Gold Silver Price on 7th October: ಚಿನ್ನ, ಬೆಳ್ಳಿ ಎರಡೂ ಬೆಲೆ ಇಂದು ಇಳಿಕೆ; ವಿವಿಧೆಡೆ ಇಂದಿನ ದರಪಟ್ಟಿ

Bullion Market 2024 October 7th: ಕಳೆದ ವಾರ ಬೆಲೆ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಇಂದು ಇಳಿಕೆಯ ಹಾದಿಯಲ್ಲಿರುವಂತಿದೆ. ಸೋಮವಾರ ಎರಡೂ ಲೋಹಗಳ ಬೆಲೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 90 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 7,745 ರೂಗೆ ಇಳಿದಿದೆ.

Gold Silver Price on 7th October: ಚಿನ್ನ, ಬೆಳ್ಳಿ ಎರಡೂ ಬೆಲೆ ಇಂದು ಇಳಿಕೆ; ವಿವಿಧೆಡೆ ಇಂದಿನ ದರಪಟ್ಟಿ
ಚಿನ್ನ

Updated on: Oct 07, 2024 | 10:55 AM

ಬೆಂಗಳೂರು, ಅಕ್ಟೋಬರ್ 7: ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಇಂದು ಸೋಮವಾರ ಇಳಿಕೆ ಕಂಡಿವೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್​ಗೆ 20 ರೂನಷ್ಟು ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,120 ರೂನಿಂದ 7,100 ರೂಗೆ ಇಳಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 7,767 ರೂನಿಂದ 7,745 ರೂಗೆ ಕುಸಿದಿದೆ. 18 ಕ್ಯಾರಟ್ ಚಿನ್ನದ ಬೆಲೆ 5,809 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಮುಂಬೈ ಮೊದಲಾದೆಡೆ ಗ್ರಾಮ್​ಗೆ 10 ಪೈಸೆ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 92 ರೂ ಇದ್ದದ್ದು 90 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,000ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,450 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,690 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,000 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 7ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 970 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,450 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,000 ರೂ
  • ಚೆನ್ನೈ: 71,000 ರೂ
  • ಮುಂಬೈ: 71,000 ರೂ
  • ದೆಹಲಿ: 71,150 ರೂ
  • ಕೋಲ್ಕತಾ: 71,000 ರೂ
  • ಕೇರಳ: 71,000 ರೂ
  • ಅಹ್ಮದಾಬಾದ್: 71,050 ರೂ
  • ಜೈಪುರ್: 71,150 ರೂ
  • ಲಕ್ನೋ: 71,150 ರೂ
  • ಭುವನೇಶ್ವರ್: 71,000 ರೂ

ಇದನ್ನೂ ಓದಿ: Petrol Diesel Price on October O7: ಭಾರತದಾದ್ಯಂತ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,530 ರಿಂಗಿಟ್ (69,370 ರುಪಾಯಿ)
  • ದುಬೈ: 2,975 ಡಿರಾಮ್ (68,010 ರುಪಾಯಿ)
  • ಅಮೆರಿಕ: 805 ಡಾಲರ್ (67,650 ರುಪಾಯಿ)
  • ಸಿಂಗಾಪುರ: 1,079 ಸಿಂಗಾಪುರ್ ಡಾಲರ್ (69,540 ರುಪಾಯಿ)
  • ಕತಾರ್: 3,015 ಕತಾರಿ ರಿಯಾಲ್ (69,450 ರೂ)
  • ಸೌದಿ ಅರೇಬಿಯಾ: 3,050 ಸೌದಿ ರಿಯಾಲ್ (68,240 ರುಪಾಯಿ)
  • ಓಮನ್: 317 ಒಮಾನಿ ರಿಯಾಲ್ (69,130 ರುಪಾಯಿ)
  • ಕುವೇತ್: 242.70 ಕುವೇತಿ ದಿನಾರ್ (66,550 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,000 ರೂ
  • ಚೆನ್ನೈ: 10,300 ರೂ
  • ಮುಂಬೈ: 9,690 ರೂ
  • ದೆಹಲಿ: 9,690 ರೂ
  • ಕೋಲ್ಕತಾ: 9,690 ರೂ
  • ಕೇರಳ: 10,300 ರೂ
  • ಅಹ್ಮದಾಬಾದ್: 9,690 ರೂ
  • ಜೈಪುರ್: 9,690 ರೂ
  • ಲಕ್ನೋ: 9,690 ರೂ
  • ಭುವನೇಶ್ವರ್: 10,300 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us