Gold Silver Price on 28th August: ಚಿನ್ನದ ಬೆಲೆ ಅಲ್ಪ ಇಳಿಕೆ, ಬೆಳ್ಳಿ ಹೆಚ್ಚಳ; ಇಲ್ಲಿದೆ ದರಪಟ್ಟಿ

Bullion Market 2024 August 28th: ಚಿನ್ನ, ಬೆಳ್ಳಿ ಬೆಲೆಗಳ ಹೊಯ್ದಾಟ ಮುಂದುವರಿದಿದೆ. ನಿನ್ನೆ ಇಳಿದಿದ್ದ ಚಿನ್ನದ ಬೆಲೆ ಇಂದು ಅಲ್ಪ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ನಗಣ್ಯ ಎನಿಸುವ ಮೊತ್ತದಷ್ಟು ಬೆಲೆ ಇಳಿಕೆ ಆಗಿದೆ. ಸದ್ಯ ಒಂದು ಗ್ರಾಮ್ ಅಪರಂಜಿ ಚಿನ್ನದ ಬೆಲೆ 7,303 ರೂ ಇದೆ.

Gold Silver Price on 28th August: ಚಿನ್ನದ ಬೆಲೆ ಅಲ್ಪ ಇಳಿಕೆ, ಬೆಳ್ಳಿ ಹೆಚ್ಚಳ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Aug 28, 2024 | 5:00 AM

ಬೆಂಗಳೂರು, ಆಗಸ್ಟ್ 28: ಚಿನ್ನದ ಬೆಲೆಯಲ್ಲಿ ಇವತ್ತೂ ತುಸು ಇಳಿಕೆ ಆಗಿದೆ. ಗ್ರಾಮ್​ಗೆ ಕೇವಲ ಒಂದು ರೂ ಕಡಿಮೆ ಆಗಿದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆಯಲ್ಲಿ ಇವತ್ತು 60 ಪೈಸೆಯಷ್ಟು ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಮಾತ್ರ 40 ಪೈಸೆಯಷ್ಟು ಬೆಲೆ ಕಡಿಮೆ ಆಗಿದೆ. ವಿದೇಶಗಳಲ್ಲಿ ಮಿಶ್ರಾನುಭವ ಇದೆ. ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಏರಿದೆ. ಮತ್ತಿನ್ನೂ ಕೆಲ ದೇಶಗಳಲ್ಲಿ ಬೆಲೆ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,940 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,030 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,940 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,400 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 28ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,940 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 885 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,940 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,030 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,940 ರೂ
  • ಚೆನ್ನೈ: 66,940 ರೂ
  • ಮುಂಬೈ: 66,940 ರೂ
  • ದೆಹಲಿ: 67,090 ರೂ
  • ಕೋಲ್ಕತಾ: 66,940 ರೂ
  • ಕೇರಳ: 66,940 ರೂ
  • ಅಹ್ಮದಾಬಾದ್: 66,990 ರೂ
  • ಜೈಪುರ್: 67,090 ರೂ
  • ಲಕ್ನೋ: 67,090 ರೂ
  • ಭುವನೇಶ್ವರ್: 66,940 ರೂ

ಇದನ್ನೂ ಓದಿ: ಒನ್ ಪಾಯಿಂಟ್ ಒನ್ ಸಲ್ಯೂಶನ್ಸ್ ಷೇರು, 4 ವರ್ಷದಲ್ಲಿ 44 ಪಟ್ಟು ಲಾಭ; ಪಕ್ಕಾ ಮಲ್ಟಿಬ್ಯಾಗರ್ ಸ್ಟಾಕು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,460 ರಿಂಗಿಟ್ (66,780 ರುಪಾಯಿ)
  • ದುಬೈ: 2,815 ಡಿರಾಮ್ (64,320 ರುಪಾಯಿ)
  • ಅಮೆರಿಕ: 765 ಡಾಲರ್ (64,200 ರುಪಾಯಿ)
  • ಸಿಂಗಾಪುರ: 1,024 ಸಿಂಗಾಪುರ್ ಡಾಲರ್ (65,900 ರುಪಾಯಿ)
  • ಕತಾರ್: 2,860 ಕತಾರಿ ರಿಯಾಲ್ (65,840 ರೂ)
  • ಸೌದಿ ಅರೇಬಿಯಾ: 2,880 ಸೌದಿ ರಿಯಾಲ್ (64,410 ರುಪಾಯಿ)
  • ಓಮನ್: 302 ಒಮಾನಿ ರಿಯಾಲ್ (65,830 ರುಪಾಯಿ)
  • ಕುವೇತ್: 228.60 ಕುವೇತಿ ದಿನಾರ್ (62,830 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,400 ರೂ
  • ಚೆನ್ನೈ: 9,350 ರೂ
  • ಮುಂಬೈ: 8,850 ರೂ
  • ದೆಹಲಿ: 8,850 ರೂ
  • ಕೋಲ್ಕತಾ: 8,850 ರೂ
  • ಕೇರಳ: 9,350 ರೂ
  • ಅಹ್ಮದಾಬಾದ್: 8,850 ರೂ
  • ಜೈಪುರ್: 8,850 ರೂ
  • ಲಕ್ನೋ: 8,850 ರೂ
  • ಭುವನೇಶ್ವರ್: 9,350 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us