Gold Silver Price on 19th April: ಕಳೆದ ಕೆಲ ವಾರಗಳಲ್ಲಿ ಇಂದು ಅಪರೂಪಕ್ಕೆ ಇಳಿದ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 19, 2024 | 4:59 AM

Bullion Market 2024 April 19th: ನಿನ್ನೆ ಬೆಳ್ಳಿ ಬೆಲೆ ತಗ್ಗಿದರೆ ಇವತ್ತು ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,800 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 86.50 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 67,650 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,575 ರೂ ಇದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 19th April: ಕಳೆದ ಕೆಲ ವಾರಗಳಲ್ಲಿ ಇಂದು ಅಪರೂಪಕ್ಕೆ ಇಳಿದ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ
ಚಿನ್ನ
Follow us on

ಬೆಂಗಳೂರು, ಏಪ್ರಿಲ್ 19: ಸತತವಾಗಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ (Gold and silver Rates) ಕೊನೆಗೂ ತುಸು ಇಳಿದಿದೆ. ನಿನ್ನೆ ಬೆಳ್ಳಿ ಬೆಲೆ ಇಳಿಕೆಯಾಗಿದ್ದರೆ ಇವತ್ತು ಚಿನ್ನದ ಸರದಿ. ಒಂದು ಗ್ರಾಮ್ ಚಿನ್ನಕ್ಕೆ 30 ರೂನಷ್ಟು ಬೆಲೆ ತಗ್ಗಿದೆ. ವಿದೇಶಗಳಲ್ಲಿ ಹಲವೆಡೆ ಬೆಲೆ ಇಳಿದಿದೆ. ಕೆಲವೆಡೆ ಹೆಚ್ಚಳವೂ ಆಗಿದೆ. ಕಳೆದ 10 ದಿನದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದ್ದು ಇದು ಎರಡನೇ ಬಾರಿ ಇರಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,575 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 19ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 865 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 857.50 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 67,650 ರೂ
  • ಚೆನ್ನೈ: 68,350 ರೂ
  • ಮುಂಬೈ: 67,650 ರೂ
  • ದೆಹಲಿ: 67,800 ರೂ
  • ಕೋಲ್ಕತಾ: 67,650 ರೂ
  • ಕೇರಳ: 67,650 ರೂ
  • ಅಹ್ಮದಾಬಾದ್: 67,700 ರೂ
  • ಜೈಪುರ್: 67,800 ರೂ
  • ಲಕ್ನೋ: 67,800 ರೂ
  • ಭುವನೇಶ್ವರ್: 67,650 ರೂ

ಇದನ್ನೂ ಓದಿ: ಗೂಗಲ್​ನಲ್ಲಿ ಮತ್ತೆ ಲೇ ಆಫ್; ಬೆಂಗಳೂರು, ಮೆಕ್ಸಿಕೋ, ಡುಬ್ಲಿನ್​ನ ತನ್ನ ಘಟಕಗಳಲ್ಲಿ ಕೆಲಸಕ್ಕೆ ಮರು ಅರ್ಜಿ ಸಲ್ಲಿಸಲು ಅವಕಾಶ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,590 ರಿಂಗಿಟ್ (62,700 ರುಪಾಯಿ)
  • ದುಬೈ: 2,662.50 ಡಿರಾಮ್ (60,551 ರುಪಾಯಿ)
  • ಅಮೆರಿಕ: 730 ಡಾಲರ್ (60,970 ರುಪಾಯಿ)
  • ಸಿಂಗಾಪುರ: 1,007 ಸಿಂಗಾಪುರ್ ಡಾಲರ್ (61,872 ರುಪಾಯಿ)
  • ಕತಾರ್: 2,715 ಕತಾರಿ ರಿಯಾಲ್ (62,184 ರೂ)
  • ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,782 ರುಪಾಯಿ)
  • ಓಮನ್: 287 ಒಮಾನಿ ರಿಯಾಲ್ (62,262 ರುಪಾಯಿ)
  • ಕುವೇತ್: 227 ಕುವೇತಿ ದಿನಾರ್ (61,502 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,575 ರೂ
  • ಚೆನ್ನೈ: 9,000 ರೂ
  • ಮುಂಬೈ: 8,650 ರೂ
  • ದೆಹಲಿ: 8,650 ರೂ
  • ಕೋಲ್ಕತಾ: 8,650 ರೂ
  • ಕೇರಳ: 9,000 ರೂ
  • ಅಹ್ಮದಾಬಾದ್: 8,650 ರೂ
  • ಜೈಪುರ್: 8,650 ರೂ
  • ಲಕ್ನೋ: 8,650 ರೂ
  • ಭುವನೇಶ್ವರ್: 9,000 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ