Gold Rate Today Bangalore: 11,800 ರೂ ದಾಟಿದ ಚಿನ್ನದ ಬೆಲೆ; ಇವತ್ತಿನ ದರಪಟ್ಟಿ

Bullion Market 2025 October 15th: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಮುಂದುವರಿಯುತ್ತಲೇ ಇದೆ. ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 20 ರೂ ಹೆಚ್ಚಿದೆ. ಬೆಳ್ಳಿ ಬೆಲೆ 1 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 11,795 ರೂನಿಂದ 11,815 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 12,889 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 190 ರೂಗೆ ಏರಿದೆ. ಚೆನ್ನೈ ಇತ್ಯಾದಿ ಕಡೆ ಬರೋಬ್ಬರಿ 207 ರೂ ಏರಿಕೆ ಆಗಿದೆ.

Gold Rate Today Bangalore: 11,800 ರೂ ದಾಟಿದ ಚಿನ್ನದ ಬೆಲೆ; ಇವತ್ತಿನ ದರಪಟ್ಟಿ
ಚಿನ್ನ

Updated on: Oct 15, 2025 | 10:51 AM

ಬೆಂಗಳೂರು, ಅಕ್ಟೋಬರ್ 15: ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಿದೇಶಗಳಲ್ಲಿ ಕಡಿಮೆ ಆದರೂ ಅಥವಾ ಏರಿಕೆ ನಿಂತರೂ, ಭಾರತದಲ್ಲಿ ದಣಿವಾರುತ್ತಿಲ್ಲ. ಎಗ್ಗಿಲ್ಲದೇ ಬೆಲೆ ಏರುತ್ತಿವೆ. ಇಂದು ಬುಧವಾರ ಎರಡೂ ಬೆಲೆಗಳು ತೀರಾ ಹೆಚ್ಚಲ್ಲದಿದ್ದರೂ ಅಲ್ಪ ಮಟ್ಟಿಗೆ ದುಬಾರಿಗೊಂಡಿವೆ. ಚಿನ್ನದ ಬೆಲೆ (gold rate) ಗ್ರಾಮ್​ಗೆ 20 ರೂ ಹೆಚ್ಚಿದರೆ, ಬೆಳ್ಳಿ ಬೆಲೆ ಒಂದು ರೂ ಹೆಚ್ಚಿದೆ. ಬೆಳ್ಳಿ ಬೆಲೆ 207 ರೂಗೆ ಏರಿ ಮತ್ತೆ ಹೊಸ ದಾಖಲೆ ಬರೆದಿದೆ. ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 11,800 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,18,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,28,890 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,18,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 19,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 20,700 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 15ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,889 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,815 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,697 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,889 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,815 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 11,815 ರೂ
  • ಚೆನ್ನೈ: 11,815 ರೂ
  • ಮುಂಬೈ: 11,815 ರೂ
  • ದೆಹಲಿ: 11,830 ರೂ
  • ಕೋಲ್ಕತಾ: 11,815 ರೂ
  • ಕೇರಳ: 11,815 ರೂ
  • ಅಹ್ಮದಾಬಾದ್: 11,820 ರೂ
  • ಜೈಪುರ್: 11,830 ರೂ
  • ಲಕ್ನೋ: 11,830 ರೂ
  • ಭುವನೇಶ್ವರ್: 11,815 ರೂ

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆ ವೇಗ ಕನಿಷ್ಠ ಹಂತ ಮುಟ್ಟಿರಬಹುದು; ಇನ್ನೇನಿದ್ದರೂ ಮೇಲೇರುವ ಸಮಯ: ಎಚ್​ಎಸ್​ಬಿಸಿ ಎಂಎಫ್ ವರದಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 555 ರಿಂಗಿಟ್ (11,590 ರುಪಾಯಿ)
  • ದುಬೈ: 460.75 ಡಿರಾಮ್ (11,066 ರುಪಾಯಿ)
  • ಅಮೆರಿಕ: 128.50 ಡಾಲರ್ (11,337 ರುಪಾಯಿ)
  • ಸಿಂಗಾಪುರ: 166 ಸಿಂಗಾಪುರ್ ಡಾಲರ್ (11,301 ರುಪಾಯಿ)
  • ಕತಾರ್: 460 ಕತಾರಿ ರಿಯಾಲ್ (11,133 ರೂ)
  • ಸೌದಿ ಅರೇಬಿಯಾ: 469 ಸೌದಿ ರಿಯಾಲ್ (11,033 ರುಪಾಯಿ)
  • ಓಮನ್: 48.60 ಒಮಾನಿ ರಿಯಾಲ್ (11,137 ರುಪಾಯಿ)
  • ಕುವೇತ್: 37.92 ಕುವೇತಿ ದಿನಾರ್ (10,909 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 190 ರೂ
  • ಚೆನ್ನೈ: 207 ರೂ
  • ಮುಂಬೈ: 190 ರೂ
  • ದೆಹಲಿ: 190 ರೂ
  • ಕೋಲ್ಕತಾ: 190 ರೂ
  • ಕೇರಳ: 207 ರೂ
  • ಅಹ್ಮದಾಬಾದ್: 190 ರೂ
  • ಜೈಪುರ್: 190 ರೂ
  • ಲಕ್ನೋ: 190 ರೂ
  • ಭುವನೇಶ್ವರ್: 207 ರೂ
  • ಪುಣೆ: 190

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ