ಭಾರತದ ಆರ್ಥಿಕ ಬೆಳವಣಿಗೆ ವೇಗ ಕನಿಷ್ಠ ಹಂತ ಮುಟ್ಟಿರಬಹುದು; ಇನ್ನೇನಿದ್ದರೂ ಮೇಲೇರುವ ಸಮಯ: ಎಚ್ಎಸ್ಬಿಸಿ ಎಂಎಫ್ ವರದಿ
HSBC MF's report predicts strong future growth of Indian economy: ಭಾರತದ ಆರ್ಥಿಕ ಬೆಳವಣಿಗೆಯ ಚಕ್ರವು ತಳಮಟ್ಟ ಮುಟ್ಟಿದೆ ಎಂದು ಎಚ್ಎಸ್ಬಿಸಿ ಎಂಎಫ್ನ ವರದಿಯಲ್ಲಿ ಶುಭನುಡಿಯಲಾಗಿದೆ. ಭಾರತದ ಮುಂದಿನ ಆರ್ಥಿಕ ಬೆಳವಣಿಗೆಯು ಹೆಚ್ಚಿನ ವೇಗದಲ್ಲಿ ಸಾಗಬಹುದು ಎಂದು ಹೇಳಲಾಗಿದೆ. ತೈಲ ಬೆಲೆ ಇಳಿಕೆ, ಬಡ್ಡಿದರ ಇಳಿಕೆ, ಹೂಡಿಕೆ ಹೆಚ್ಚಳ ಇತ್ಯಾದಿ ಅಂಶಗಳು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ಈ ವರದಿ ಅಭಿಪ್ರಾಯಪಟ್ಟಿದೆ.

ನವದೆಹಲಿ, ಅಕ್ಟೋಬರ್ 14: ಭಾರತದ ಆರ್ಥಿಕ ಬೆಳವಣಿಗೆ (GDP growth rate) ಶೇ. 8ಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಆಗಬಹುದು ಎನ್ನುವ ನಿರೀಕ್ಷೆ ಕೆಲ ವರ್ಷಗಳ ಹಿಂದೆ ಇತ್ತು. ಆದರೆ, ಶೇ. 6-7ರ ಆಸುಪಾಸಿನ ಬೆಳವಣಿಗೆಗೆ ತೃಪ್ತಿಪಡುವಂತಾಗಿದೆ. ಈ ಮಂದಗತಿಗೆ ನಿರ್ದಿಷ್ಟ ಕಾರಣಗಳು ಕಾಣದಾಗಿವೆ. ಆದರೆ, ಎಚ್ಎಸ್ಬಿಸಿ ಎಂಎಫ್ ಸಂಸ್ಥೆಯ ವರದಿಯೊಂದು ಖುಷಿಯ ವಿಚಾರ ಪ್ರಸ್ತುತಪಡಿಸಿದೆ. ಭಾರತದ ಅಭಿವೃದ್ಧಿ ಚಕ್ರ ತನ್ನ ಕನಿಷ್ಠ ಮಟ್ಟ ಮುಟ್ಟಿರಬಹುದು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಅಂದರೆ, ಜಿಡಿಪಿ ದರ ಕನಿಷ್ಠ ಹಂತ ಮುಟ್ಟಿದ್ದು, ಮುಂದಿನ ದಿನಗಳು ವೇಗದ ಚಲನೆಗೆ ಸಾಕ್ಷಿಯಾಗಲಿವೆ.
ಎಚ್ಎಸ್ಸಿಬಿ ಮ್ಯುಚುವಲ್ ಫಂಡ್ ಸಂಸ್ಥೆಯ ವರದಿ ಪ್ರಕಾರ ಭಾರತದ ಆರ್ಥಿಕತೆಯ ಎಲ್ಲಾ ಸಂಕೇತಗಳೂ ಸಕಾರಾತ್ಮಕವಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ವೇಗ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಗೂಗಲ್ನಿಂದ ಬೃಹತ್ ಎಐ ಹಬ್; 15 ಬಿಲಿಯನ್ ಡಾಲರ್ ಹೂಡಿಕೆ; ಪ್ರಧಾನಿ ಮೋದಿ ಸ್ವಾಗತ
‘ಬಡ್ಡಿದರ, ಹಣದ ಹರಿವಿನ ಚಕ್ರ, ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಸಹಜ ಮುಂಗಾರು ಮೊದಲಾದ ಅಂಶಗಳು ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಆದರೆ, ಜಾಗತಿಕ ವ್ಯಾಪಾರ ಅನಿಶ್ಚಿತತೆಯಿಂದ ಹಿಡಿದು ಖಾಸಗಿ ಬಂಡವಾಳ ವೆಚ್ಚದಲ್ಲಿ ಇಳಿಕೆವರೆಗೆ ಒಂದಷ್ಟು ಹಿನ್ನಡೆಗಳೂ ಇವೆ ಎಂದು ಈ ಎಚ್ಚರಿಸಿದೆ ಈ ವರದಿ.
ಇದನ್ನೂ ಓದಿ: ಟೆಲಿಗ್ರಾಮ್ ಸಿಇಒ ಆದರೂ ಮೊಬೈಲ್ ಮುಟ್ಟಲ್ಲ, ಒಂದೂ ಚಟ ಹೊಂದಿಲ್ಲ; ಪಾವೆಲ್ ದುರೋವ್ ಕಥೆ ಇದು…
ಈ ಹಿನ್ನಡೆಗಳ ಹೊರತಾಗಿಯೂ ಭಾರತದಲ್ಲಿ ಹೂಡಿಕೆಗಳು ಉತ್ತಮವಾಗಿ ಆಗಬಹುದು. ಖಾಸಗಿ ಬಂಡವಾಳ ವೆಚ್ಚದಲ್ಲಿ ಏರುಪೇರಾದರೂ ಸರ್ಕಾರಿ ಹೂಡಿಕೆಗಳು ಸರಾಗವಾಗಿ ಮುಂದುವರಿಯಬಹುದು. ಖಾಸಗಿ ಹೂಡಿಕೆಗಳೂ ಕೂಡ ಚೇತರಿಕೆ ಪಡೆಯಬಹುದು. ರಿಯಲ್ ಎಸ್ಟೇಟ್ ಚಕ್ರದಲ್ಲೂ ಚೇತರಿಕೆ ಆಗಬಹುದು ಎಂದು ಎಚ್ಎಸ್ಬಿಸಿ ಎಂಎಫ್ನ ಈ ವರದಿಯಲ್ಲಿ ವಿವರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




