AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gruha Jyothi De-linking: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆರ್​ಆರ್ ನಂಬರ್​ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

Know how to de-link Aadhaar in Karnataka's Gruha Jyothi scheme: ಕರ್ನಾಟಕದ ಗೃಹ ಜ್ಯೋತಿ ಸ್ಕೀಮ್​ನಲ್ಲಿ ಉಚಿತ ವಿದ್ಯುತ್ ಪಡೆಯಲು ಆಧಾರ್ ಲಿಂಕ್ ಮಾಡಬೇಕು. ಈಗಾಗಲೇ ಲಿಂಕ್ ಮಾಡಿರುವ ಆಧಾರ್ ಅನ್ನು ಡಿ-ಲಿಂಕ್ ಕೂಡ ಮಾಡಲು ಅವಕಾಶ ಇದೆ. ಆಧಾರ್ ಡಿ-ಲಿಂಕ್ ಮಾಡಲು ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಮಾರ್ಗಗಳಿವೆ. ಈ ಬಗ್ಗೆ ಒಂದು ಮಾಹಿತಿ.

Gruha Jyothi De-linking: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆರ್​ಆರ್ ನಂಬರ್​ಗೆ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?
ಗೃಹ ಜ್ಯೋತಿ ಯೋಜನೆImage Credit source: Seva Sindhu Portal
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 09, 2026 | 3:01 PM

Share

ಮುಖ್ಯಾಂಶಗಳು

  • ಕರ್ನಾಟಕದ ಗೃಹ ಜ್ಯೋತಿ ಸ್ಕೀಮ್​ನಲ್ಲಿ ಉಚಿತ ವಿದ್ಯುತ್ ಪಡೆಯಲು ಆಧಾರ್ ಲಿಂಕ್ ಮಾಡಬೇಕು.
  • ಈಗಾಗಲೇ ಲಿಂಕ್ ಮಾಡಿರುವ ಆಧಾರ್ ಅನ್ನು ಡಿ-ಲಿಂಕ್ ಕೂಡ ಮಾಡಲು ಅವಕಾಶ ಇದೆ.
  • ಆಧಾರ್ ಡಿ-ಲಿಂಕ್ ಮಾಡಲು ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಮಾರ್ಗಗಳಿವೆ.

ಬೆಂಗಳೂರು, ಜುಲೈ 8: ಕರ್ನಾಟಕ ಸರ್ಕಾರ ಗೃಹ ಜ್ಯೋತಿ ಸ್ಕೀಮ್ (Gruha Jyothi Scheme) ಅಡಿಯಲ್ಲಿ ಪ್ರತೀ ಅರ್ಹ ಮನೆಗೆ ಒಂದು ತಿಂಗಳಿಗೆ 200 ಯುನಿಟ್​ಗಳವರೆಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಹಿಂದಿನ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಆಧಾರ್ ನಂಬರ್ ಲಿಂಕ್ ಆದ ಪ್ರತೀ ಆರ್​ಆರ್ ನಂಬರ್​ಗೂ ಉಚಿತ ವಿದ್ಯುತ್ ಪೂರೈಕೆಯ ಅವಕಾಶ ಇರುತ್ತದೆ. ಒಂದು ವೇಳೆ ಬಾಡಿಗೆ ಮನೆ ಖಾಲಿ ಮಾಡಿ ಬೇರೆಡೆ ವರ್ಗಾವಣೆ ಆಗುತ್ತಿದ್ದರೆ ಅಥವಾ ಆಗಿದ್ದರೆ ಏನು ಮಾಡಬೇಕು? ಆಧಾರ್ ಡಿ-ಲಿಂಕ್ ಮಾಡಲು ಸಾಧ್ಯವೇ? ಆಧಾರ್ ಡಿ-ಲಿಂಕ್ (De-linking from Gruha Jyothi scheme) ಮಾಡಲು ಎಸ್ಕಾಂಗಳು ಅವಕಾಶ ನೀಡಿವೆ.

ಗೃಹಜ್ಯೋತಿ ಸ್ಕೀಮ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ಕರ್ನಾಟಕ ರಾಜ್ಯದ ಗೃಹ ಜ್ಯೋತಿ ಸ್ಕೀಮ್​ನಲ್ಲಿ ಮನೆಯ ವಿದ್ಯುತ್ ಮೀಟರ್​ಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿದ್ದು, ಅದನ್ನು ಡಿ-ಲಿಂಕ್ ಮಾಡಲು ವಿವಿಧ ಮಾರ್ಗಗಳಿವೆ. ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಕ್ರಮಗಳಲ್ಲೂ ಮಾಡಬಹುದು.

ಇದನ್ನೂ ಓದಿ: ಮನೆ ಮಾಲೀಕರು, ಬಾಡಿಗೆದಾರರು ಆತಂಕ ಪಡಬೇಕಾಗಿಲ್ಲ: ಗೃಹ ಜ್ಯೋತಿ ಬಗ್ಗೆ ಬೆಸ್ಕಾಂ ನೀಡಿದ ಮಾಹಿತಿ ಹೀಗಿದೆ

ಆನ್​ಲೈನ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡುವುದು ಹೀಗೆ

  • ಮೊದಲಿಗೆ ಸೇವಾ ಸಿಂಧು ಪೋರ್ಟಲ್​ಗೆ ಭೇಟಿ ನೀಡಿ: sevasindhugs.karnataka.gov.in/
  • ಇಲ್ಲಿ ಮುಖ್ಯಪುಟದಲ್ಲಿ ಕಾಣುವ ಗೃಹ ಜ್ಯೋತಿ ಟ್ಯಾಬ್ ಕ್ಲಿಕ್ ಮಾಡಿದರೆ ಎರಡು ಆಯ್ಕೆ ತೆರೆದುಕೊಳ್ಳುತ್ತದೆ.
  • ಗೃಹ ಜ್ಯೋತಿ ಯೋಜನೆಗೆ ನೊಂದಣಿ ಮಾಡುವುದು ಮತ್ತು ಗೃಹ ಜ್ಯೋತಿ ಯೋಜನೆಯಿಂದ ಡಿ-ಲಿಂಕ್ ಮಾಡುವ ಆಯ್ಕೆಗಳಿರುತ್ತವೆ.
  • ಡಿ-ಲಿಂಕ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಅದರ ಪುಟ ತೆರೆಯುತ್ತದೆ.
  • ಲಿಂಕ್ ಮಾಡಲು ನೀಡಿದ್ದ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
  • ಆಧಾರ್ ನಂಬರ್​ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ದೃಢಪಡಿಸಿ.
  • ನೀವು ಡಿ-ಲಿಂಕ್ ಮಾಡಲು ಏನು ಕಾರಣ ಎಂಬುದನ್ನು ಆಯ್ದುಕೊಳ್ಳಿ.
  • ಅಂತಿಮವಾಗಿ ಸಬ್ಮಿಟ್ ಕ್ಲಿಕ್ ಮಾಡಿದರೆ ಆಧಾರ್ ಡಿ-ಲಿಂಕ್ ಆಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ, ಸದ್ಯ ಗೃಹ ಜ್ಯೋತಿ ಸ್ಕೀಮ್​ಗೆ ನೊಂದಣಿ ಮಾಡುವ ಮತ್ತು ಡಿ-ಲಿಂಕ್ ಮಾಡುವ ಆಯ್ಕೆಗಳು ಆನ್​ಲೈನ್​ನಲ್ಲಿ ಕಾರ್ಯವಹಿಸುತ್ತಿಲ್ಲ. ತಾಂತ್ರಿಕ ಸಮಸ್ಯೆ ಇರಬಹುದು. ಮುಂದಿನ ದಿನಗಳಲ್ಲಿ ಅದು ಸರಿ ಹೋಗಬಹುದು. ಒಂದು ವೇಳೆ ತುರ್ತಾಗಿ ಡಿ-ಲಿಂಕ್ ಮಾಡುವುದಿದ್ದರೆ ಆಫ್​ಲೈನ್ ಆಯ್ಕೆಯೂ ಇದೆ.

ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ

ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆಧಾರ್ ಡಿ-ಲಿಂಕ್ ಮಾಡಲು ಆಫ್​ಲೈನ್ ಮಾರ್ಗ

ನಿಮ್ಮ ಮನೆಯ ವ್ಯಾಪ್ತಿಯ ಬೆಸ್ಕಾಂ ಕಚೇರಿಗೆ ಹೋಗಿ ನೀವು ಗೃಹ ಜ್ಯೋತಿ ಸ್ಕೀಮ್​ಗೆ ನೊಂದಣಿ ಮಾಡಬಹುದು. ಆಧಾರ್ ಡಿ-ಲಿಂಕ್ ಕೂಡ ಮಾಡಬಹುದು. ಅಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಅಥವಾ ಆರ್​ಆರ್ ನಂಬರ್ ಮತ್ತು ನಿಮ್ಮ ಆಧಾರ್ ನಂಬರ್ ಕೊಟ್ಟರೆ, ಅಲ್ಲಿರುವ ಸಿಬ್ಬಂದಿಯೇ ಡಿ-ಲಿಂಕ್ ಮಾಡುತ್ತಾರೆ.

ಇನ್ನು, ನೀವು ಮನೆ ಖಾಲಿ ಮಾಡಿದ್ದು ಹಳೆಯ ಮನೆಯಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡಲು ಮರೆತಿದ್ದರೆ ಚಿಂತೆ ಬೇಕಿಲ್ಲ. ನಿಮ್ಮ ಹೊಸ ವಾಸ ಇರುವ ಮನೆಗೆ ಸಿಬ್ಬಂದಿ ಬಂದು ಮಾಹಿತಿ ಕಲೆ ಹಾಕುತ್ತಾರೆ. ಆಗ ಆಧಾರ್ ನಂಬರ್ ಕೊಟ್ಟು ಲಿಂಕ್ ಅಥವಾ ಡಿ-ಲಿಂಕ್ ಮಾಡಿಸಬಹುದು.

ಗೃಹ ಜ್ಯೋತಿ ಯೋಜನೆ, FAQs

ಪ್ರಶ್ನೆ: ಗೃಹ ಜ್ಯೋತಿ ಸ್ಕೀಮ್​ನಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡುವುದು ಹೇಗೆ?

ಉತ್ತರ: ಸೇವಾ ಸಿಂಧು ಪೋರ್ಟಲ್ ಅಥವಾ ಎಸ್ಕಾಮ್ ಕಚೇರಿಗೆ ಹೋಗಿ ಗೃಹ ಜ್ಯೋತಿ ಸ್ಕೀಮ್​ನಲ್ಲಿ ನಿಮ್ಮ ಆಧಾರ್ ಡಿ-ಲಿಂಕ್ ಮಾಡಬಹುದು.

ಪ್ರಶ್ನೆ: ಗೃಹ ಜ್ಯೋತಿ ಸ್ಕೀಮ್​ನಲ್ಲಿ ಆನ್​ಲೈನ್​ನಲ್ಲಿ ಡಿ-ಲಿಂಕ್ ಮಾಡುವುದು ಹೇಗೆ?

ಉತ್ತರ: ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in/ ಇಲ್ಲಿಗೆ ಹೋಗಿ ಆಧಾರ್ ಡಿ-ಲಿಂಕ್ ಮಾಡಬಹುದು.

ಪ್ರಶ್ನೆ: ಹೊಸ ಬಾಡಿಗೆ ಮನೆಗೆ ವರ್ಗವಾದರೆ ಏನು ಮಾಡಬೇಕು?

ಉತ್ತರ: ನೀವಿರುವ ಮನೆಗೆ ಬೆಸ್ಕಾಂನಿಂದ ಸಿಬ್ಬಂದಿ ಬಂದು ಮಾಹಿತಿ ಪಡೆಯುತ್ತಾರೆ. ಆಗ ಆಧಾರ್ ವಿವರ ನೀಡಿ ನೊಂದಾಯಿಸಬಹುದು.

Published On - 7:06 pm, Wed, 8 July 26

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!