ಚಿನ್ನ
ಬೆಂಗಳೂರು, ಏಪ್ರಿಲ್ 14: ಚಿನ್ನ ಮತ್ತು ಬೆಳ್ಳಿ ಬೆಲೆ (Gold and silver Rates) ಹಿಂದೆಂದೂ ಕಾಣದ ರೀತಿಯಲ್ಲಿ ಸತತವಾಗಿ ಏರಿಕೆ ಆಗುತ್ತಿದೆ. ಚಿನ್ನದ ಬೆಲೆ ಗ್ರಾಮ್ಗೆ 100 ರೂನಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ ಒಂದೂವರೆ ರೂ ಹೆಚ್ಚಾಗಿದೆ. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಿದ್ದಾಗ್ಯೂ ಬಡ್ಡಿದರ ಕಡಿತ ಮಾಡುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಹೂಡಿಕೆಯಾಗಿ ಚಿನ್ನಕ್ಕೆ ಬಹಳ ಬೇಡಿಕೆ ಬಂದಿದೆ. ಚಿನ್ನದ ಬೆಲೆ ಕಳೆದ ಎರಡು ತಿಂಗಳಲ್ಲಂತೂ ಸಖತ್ ಏರಿಕೆ ಕಂಡಿದೆ. ಫೆಬ್ರುವರಿ 19ರಂದು ಹತ್ತು ಗ್ರಾಮ್ ಆಭರಣ ಚಿನ್ನ 57,590 ರೂ ಇತ್ತು. ಈಗ 67,200 ರೂ ತಲುಪಿದೆ. 45 ದಿನಗಳ ಅಂತರದಲ್ಲಿ 9,500 ರೂಗೂ ಹೆಚ್ಚು ಬೆಲೆ ಏರಿ ಅಚ್ಚರಿ ಮೂಡಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 67,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,425 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 14ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,310 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,310 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 842.5 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 67,200 ರೂ
- ಚೆನ್ನೈ: 68,050 ರೂ
- ಮುಂಬೈ: 67,200 ರೂ
- ದೆಹಲಿ: 67,350 ರೂ
- ಕೋಲ್ಕತಾ: 67,200 ರೂ
- ಕೇರಳ: 67,200 ರೂ
- ಅಹ್ಮದಾಬಾದ್: 67,250 ರೂ
- ಜೈಪುರ್: 67,350 ರೂ
- ಲಕ್ನೋ: 67,350 ರೂ
- ಭುವನೇಶ್ವರ್: 67,200 ರೂ
ಇದನ್ನೂ ಓದಿ: ಟಾಟಾ ಕನ್ಸಲ್ಟನ್ಸಿ ಸರ್ವಿಸ್ ಲಾಭ ಶೇ. 9ರಷ್ಟು ಏರಿಕೆ; ಇಡೀ ವರ್ಷದಲ್ಲಿ 45,908 ಕೋಟಿ ರೂ ನಿವ್ವಳ ಲಾಭ; 28 ರೂ ಡಿವಿಡೆಂಡ್ ಘೋಷಣೆ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,600 ರಿಂಗಿಟ್ (62,961 ರುಪಾಯಿ)
- ದುಬೈ: 2,685 ಡಿರಾಮ್ (61,000 ರುಪಾಯಿ)
- ಅಮೆರಿಕ: 715 ಡಾಲರ್ (59,660 ರುಪಾಯಿ)
- ಸಿಂಗಾಪುರ: 1,007 ಸಿಂಗಾಪುರ್ ಡಾಲರ್ (61,839 ರುಪಾಯಿ)
- ಕತಾರ್: 2,730 ಕತಾರಿ ರಿಯಾಲ್ (62,470 ರೂ)
- ಸೌದಿ ಅರೇಬಿಯಾ: 2,750 ಸೌದಿ ರಿಯಾಲ್ (61,172 ರುಪಾಯಿ)
- ಓಮನ್: 288 ಒಮಾನಿ ರಿಯಾಲ್ (62,417 ರುಪಾಯಿ)
- ಕುವೇತ್: 227.50 ಕುವೇತಿ ದಿನಾರ್ (61,605 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,425 ರೂ
- ಚೆನ್ನೈ: 9,000 ರೂ
- ಮುಂಬೈ: 8,650 ರೂ
- ದೆಹಲಿ: 8,650 ರೂ
- ಕೋಲ್ಕತಾ: 8,650 ರೂ
- ಕೇರಳ: 9,000 ರೂ
- ಅಹ್ಮದಾಬಾದ್: 8,650 ರೂ
- ಜೈಪುರ್: 8,650 ರೂ
- ಲಕ್ನೋ: 8,650 ರೂ
- ಭುವನೇಶ್ವರ್: 9,000 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ