AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್​ಕಾಯಿನ್​ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ

Robert Kiyosaki predicts biggest crash in world history to happen this year: ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತ ಈ ವರ್ಷ ಸಂಭವಿಸುತ್ತದೆ ಎಂದು ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕ ರಾಬರ್ಟ್ ಕಿಯೋಸಾಕಿ ಹೇಳಿದ್ದಾರೆ. ತಮ್ಮ ಪುಸ್ತಕದಲ್ಲಿ ಬರೆದಿರುವ ಅತಿದೊಡ್ಡ ಮಾರುಕಟ್ಟೆ ಕುಸಿತ ಸಂಭವಿಸುವ ಕಾಲ ಬಂತು ಎಂದಿದ್ದಾರೆ. ಕಾಗದದ ಹಣಕ್ಕೆ ಮೌಲ್ಯ ಇರೋದಿಲ್ಲ. ರಿಯಲ್ ಎಸ್ಟೇಟ್, ಚಿನ್ನ, ಬೆಳ್ಳಿಯಂತಹ ನೈಜ ಆಸ್ತಿಗಳು, ಬಿಟ್​ಕಾಯಿನ್​ನಂತಹ ವರ್ಚುವಲ್ ಅಸೆಟ್​ಗಳ ಮೇಲೆ ಹೂಡಿಕೆ ಮಾಡಿ ಎಂದಿದ್ದಾರೆ.

ಈ ವರ್ಷ ಬಿಗ್ ಕ್ರ್ಯಾಷ್; ಕರೆನ್ಸಿಗೆ ಇರಲ್ಲ ಮೌಲ್ಯ; ಚಿನ್ನ, ಬೆಳ್ಳಿ, ಬಿಟ್​ಕಾಯಿನ್​ನಂತಹ ಆಸ್ತಿಗಳಿಗೆ ಉಳಿಗಾಲ: ಕಿಯೋಸಾಕಿ
ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2025 | 1:11 PM

Share

ನವದೆಹಲಿ, ಅಕ್ಟೋಬರ್ 15: ಜಾಗತಿಕ ಇತಿಹಾಸದಲ್ಲೇ ಈ ಮೊದಲು ಕಂಡು ಕೇಳರಿಯದಷ್ಟು ಅತಿದೊಡ್ಡ ಮಾರುಕಟ್ಟೆ ಕುಸಿತ ಸಂಭವಿಸುತ್ತದೆ ಎಂದು ಹಲವಾರು ವರ್ಷಗಳಿಂದ ರಾಬರ್ಟ್ ಕಿಯೋಸಾಕಿ ನುಡಿಯುತ್ತಾ ಬಂದಿರುವ ಭಯಾನಕ ಭವಿಷ್ಯ ಈ ವರ್ಷ ಸಂಭವಿಸುತ್ತದಾ? ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಎನ್ನುವ ಜನಪ್ರಿಯ ಪುಸ್ತಕದ ಕರ್ತೃವಾದ ರಾಬರ್ಟ್ ಕಿಯೋಸಾಕಿ (Robert Kiyosaki) ಪದೇ ಪದೇ ತಮ್ಮ ಭವಿಷ್ಯವಾಣಿಯನ್ನು ಹೇಳುತ್ತಲೇ ಇದ್ದಾರೆ. ಇತ್ತೀಚೆಗೆ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಅವರು ಭವಿಷ್ಯ ನುಡಿದಂತೆ ಭಾರೀ ಮಾರುಕಟ್ಟೆ ಕುಸಿತವು ಈ ವರ್ಷವೇ ಸಂಭವಿಸುತ್ತದಂತೆ.

78 ವರ್ಷದ ರಾಬರ್ಟ್ ಕಿಯೋಸಾಕಿ ತಮ್ಮ ಎಕ್ಸ್ ಅಕೌಂಟ್​ನಿಂದ ಇತ್ತೀಚೆಗೆ ಈ ಸಂಬಂಧ ಒಂದು ಪೋಸ್ಟ್ ಹಾಕಿದ್ದಾರೆ. ಬೇಬಿ ಬೂಮರ್​ಗಳ ರಿಟೈರ್ಮೆಂಟ್ ದುಡ್ಡೆಲ್ಲಾ ಖಾಲಿಯಾಗಲಿದೆ ಎಂದು ಎಚ್ಚರಿಸಿರುವ ಅವರು, ಚಿನ್ನ, ಬೆಳ್ಳಿ ಇತ್ಯಾದಿ ನೈಜ ಆಸ್ತಿಗಳ ಮೇಲೆ ಹೂಡಿಕೆ ಮಾಡುವಂತೆ ತಮ್ಮ ಸಲಹೆಯನ್ನು ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು

ಇಲ್ಲಿ ಬೇಬಿ ಬೂಮರ್​ಗಳೆಂದರೆ 1946ರಿಂದ 1964ರ ಅವಧಿಯಲ್ಲಿ ಜನಿಸಿದವರು. ಈಗ ಇವರದ್ದು ನಿವೃತ್ತಿ ಜೀವನ. ಕರೆನ್ಸಿ ರೂಪದಲ್ಲಿ ಇವರು ಸೇವಿಂಗ್ಸ್ ಹಣ ಇಟ್ಟುಕೊಂಡಿರುವುದು, ಈ ಹಣದ ಮೌಲ್ಯ ಬಹಳ ಕಡಿಮೆ ಆಗಬಹುದು ಎಂಬುದು ಕಿಯೋಸಾಕಿ ಅವರ ಅನಿಸಿಕೆ. ಸೇವರ್ಸ್ ಆರ್ ಲೂಸರ್ಸ್ ಎಂದು ಅವರು ಬಹಳ ಕಾಲದಿಂದ ಹೇಳುತ್ತಲೇ ಬಂದಿದ್ದಾರೆ. ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಅದನ್ನು ಉಲ್ಲೇಖಿಸಿದ್ದಾರೆ.

ಚಿನ್ನ, ಬೆಳ್ಳಿ, ಬಿಟ್​ಕಾಯಿನ್​ಗಳಂತಹ ನೈಜ ಆಸ್ತಿಯಲ್ಲಿ ಹೂಡಿಕೆ

‘ಮುದ್ರಿತ ಆಸ್ತಿಗಳನ್ನು (ಕರೆನ್ಸಿ ನೋಟು) ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಲೇ ಬಂದಿದ್ದೇನೆ. ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಿ… ಚಿನ್ನ, ಬೆಳ್ಳಿ, ಬಿಟ್​ಕಾಯಿನ್ ಮತ್ತು ಇತ್ತೀಚೆಗೆ ಎಥಿರಿಯಮ್ ಇವುಗಳ ಮೇಲೆ ಹೂಡಿಕೆ ಮಾಡಿ ಎಂದು ವರ್ಷಗಳಿಂದ ಹೇಳುತ್ತಲೇ ಇದ್ದೇನೆ’ ಎಂದು ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕರು ವಿವರಿಸಿದ್ದಾರೆ.

ರಾಬರ್ಟ್ ಕಿಯೋಸಾಕಿ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಮನೆಗೆಲಸದವಳ ಬಳಿ 60 ಲಕ್ಷ ರೂ ಫ್ಲಾಟ್, ಎರಡಂತಸ್ತಿನ ಮನೆ, ಅಂಗಡಿ; ಮಾಲೀಕರು ಶಾಕ್

ಬೆಳ್ಳಿ ಮತ್ತು ಎಥಿರಿಯಮ್ ಅತ್ಯುತ್ತಮ ಎಂಬುದು ನನ್ನ ಭಾವನೆ. ಇವುಗಳಿಗೆ ಸಂಗ್ರಹ ಮೌಲ್ಯ ಇದೆ. ಅದಕ್ಕಿಂತ ಹೆಚ್ಚಾಗಿ ಬೆಲೆಗಳು ಕಡಿಮೆ ಇವೆ, ಉದ್ಯಮಗಳಲ್ಲಿ ಬಳಕೆ ಆಗುತ್ತವೆ. ಇವುಗಳ ಬೆಂಬಲಿಗರು ಮತ್ತು ವಿರೋಧಿಗಳಿಂದ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ಕೇಳಿ ನಿಮ್ಮ ವಿವೇಚನೆ ಬಳಸಿ ಹೂಡಿಕೆ ಮಾಡಿರಿ. ಹೀಗೆ ಹಣಕಾಸು ಚಾಕಚಕ್ಯತೆಯಿಂದ ಮೌಲ್ಯಮಾಪನ ಮಾಡಿ ಶ್ರೀಮಂತರಾಗಲು ಸಾಧ್ಯ ಎಂದು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ರಾಬರ್ಟ್ ಕಿಯೋಸಾಕಿ ಸಲಹೆ ನೀಡಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್