Senior Citizens Special Fixed Deposits: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ನ ಈಚಿನ ಎಫ್​ಡಿ ದರ

ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ನಿಂದ ಹಿರಿಯ ನಾಗರಿಕರಿಗಾಗಿ ಈಗ ಇರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಎಷ್ಟು ಎಂಬುದರ ವಿವರ ಇಲ್ಲಿದೆ.

Senior Citizens Special Fixed Deposits: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ನ ಈಚಿನ ಎಫ್​ಡಿ ದರ
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on:Dec 09, 2021 | 12:02 PM

ದೇಶದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಖಾಸಗಿ ಬ್ಯಾಂಕ್​ಗಳಾದ ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್​ನಿಂದ ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತಿವೆ. ಕೊರೊನಾದ ಕಾರಣಕ್ಕೆ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಬಡ್ಡಿದರಗಳು ಕುಸಿಯುತ್ತಿರುವಾಗ ಹಿರಿಯ ನಾಗರಿಕರಿಗೆ ಸ್ವಲ್ಪ ಮಟ್ಟಿಗೆ ನೆರವಾಗಲು ಈ ವಿಶೇಷ ಎಫ್​.ಡಿ. ಯೋಜನೆಯನ್ನು 2020ರ ಮೇ ತಿಂಗಳಲ್ಲಿ ಪರಿಚಯಿಸಲಾಯಿತು.

ಎಚ್​ಡಿಎಫ್​ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್​ಡಿ ವಿಶೇಷ ಠೇವಣಿ ಆಫರ್‌ನ ಸಮಯದಲ್ಲಿ ಐದು ವರ್ಷದಿಂದ 10 ವರ್ಷಗಳ ಅವಧಿಗೆ 5 ಕೋಟಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್ ಅನ್ನು ಇಡಲು ಬಯಸುವ ಹಿರಿಯ ನಾಗರಿಕರಿಗೆ ಶೇ 0.25 ಹೆಚ್ಚುವರಿ ಪ್ರೀಮಿಯಂ (ಶೇ 0.50ಕ್ಕಿಂತ ಹೆಚ್ಚು) ನೀಡಲಾಗುತ್ತದೆ. 18ನೇ ಮೇ 2020ರಿಂದ 31ನೇ ಮಾರ್ಚ್ 2022ರ ವರೆಗೆ ಈ ಯೋಜನೆ ಇರುತ್ತದೆ. ಈ ವಿಶೇಷ ಕೊಡುಗೆಯು ಮೇಲ್ಕಂಡ ಅವಧಿಗೆ ಹಿರಿಯ ನಾಗರಿಕರ ಹೊಸ ಎಪ್.ಡಿ. ಹಾಗೂ ರಿನೀವಲ್​ಗೆ ಅನ್ವಯಿಸುತ್ತದೆ.

ಹಿರಿಯ ನಾಗರಿಕರ ಬಡ್ಡಿ ದರಕ್ಕಾಗಿ ಎಚ್​ಡಿಎಫ್​ಸಿ ಬ್ಯಾಂಕ್ ವಿಶೇಷ ಎಫ್​.ಡಿ. ಯೋಜನೆ ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಅಡಿಯಲ್ಲಿ ನಿಶ್ಚಿತ ಠೇವಣಿ ಇರಿಸಿದರೆ ಬಡ್ಡಿ ದರವು ಶೇ 6.25 ಆಗಿದೆ.

ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ ಎಫ್​ಡಿ ಹಿರಿಯ ನಾಗರಿಕ ಗ್ರಾಹಕರು ಸೀಮಿತ ಅವಧಿಗೆ ಶೇ 0.20ರಷ್ಟು ಹೆಚ್ಚುವರಿ ಬಡ್ಡಿ ದರವನ್ನು ಪಡೆಯುತ್ತಾರೆ ಮತ್ತು ವರ್ಷಕ್ಕೆ ಶೇ 0.50ರಷ್ಟು ಹೆಚ್ಚುವರಿ ದರವನ್ನು ಪಡೆಯುತ್ತಾರೆ. ಸ್ಕೀಮ್ ಅವಧಿಯಲ್ಲಿ ತೆರೆದಿರುವ ಹೊಸ ಠೇವಣಿಗಳು ಮತ್ತು ನವೀಕರಿಸಿದ ಠೇವಣಿಗಳ ಮೇಲೆ ಹೆಚ್ಚುವರಿ ದರವು ಲಭ್ಯವಿರುತ್ತದೆ.

ಅರ್ಹ ಎಫ್​ಡಿ ಅವಧಿ: 5 ವರ್ಷದ 1 ದಿನದಿಂದ 10 ವರ್ಷಗಳವರೆಗೆ

ಅನ್ವಯಿಸುವ ಅವಧಿ: 20ನೇ ಮೇ 2020ರಿಂದ 8ನೇ ಏಪ್ರಿಲ್ 2022

2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಒಂದೇ ಎಫ್​ಡಿಯಲ್ಲಿ ಅನ್ವಯಿಸುತ್ತದೆ

ಹಿರಿಯ ನಾಗರಿಕರ ಬಡ್ಡಿ ದರಕ್ಕಾಗಿ ICICI ಬ್ಯಾಂಕ್ ವಿಶೇಷ FD ಯೋಜನೆ ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ ಎಫ್‌ಡಿ ಯೋಜನೆಯು ವರ್ಷಕ್ಕೆ ಶೇ 6.30ರಷ್ಟು ಬಡ್ಡಿ ದರ ನೀಡುತ್ತದೆ.

ಹಿರಿಯ ನಾಗರಿಕರಿಗಾಗಿ ಎಸ್​ಬಿಐ Wecare ಠೇವಣಿ ರೀಟೇಲ್ ಟರ್ಮ್​ ಡೆಪಾಸಿಟ್ (TD) ವಿಭಾಗದಲ್ಲಿ ಪರಿಚಯಿಸಲಾದ ಹಿರಿಯ ನಾಗರಿಕರಿಗಾಗಿ ವಿಶೇಷ “SBI Wecare” ಠೇವಣಿ ಯೋಜನೆಯಲ್ಲಿ 30 ಬೇಸಿಸ್​ ಪಾಯಿಂಟ್ ಹೆಚ್ಚುವರಿ ಪ್ರೀಮಿಯಂ (ಅಸ್ತಿತ್ವದಲ್ಲಿರುವ 50 ಬಿಪಿಎಸ್​ಗಿಂತ ಹೆಚ್ಚಿನದು) ಹಿರಿಯ ನಾಗರಿಕರಿಗೆ ಅವರ ರೀಟೇಲ್​ TDಗಾಗಿ ಪಾವತಿಸಲಾಗುತ್ತದೆ. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಈ ಠೇವಣಿ ಯೋಜನೆಯನ್ನು 31ನೇ ಮಾರ್ಚ್ 2022ರವರೆಗೆ ವಿಸ್ತರಿಸಲಾಗಿದೆ.

ಹಿರಿಯ ನಾಗರಿಕರ ಬಡ್ಡಿ ದರಕ್ಕಾಗಿ ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಡಿ ನಿಶ್ಚಿತ ಠೇವಣಿ ಇರಿಸಿದರೆ ಎಫ್‌ಡಿಗೆ ಅನ್ವಯವಾಗುವ ಬಡ್ಡಿ ದರ ಶೇ 6.20ರಷ್ಟಾಗಿದೆ.

ಇದನ್ನೂ ಓದಿ: Personal Finance: ಹಣದ ಎಮರ್ಜೆನ್ಸಿ ಇದ್ದಲ್ಲಿ ಎಫ್​ಡಿ ಮೇಲೆ ಸಾಲ ತೆಗೆದುಕೊಳ್ಳೋದಾ ಅಥವಾ ಎಫ್​ಡಿ ಮುರಿಸೋದಾ?

Published On - 12:01 pm, Thu, 9 December 21

ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ