ಚಿನ್ನ
ಬೆಂಗಳೂರು, ಫೆಬ್ರುವರಿ 6: ಚಿನ್ನದ ಬೆಲೆಯ ಸತತ ಏರಿಕೆ ಇವತ್ತೂ ಮುಂದುವರಿದಿದೆ. ಇವತ್ತು ಗುರುವಾರ ಚಿನ್ನದ ಬೆಲೆ ಗ್ರಾಮ್ಗೆ 25 ರೂ ಏರಿತ್ತು. ನಿನ್ನೆ ಬುಧವಾರ 100 ರೂನಷ್ಟು ಹೆಚ್ಚಳವಾಗಿತ್ತು. ಮೊನ್ನೆ ಮಂಗಳವಾರವೂ ಭರ್ಜರಿ ಏರಿಕೆ ಕಂಡಿತ್ತು. ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವಿದೇಶಗಳ ಪೈಕಿ ಪಶ್ಚಿಮ ಏಷ್ಯನ್ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಹೆಚ್ಚಾಗಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿಲ್ಲ. ಬೆಂಗಳೂರು, ಮುಂಬೈ ಇತ್ಯಾದಿ ಕಡೆ ಬೆಳ್ಳಿ ಬೆಲೆ 100 ರೂಗಿಂತ ಒಳಗೆಯೇ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 79,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 86,510 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 79,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,950 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 6ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,510 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,880 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 86,510 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 79,300 ರೂ
- ಚೆನ್ನೈ: 79,300 ರೂ
- ಮುಂಬೈ: 79,300 ರೂ
- ದೆಹಲಿ: 79,450 ರೂ
- ಕೋಲ್ಕತಾ: 79,300 ರೂ
- ಕೇರಳ: 79,300 ರೂ
- ಅಹ್ಮದಾಬಾದ್: 79,350 ರೂ
- ಜೈಪುರ್: 79,450 ರೂ
- ಲಕ್ನೋ: 79,450 ರೂ
- ಭುವನೇಶ್ವರ್: 79,300 ರೂ
ಇದನ್ನೂ ಓದಿ: ನಿಮ್ಮ ಬಿಟ್ಕಾಯಿನ್ ಖರೀದಿ, ಮಾರಾಟ ಸೇರಿ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಮೇಲೆ ಸರ್ಕಾರದ ಕಣ್ಣು
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,630 ರಿಂಗಿಟ್ (71,780 ರುಪಾಯಿ)
- ದುಬೈ: 3,207.50 ಡಿರಾಮ್ (76,450 ರುಪಾಯಿ)
- ಅಮೆರಿಕ: 780 ಡಾಲರ್ (68,290 ರುಪಾಯಿ)
- ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (70,410 ರುಪಾಯಿ)
- ಕತಾರ್: 3,245 ಕತಾರಿ ರಿಯಾಲ್ (77,950 ರೂ)
- ಸೌದಿ ಅರೇಬಿಯಾ: 3,270 ಸೌದಿ ರಿಯಾಲ್ (76,320 ರುಪಾಯಿ)
- ಓಮನ್: 341 ಒಮಾನಿ ರಿಯಾಲ್ (77,540 ರುಪಾಯಿ)
- ಕುವೇತ್: 262.30 ಕುವೇತಿ ದಿನಾರ್ (74,430 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,950 ರೂ
- ಚೆನ್ನೈ: 10,700 ರೂ
- ಮುಂಬೈ: 9,950 ರೂ
- ದೆಹಲಿ: 9,950 ರೂ
- ಕೋಲ್ಕತಾ: 9,950 ರೂ
- ಕೇರಳ: 10,700 ರೂ
- ಅಹ್ಮದಾಬಾದ್: 9,950 ರೂ
- ಜೈಪುರ್: 9,950 ರೂ
- ಲಕ್ನೋ: 9,950 ರೂ
- ಭುವನೇಶ್ವರ್: 10,700 ರೂ
- ಪುಣೆ: 9,950
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ