Gold Rate Today Bangalore: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ಪಟ್ಟಿ

Bullion Market 2025 May 5th: ಚಿನ್ನದ ಬೆಲೆ ಇವತ್ತು ಸೋಮವಾರ ಏರಿಕೆಯಾದರೆ, ಬೆಳ್ಳಿ ಬೆಲೆ ತುಸು ಕಡಿಮೆ ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 8,775 ರೂಗೆ ಏರಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,573 ರೂಗೆ ಏರಿದೆ. 18 ಕ್ಯಾರಟ್ ಚಿನ್ನದ ಬೆಲೆ 7,180 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 98 ರೂ ಇದ್ದದ್ದು 97 ರೂಗೆ ಇಳಿದಿದೆ. ಚೆನ್ನೈನಲ್ಲಿ ಬೆಲೆ 107 ರೂನಿಂದ 108 ರೂಗೆ ಏರಿದೆ.

Gold Rate Today Bangalore: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ಇಲ್ಲಿದೆ ಪಟ್ಟಿ
ಚಿನ್ನ

Updated on: May 05, 2025 | 10:50 AM

ಬೆಂಗಳೂರು, ಮೇ 5: ಇಂದು ಸೋಮವಾರ ಚಿನ್ನದ ಬೆಲೆಯಲ್ಲಿ (Gold rate) ಹೆಚ್ಚಳವಾದರೆ, ಬೆಳ್ಳಿ ಬೆಲೆಯಲ್ಲಿ ಏರುಪೇರುಗಳಾಗಿವೆ. ಚಿನ್ನದ ಬೆಲೆ ಗ್ರಾಮ್​​​ಗೆ 16 ರೂನಿಂದ 22 ರೂವರೆಗೆ ಏರಿಕೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 20 ರೂ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ 8,755 ರೂ ಇದ್ದ ಇದರ ಬೆಲೆ ಸೋಮವಾರ 8,775 ರೂಗೆ ಏರಿದೆ. ದೆಹಲಿ ಇತ್ಯಾದಿ ಕೆಲವೆಡೆ ಬೆಲೆ 8,790 ರೂಗೆ ಏರಿದೆ. ವಿದೇಶ ಮಾರುಕಟ್ಟೆಗಳಲ್ಲಿ ಮಲೇಷ್ಯಾದಂತಹ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಕಡಿಮೆ ಆಗಿದೆ. ಹೆಚ್ಚಿನ ಕಡೆ ಯಥಾಸ್ಥಿತಿ ಇದೆ. ದುಬೈ, ಅಮೆರಿಕದಲ್ಲಿ ಬೆಲೆ ತುಸು ಏರಿಕೆ ಆಗಿದೆ. ಬೆಳ್ಳಿ ಬೆಲೆ ಭಾರತದಲ್ಲಿ ಸೋಮವಾರ ಮಿಶ್ರಫಲ ನೀಡಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಲೆ ಒಂದು ರೂ ಏರಿಕೆ ಆಗಿದೆ. 98 ರೂ ಇದ್ದ ಬೆಲೆ 97 ರೂಗೆ ಇಳಿದಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಳ್ಳಿ ಬೆಲೆ ಒಂದು ರೂ ಹೆಚ್ಚಳ ಆಗಿದೆ. 107 ರೂನಿಂದ 108 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 87,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 95,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 87,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 5ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 87,750 ರೂ
  • ಚೆನ್ನೈ: 87,750 ರೂ
  • ಮುಂಬೈ: 87,750 ರೂ
  • ದೆಹಲಿ: 87,900 ರೂ
  • ಕೋಲ್ಕತಾ: 87,750 ರೂ
  • ಕೇರಳ: 87,750 ರೂ
  • ಅಹ್ಮದಾಬಾದ್: 87,800 ರೂ
  • ಜೈಪುರ್: 87,900 ರೂ
  • ಲಕ್ನೋ: 87,900 ರೂ
  • ಭುವನೇಶ್ವರ್: 87,750 ರೂ

ಇದನ್ನೂ ಓದಿ: ಪೂರ್ಣಪ್ರಮಾಣದ ಯುದ್ಧವಾದ್ರೆ ಪಾಕಿಸ್ತಾನದ ಬಳಿ ಇರೋ ಮದ್ದುಗುಂಡು 4ನೇ ದಿನದಲ್ಲಿ ಖತಂ

ಇದನ್ನೂ ಓದಿ
ಚಿನ್ನದ ಶುದ್ಧತೆ, ತೆರಿಗೆ, ಮೇಕಿಂಗ್ ಚಾರ್ಜಸ್ ಇತ್ಯಾದಿ ವಿವರ
ಒಡವೆ ಸಾಲಗಳಿಗೆ ಆರ್​​ಬಿಐ ನಿರ್ಬಂಧ? ಎನ್​​ಬಿಎಫ್​​ಸಿಗಳಿಗೆ ಫಜೀತಿ
ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿಲ್ಲಿಸಿದ ಸರ್ಕಾರ
ಚಿನ್ನದ ಬೆಲೆ ಇಳಿಕೆ ಯಾವಾಗ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,380 ರಿಂಗಿಟ್ (87,880 ರುಪಾಯಿ)
  • ದುಬೈ: 3,615 ಡಿರಾಮ್ (82,930 ರುಪಾಯಿ)
  • ಅಮೆರಿಕ: 980 ಡಾಲರ್ (82,560 ರುಪಾಯಿ)
  • ಸಿಂಗಾಪುರ: 1,325 ಸಿಂಗಾಪುರ್ ಡಾಲರ್ (86,370 ರುಪಾಯಿ)
  • ಕತಾರ್: 3,640 ಕತಾರಿ ರಿಯಾಲ್ (84,120 ರೂ)
  • ಸೌದಿ ಅರೇಬಿಯಾ: 3,700 ಸೌದಿ ರಿಯಾಲ್ (83,120 ರುಪಾಯಿ)
  • ಓಮನ್: 384 ಒಮಾನಿ ರಿಯಾಲ್ (84,020 ರುಪಾಯಿ)
  • ಕುವೇತ್: 297 ಕುವೇತಿ ದಿನಾರ್ (81,630 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,700 ರೂ
  • ಚೆನ್ನೈ: 10,800 ರೂ
  • ಮುಂಬೈ: 9,700 ರೂ
  • ದೆಹಲಿ: 9,700 ರೂ
  • ಕೋಲ್ಕತಾ: 9,700 ರೂ
  • ಕೇರಳ: 10,800 ರೂ
  • ಅಹ್ಮದಾಬಾದ್: 9,700 ರೂ
  • ಜೈಪುರ್: 9,700 ರೂ
  • ಲಕ್ನೋ: 9,700 ರೂ
  • ಭುವನೇಶ್ವರ್: 10,800 ರೂ
  • ಪುಣೆ: 9,700

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Mon, 5 May 25