲಿ ಬೆಳ್ಳಿ ದರ 1 ಕೆಜಿಗೆ 300 ರೂಪಾಯಿ ಇಳಿಕೆಯಾಗಿದೆ. ಸದ್ಯ ಒಂದು ಕೆಜಿ ಬೆಳ್ಳಿ ಬೆಲೆ 61,600 ರೂ. ನಿಗದಿಯಾಗಿದೆ.
ಆಭರಣದ ಬೆಲೆ ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲೂ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,850 ರೂ. ಇದೆ. 100 ಗ್ರಾಂಗೆ 4,68,500 ರೂ. ನಿಗದಿಯಾಗಿದೆ. ಅಂದರೆ ನಿನ್ನೆಗಿಂತ 22 ಕ್ಯಾರೆಟ್ 10 ಗ್ರಾಂ ಚಿನಕ್ಕೆ 10 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 47,850 ರೂ. ಇದೆ. ಇದೇ ಚಿನ್ನ100 ಗ್ರಾಂಗೆ 4,78,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಪ್ರತಿ 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಹೆಚ್ಚಾಗಿದೆ. ಮುಂಬೈನಲ್ಲಿ ಒಂದು ಕೆಜಿ ಬೆಳ್ಳಿಗೆ 61,600 ರೂಪಾಯಿ ಇದೆ.
ಆಭರಣದ ಬೆಲೆ ದೆಹಲಿಯಲ್ಲಿ ಹೀಗಿದೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,110 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,71,100 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂಗೆ 51,400 ರೂಪಾಯಿ ನಿಗದಿಯಾಗಿದ್ದು, 100 ಗ್ರಾಂಗೆ 5,14,000 ರೂ. ಇದೆ. ನಗರದಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಏರಿಕೆಯಾಗಿದೆ. ಇನ್ನು ಒಂದು ಕೆಜಿ ಬೆಳ್ಳಿ ದರ 61,600 ರೂ. ಇದೆ. ನಿನ್ನೆಗಿಂತ 300 ರೂಪಾಯಿ ದರ ಇಳಿಕೆಯಾಗಿದೆ.
ಇದನ್ನೂ ಓದಿ
Petrol Price Today: ಇಂದು ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಹೀಗಿದೆ
Karnataka Dams Water Level: ಡ್ಯಾಂಗಳಲ್ಲಿ ತಗ್ಗಿದ ನೀರು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ