Gold Rate Today Bangalore: ಚಿನ್ನದ ಬೆಲೆ 10 ಗ್ರಾಮ್​ಗೆ 300 ರೂ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2024 February 18th: ಚಿನ್ನದ ಬೆಲೆ ಇಂದೂ ಕೂಡ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯ ಯಥಾಸ್ಥಿತಿ ಇಂದೂ ಮುಂದುವರಿದಿದೆ. 22 ಕ್ಯಾರಟ್ ಚಿನ್ನದ ಬೆಲೆ 7,970 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 8,695 ರೂ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 100.50 ರೂನಲ್ಲಿ ಮುಂದುವರಿದಿದೆ. ಕೆಲವೆಡೆ ಬೆಲೆ 108 ರೂ ಇದೆ.

Gold Rate Today Bangalore: ಚಿನ್ನದ ಬೆಲೆ 10 ಗ್ರಾಮ್​ಗೆ 300 ರೂ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Feb 18, 2025 | 10:11 AM

ಬೆಂಗಳೂರು, ಫೆಬ್ರುವರಿ 18: ಚಿನ್ನದ ಬೆಲೆ ನಿನ್ನೆಯಂತೆ ಇಂದು ಮಂಗಳವಾರವೂ ಏರಿಕೆ ಆಗಿದೆ. ನಿನ್ನೆ 50 ರೂ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಇವತ್ತು ಗ್ರಾಮ್​ಗೆ 30 ರೂ ಏರಿದೆ. ಅಪರಂಜಿ ಚಿನ್ನದ ಬೆಲೆ 8,700 ರೂ ಸಮೀಪ ದೌಡಾಯಿಸಿದೆ. ನಿನ್ನೆ 8,662 ರೂ ಇದ್ದ 24 ಕ್ಯಾರಟ್ ಶುದ್ಧ ಚಿನ್ನ ಬೆಲೆ ಇವತ್ತು 8,695 ರೂ ಆಗಿದೆ. 10 ಗ್ರಾಮ್ ಚಿನ್ನದ ಬೆಲೆಯಲ್ಲಿ 340 ರೂನಷ್ಟು ಏರಿಕೆ ಆಗಿದೆ. ವಿದೇಶದ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆಗಳು ಏರಿವೆ. ಇನ್ನೊಂದೆಡೆ, ಬೆಳ್ಳಿ ಬೆಲೆಗಳಲ್ಲಿ ಇಂದೂ ಯಾವ ವ್ಯತ್ಯಯವಾಗಿಲ್ಲ. ಕಳೆದ ಹಲವು ದಿನಗಳಿಂದಲೂ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 79,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 86,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,050 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 79,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,050 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,950 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,210 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 86,950 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,005 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 79,700 ರೂ
  • ಚೆನ್ನೈ: 79,700 ರೂ
  • ಮುಂಬೈ: 79,700 ರೂ
  • ದೆಹಲಿ: 79,850 ರೂ
  • ಕೋಲ್ಕತಾ: 79,700 ರೂ
  • ಕೇರಳ: 79,700 ರೂ
  • ಅಹ್ಮದಾಬಾದ್: 79,750 ರೂ
  • ಜೈಪುರ್: 79,850 ರೂ
  • ಲಕ್ನೋ: 79,850 ರೂ
  • ಭುವನೇಶ್ವರ್: 79,700 ರೂ

ಇದನ್ನೂ ಓದಿ: ಒಂದು ವರ್ಷದೊಳಗೆ ಇನ್ಷೂರೆನ್ಸ್ ಪಾಲಿಸಿ ರದ್ದುಗೊಳಿಸಲು ಸಾಧ್ಯವಾ? ಫ್ರೀಲುಕ್ ಅವಧಿ ವಿಸ್ತರಿಸಲು ಸರ್ಕಾರದ ಯೋಜನೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,070 ರಿಂಗಿಟ್ (79,570 ರುಪಾಯಿ)
  • ದುಬೈ: 3,247.50 ಡಿರಾಮ್ (76,880 ರುಪಾಯಿ)
  • ಅಮೆರಿಕ: 880 ಡಾಲರ್ (76,520 ರುಪಾಯಿ)
  • ಸಿಂಗಾಪುರ: 1,213 ಸಿಂಗಾಪುರ್ ಡಾಲರ್ (78,520 ರುಪಾಯಿ)
  • ಕತಾರ್: 3,275 ಕತಾರಿ ರಿಯಾಲ್ (78,120 ರೂ)
  • ಸೌದಿ ಅರೇಬಿಯಾ: 3,310 ಸೌದಿ ರಿಯಾಲ್ (76,740 ರುಪಾಯಿ)
  • ಓಮನ್: 344.50 ಒಮಾನಿ ರಿಯಾಲ್ (77,810 ರುಪಾಯಿ)
  • ಕುವೇತ್: 266.70 ಕುವೇತಿ ದಿನಾರ್ (75,140 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,050 ರೂ
  • ಚೆನ್ನೈ: 10,800 ರೂ
  • ಮುಂಬೈ: 10,050 ರೂ
  • ದೆಹಲಿ: 10,050 ರೂ
  • ಕೋಲ್ಕತಾ: 10,050 ರೂ
  • ಕೇರಳ: 10,800 ರೂ
  • ಅಹ್ಮದಾಬಾದ್: 10,050 ರೂ
  • ಜೈಪುರ್: 10,050 ರೂ
  • ಲಕ್ನೋ: 10,050 ರೂ
  • ಭುವನೇಶ್ವರ್: 10,800 ರೂ
  • ಪುಣೆ: 10,050

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ