Gold Rate Today Bangalore: ಚಿನ್ನ, ಬೆಳ್ಳಿ ಎರಡೂ ಭರ್ಜರಿ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ

Bullion Market 2025 March 21st: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎರಡೂ ಇಳಿಕೆ ಆಗಿವೆ. ಚಿನ್ನದ ಬೆಲೆ ಗ್ರಾಮ್​​ಗೆ 40 ರೂ ಕಡಿಮೆ ಆದರೆ, ಬೆಳ್ಳಿ ಬೆಲೆ 2 ರೂ ಇಳಿದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 8,270 ರೂಗೆ ಇಳಿದಿದೆ. ಶುದ್ಧ ಚಿನ್ನದ ಬೆಲೆ 9,022 ರೂ ಆಗಿದೆ. ಬೆಳ್ಳಿ ಬೆಲೆ 105 ರೂನಿಂದ 103 ರೂಗೆ ಇಳಿದಿದೆ. ಚೆನ್ನೈನಲ್ಲಿ ಬೆಲೆ 112 ರೂ ಆಗಿದೆ.

Gold Rate Today Bangalore: ಚಿನ್ನ, ಬೆಳ್ಳಿ ಎರಡೂ ಭರ್ಜರಿ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನ

Updated on: Mar 21, 2025 | 10:33 AM

ಬೆಂಗಳೂರು, ಮಾರ್ಚ್ 21: ಸಾಕಷ್ಟು ಬೆಲೆ ಏರಿಕೆಗಳನ್ನು ಕಂಡಿದ್ದ ಚಿನ್ನಪ್ರಿಯರಿಗೆ ಇವತ್ತು ಶುಕ್ರವಾರ ಖುಷಿಯ ಸುದ್ದಿ ಇದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಕೂಡ ಇಳಿಕೆ ಕಂಡಿದೆ. ಚಿನ್ನದ ಬೆಲೆ ಗ್ರಾಮ್​​ಗೆ 40 ರೂನಷ್ಟು ಕಡಿಮೆ ಆದರೆ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold rates) ಮತ್ತೊಮ್ಮೆ 8,300 ರೂ ಗಡಿ ಒಳಗೆ ಬಂದಿದೆ. ಅಪರಂಜಿ ಚಿನ್ನದ ಬೆಲೆ 9,022 ರೂಗೆ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಂತೂ (Silver rates) ಗ್ರಾಮ್​​ಗೆ ಎರಡು ರೂನಷ್ಟು ಕುಗ್ಗಿದೆ. ಬೆಂಗಳೂರಿನಲ್ಲಿ 105 ರೂ ಇದ್ದ ಅದರ ಬೆಲೆ 103 ರೂಗೆ ಇಳಿದಿದೆ. ಚೆನ್ನೈ ಮೊದಲಾದೆಡೆ ಬೆಲೆ 114 ರೂನಿಂದ 112 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 82,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 90,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 82,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,300 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 21ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,220 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 82,700 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,220 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,030 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 82,700 ರೂ
  • ಚೆನ್ನೈ: 82,700 ರೂ
  • ಮುಂಬೈ: 82,700 ರೂ
  • ದೆಹಲಿ: 82,850 ರೂ
  • ಕೋಲ್ಕತಾ: 82,700 ರೂ
  • ಕೇರಳ: 82,700 ರೂ
  • ಅಹ್ಮದಾಬಾದ್: 82,750 ರೂ
  • ಜೈಪುರ್: 82,850 ರೂ
  • ಲಕ್ನೋ: 82,850 ರೂ
  • ಭುವನೇಶ್ವರ್: 82,700 ರೂ

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದು ಲೀಟರ್ ಪೆಟ್ರೋಲ್​​ಗೆ ಕೇಂದ್ರ ಮತ್ತು ರಾಜ್ಯದ ತೆರಿಗೆ ಎಷ್ಟು? ತೆರಿಗೆ ಬಿಟ್ಟರೆ ಮೂಲ ಪೆಟ್ರೋಲ್ ಬೆಲೆ ಎಷ್ಟು? ಇಲ್ಲಿದೆ ಡೀಟೇಲ್ಸ್

ಇದನ್ನೂ ಓದಿ
ಚಿನ್ನದ ಬೆಲೆ ಇಳಿಕೆ ಯಾವಾಗ?
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
ಮುಂಬರುವ ದಿನಗಳಲ್ಲಿ ಚಿನ್ನಕ್ಕೆ ಪ್ರಾಶಸ್ತ್ಯ: ಸಿಇಎ
ವಿಶ್ವದ ಶೇ. 11ರಷ್ಟು ಚಿನ್ನ ಭಾರತೀಯ ಹೆಂಗಸರ ಬಳಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,260 ರಿಂಗಿಟ್ (83,090 ರುಪಾಯಿ)
  • ದುಬೈ: 3,385 ಡಿರಾಮ್ (79,500 ರುಪಾಯಿ)
  • ಅಮೆರಿಕ: 920 ಡಾಲರ್ (79,380 ರುಪಾಯಿ)
  • ಸಿಂಗಾಪುರ: 1,263 ಸಿಂಗಾಪುರ್ ಡಾಲರ್ (81,590 ರುಪಾಯಿ)
  • ಕತಾರ್: 3,425 ಕತಾರಿ ರಿಯಾಲ್ (81,060 ರೂ)
  • ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (79,580 ರುಪಾಯಿ)
  • ಓಮನ್: 360.50 ಒಮಾನಿ ರಿಯಾಲ್ (80,820 ರುಪಾಯಿ)
  • ಕುವೇತ್: 278.20 ಕುವೇತಿ ದಿನಾರ್ (77,880 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 10,300 ರೂ
  • ಚೆನ್ನೈ: 11,200 ರೂ
  • ಮುಂಬೈ: 10,300 ರೂ
  • ದೆಹಲಿ: 10,300 ರೂ
  • ಕೋಲ್ಕತಾ: 10,300 ರೂ
  • ಕೇರಳ: 11,200 ರೂ
  • ಅಹ್ಮದಾಬಾದ್: 10,300 ರೂ
  • ಜೈಪುರ್: 10,300 ರೂ
  • ಲಕ್ನೋ: 10,300 ರೂ
  • ಭುವನೇಶ್ವರ್: 11,200 ರೂ
  • ಪುಣೆ: 10,300

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us