Gold Rate: ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ; ಬೆಳ್ಳಿಯೂ ಅಗ್ಗ

Gold Price 09 July 2026: ಇಂದು ಗುರುವಾರ ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಳಿದಿವೆ. ಚಿನ್ನದ ಬೆಲೆ 115 ರೂ, ಬೆಳ್ಳಿ ಬೆಲೆ 5 ರೂ ಕಡಿಮೆಗೊಂಡಿವೆ. 22 ಕ್ಯಾರಟ್ ಚಿನ್ನದ ಬೆಲೆ 13,245 ರೂನಿಂದ 13,130 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 14,324 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 235 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.

Gold Rate: ಚಿನ್ನದ ಬೆಲೆ ಸತತ ಐದನೇ ದಿನ ಇಳಿಕೆ; ಬೆಳ್ಳಿಯೂ ಅಗ್ಗ
ಚಿನ್ನ
Image Credit source: PTI

Updated on: Jul 09, 2026 | 2:24 PM

ಮುಖ್ಯಾಂಶಗಳು

  • ಚಿನ್ನದ ಬೆಲೆ 115 ರೂ, ಬೆಳ್ಳಿ ಬೆಲೆ 5 ರೂ ಕಡಿಮೆಗೊಂಡಿವೆ.
  • 22 ಕ್ಯಾರಟ್ ಚಿನ್ನದ ಬೆಲೆ 13,245 ರೂನಿಂದ 13,130 ರೂಗೆ ಇಳಿದಿದೆ.
  • ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 235 ರೂ ಇದೆ.

ನವದೆಹಲಿ, ಜುಲೈ 9: ಚಿನ್ನದ ಬೆಲೆ ಮತ್ತಷ್ಟು ಕಡಿಮೆ ಆಗಿದೆ. ಗುರುವಾರ ಇದರ ಬೆಲೆ (Gold Price) ಗ್ರಾಮ್​ಗೆ 115 ರೂ ತಗ್ಗಿದೆ. ಕಳೆದ ಐದು ದಿನದಲ್ಲಿ ಬಂಗಾರದ ದರ 350 ರೂ ಹೆಚ್ಚು ಮೊತ್ತದಷ್ಟು ಕಡಿಮೆಗೊಂಡಿದೆ. ಇರಾನ್ ಯುದ್ಧ ಪುನಾರಂಭಗೊಂಡ ಮಧ್ಯದಲ್ಲೇ ವಿದೇಶಗಳಲ್ಲೂ ಹೆಚ್ಚಿನ ಕಡೆ ಹಳದಿ ಲೋಹ ಬೆಲೆ ಕಡಿಮೆ ಆಗಿದೆ. ಗುರುವಾರ ಬೆಳ್ಳಿ ಬೆಲೆಯೂ ಕಡಿಮೆಗೊಂಡಿದ್ದು ಗ್ರಾಮ್​ಗೆ 5-10 ರೂ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,324 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,130 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,743 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,324 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,130 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,130 ರೂ
  • ಚೆನ್ನೈ: 13,220 ರೂ
  • ಮುಂಬೈ: 13,130 ರೂ
  • ದೆಹಲಿ: 13,145 ರೂ
  • ಕೋಲ್ಕತಾ: 13,130 ರೂ
  • ಕೇರಳ: 13,130 ರೂ
  • ಅಹ್ಮದಾಬಾದ್: 13,135 ರೂ
  • ಜೈಪುರ್: 13,145 ರೂ
  • ಲಕ್ನೋ: 13,145 ರೂ
  • ಭುವನೇಶ್ವರ್: 13,130 ರೂ

ಇದನ್ನೂ ಓದಿ: Gruha Jyothi De-linking: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆರ್​ಆರ್ ನಂಬರ್​ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 547 ರಿಂಗಿಟ್ (12,795 ರುಪಾಯಿ)
  • ದುಬೈ: 490 ಡಿರಾಮ್ (12,726 ರುಪಾಯಿ)
  • ಅಮೆರಿಕ: 133 ಡಾಲರ್ (12,681 ರುಪಾಯಿ)
  • ಸಿಂಗಾಪುರ: 179.70 ಸಿಂಗಾಪುರ್ ಡಾಲರ್ (13,254 ರುಪಾಯಿ)
  • ಕತಾರ್: 487.50 ಕತಾರಿ ರಿಯಾಲ್ (12,768 ರೂ)
  • ಸೌದಿ ಅರೇಬಿಯಾ: 502 ಸೌದಿ ರಿಯಾಲ್ (12,750 ರುಪಾಯಿ)
  • ಓಮನ್: 51.55 ಒಮಾನಿ ರಿಯಾಲ್ (12,769 ರುಪಾಯಿ)
  • ಕುವೇತ್: 40.98 ಕುವೇತಿ ದಿನಾರ್ (12,699 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 245 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 245 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us