Gold Silver Price on 4th October: ಚಿನ್ನದ ಬೆಲೆ ಮತ್ತೆ ಹೆಚ್ಚಳ; ಬೆಳ್ಳಿ ಬೆಲೆ ಬೆಂಗಳೂರಲ್ಲಿ ಮಾತ್ರ ಏರಿಕೆ

Bullion Market 2024 October 4th: ಚಿನ್ನದ ಬೆಲೆಯ ಓಟ ಮುಂದುವರಿದಿದೆ. ಇಸ್ರೇಲ್ ಇರಾನ್ ಯುದ್ಧ ಕಾರ್ಮೋಡದಲ್ಲಿ ಹೂಡಿಕೆದಾರರು ಚಿನ್ನ ಪಡೆದುಕೊಳ್ಳುತ್ತಿರುವಂತೆ ತೋರುತ್ತಿದೆ. 22 ಕ್ಯಾರಟ್​ನ ಆಭರಣ ಚಿನ್ನದ ಬೆಲೆ ಗ್ರಾಮ್​ಗೆ 7,100 ರೂ ಇದ್ದದ್ದು 7,120 ರೂಗೆ ಏರಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 90 ರೂನಿಂದ 92 ರೂಗೆ ಏರಿಕೆ ಆಗಿದೆ.

Gold Silver Price on 4th October: ಚಿನ್ನದ ಬೆಲೆ ಮತ್ತೆ ಹೆಚ್ಚಳ; ಬೆಳ್ಳಿ ಬೆಲೆ ಬೆಂಗಳೂರಲ್ಲಿ ಮಾತ್ರ ಏರಿಕೆ
ಚಿನ್ನ

Updated on: Oct 04, 2024 | 12:38 PM

ಬೆಂಗಳೂರು, ಅಕ್ಟೋಬರ್ 4: ಚಿನ್ನದ ಬೆಲೆ ಸತತ ಮೂರನೇ ಬಾರಿ ಹೆಚ್ಚಳ ಕಂಡಿದೆ. ಇಂದು ಶುಕ್ರವಾರ ಮಧ್ಯಾಹ್ನ 12ಗಂಟೆಗೆ ಹೊಸ ದರಗಳು ಪ್ರಕಟವಾಗಿದ್ದು, ಅದರಂತೆ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿದೆ. ಮೂರು ದಿನದಲ್ಲಿ ಒಟ್ಟರೆ 70 ರೂನಷ್ಟು ಬೆಲೆ ಹೆಚ್ಚಳವಾದಂತಾಗಿದೆ. ಇಂದು ವಿದೇಶಗಳ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆ ಹೆಚ್ಚಳವಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಬೆಂಗಳೂರಿನಲ್ಲಿ ಗ್ರಾಮ್​ಗೆ 2 ರೂ ಏರಿಕೆ ಆಗಿರುವುದು ಬಿಟ್ಟರೆ ಭಾರತದಲ್ಲಿ ಎಲ್ಲೆಡೆ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 4ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,200 ರೂ
  • ಚೆನ್ನೈ: 71,200 ರೂ
  • ಮುಂಬೈ: 71,200 ರೂ
  • ದೆಹಲಿ: 71,350 ರೂ
  • ಕೋಲ್ಕತಾ: 71,200 ರೂ
  • ಕೇರಳ: 71,200 ರೂ
  • ಅಹ್ಮದಾಬಾದ್: 71,250 ರೂ
  • ಜೈಪುರ್: 71,350 ರೂ
  • ಲಕ್ನೋ: 71,350 ರೂ
  • ಭುವನೇಶ್ವರ್: 71,200 ರೂ

ಇದನ್ನೂ ಓದಿ: ಹೊರದೇಶದಿಂದ ಒಬ್ಬ ವ್ಯಕ್ತಿ ಎಷ್ಟು ಚಿನ್ನ ತರಬಹುದು? ಎಷ್ಟು ತೆರಿಗೆ ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,500 ರಿಂಗಿಟ್ (69,700 ರುಪಾಯಿ)
  • ದುಬೈ: 2,982.50 ಡಿರಾಮ್ (68,190 ರುಪಾಯಿ)
  • ಅಮೆರಿಕ: 805 ಡಾಲರ್ (67,590 ರುಪಾಯಿ)
  • ಸಿಂಗಾಪುರ: 1,070 ಸಿಂಗಾಪುರ್ ಡಾಲರ್ (69,320 ರುಪಾಯಿ)
  • ಕತಾರ್: 3,050 ಕತಾರಿ ರಿಯಾಲ್ (69,450 ರೂ)
  • ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,210 ರುಪಾಯಿ)
  • ಓಮನ್: 317 ಒಮಾನಿ ರಿಯಾಲ್ (69,180 ರುಪಾಯಿ)
  • ಕುವೇತ್: 242.70 ಕುವೇತಿ ದಿನಾರ್ (66,740 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,200 ರೂ
  • ಚೆನ್ನೈ: 10,100 ರೂ
  • ಮುಂಬೈ: 9,500 ರೂ
  • ದೆಹಲಿ: 9,500 ರೂ
  • ಕೋಲ್ಕತಾ: 9,500 ರೂ
  • ಕೇರಳ: 10,100 ರೂ
  • ಅಹ್ಮದಾಬಾದ್: 9,500 ರೂ
  • ಜೈಪುರ್: 9,500 ರೂ
  • ಲಕ್ನೋ: 9,500 ರೂ
  • ಭುವನೇಶ್ವರ್: 10,100 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us