AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ

ಕರ್ನಾಟಕದ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ತಮ್ಮ ವಿವರಗಳನ್ನು ಪರಿಶೀಲಿಸಲು ಹೊಸ ಆ್ಯಪ್ ಬಿಡುಗಡೆಗೊಂಡಿದೆ. ಈ ಕುರಿತು ವಿಡಿಯೋ ವೈರಲ್ ಆಗಿದ್ದು, ಗ್ರಾಹಕರು 5 ಹಂತಗಳ ಮೂಲಕ ತಮ್ಮ ಮೊಬೈಲ್, ಆಧಾರ್, ವೋಟರ್ ಐಡಿ, ರೇಷನ್ ಕಾರ್ಡ್ ಮತ್ತು ಇತರ ಮಾಹಿತಿಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಆ್ಯಪ್ ಬಳಸಿ ಸರಿಯಾದ ವಿವರಗಳನ್ನು ನಮೂದಿಸಿ ಯೋಜನೆಯ ಲಾಭವನ್ನು ಮುಂದುವರಿಸಲು ಇದು ಅತ್ಯಗತ್ಯ.

ಗೃಹ ಜ್ಯೋತಿ ಯೋಜನೆ: ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 5 ಹಂತಗಳು ಇಲ್ಲಿದೆ ನೋಡಿ
ಗೃಹ ಜ್ಯೋತಿ ಆ್ಯಪ್ ಪರಿಶೀಲನೆ
ಅಕ್ಷಯ್​ ಪಲ್ಲಮಜಲು​​
|

Updated on: Jul 07, 2026 | 5:56 PM

Share

ಮುಖ್ಯಾಂಶಗಳು

  • ‘ಗೃಹ ಜ್ಯೋತಿ’ ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ಆ್ಯಪ್
  • ಆ್ಯಪ್ ಮೂಲಕ ಮರುಪರಿಶೀಲನೆ ಪ್ರಕ್ರಿಯೆ ಆರಂಭ
  • ಇದನ್ನು ಮಾಡಲು 5 ಹಂತಗಳು ಇಲ್ಲಿವೆ

ಬೆಂಗಳೂರು, ಜು.7: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ಆ್ಯಪ್ ಮೂಲಕ ಮರುಪರಿಶೀಲನೆ (Verification) ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ  ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವ ಗ್ರಾಹಕರು ಈ ಕೆಳಗಿನ ಹಂತಗಳ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು. ಒಟ್ಟು 5 ಹಂತಗಳು ಇವೆ. ಈ ಬಗ್ಗೆ ವಿಡಿಯೋವೊಂದನ್ನು ಲೈನ್​​ ಮ್ಯಾನ್​ ತಮ್ಮ ಇನ್ಸ್ಟಾಗ್ರಾಮ್​​ ಖಾತೆ @powerman_yogesh ಎಂಬ ಖಾತಯಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ವಿಡಿಯೋವನ್ನು ನೀಡಿದ್ದಾರೆ.

ಹಂತ 1: ಗ್ರಾಹಕರ ವಿವರಗಳ ಪರಿಶೀಲನೆ

ಮೊದಲು ನಿಮ್ಮ ಮೊಬೈಲ್‌ನಲ್ಲಿ ಗೃಹ ಜ್ಯೋತಿ ಆಪ್ (Gruha Jyothi App) ಅನ್ನು ಓಪನ್ ಮಾಡಿಕೊಳ್ಳಿ.

ನಿಮ್ಮ ವಿದ್ಯುತ್ ಸರಬರಾಜು ಸಂಸ್ಥೆಯನ್ನು (ESCOM – ಉದಾಹರಣೆಗೆ: HESCOM, BESCOM ಇತ್ಯಾದಿ) ಆಯ್ಕೆ ಮಾಡಿ.

ಬಳಿಕ ನಿಮ್ಮ ಗ್ರಾಹಕರ ಖಾತೆ ಸಂಖ್ಯೆಯನ್ನು (Account ID) ನಮೂದಿಸಿ, “ವಿವರಗಳನ್ನು ಪಡೆಯಿರಿ” ಎಂಬುದರ ಮೇಲೆ ಕ್ಲಿಕ್ ಮಾಡಿ.

ಈಗ ಪರದೆಯ ಮೇಲೆ ಗ್ರಾಹಕರ ಹೆಸರು ಮತ್ತು ವಿಳಾಸದ ವಿವರಗಳು ಕಾಣಿಸುತ್ತವೆ. ಇವು ಸರಿಯಾಗಿದ್ದರೆ “ಹೌದು” ಎಂದು ಕ್ಲಿಕ್ ಮಾಡಿ ಮುಂದುವರಿಯಿರಿ.

ಹಂತ 2: ಮೊಬೈಲ್ ಮತ್ತು ಆಧಾರ್ ಇ-ಕೆವೈಸಿ (e-KYC) ಪರಿಶೀಲನೆ

ಮೊಬೈಲ್ ಪರಿಶೀಲನೆ: ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಆ ಸಂಖ್ಯೆಗೆ ಬರುವ ಒಟಿಪಿ (OTP) ಅನ್ನು ನಮೂದಿಸುವ ಮೂಲಕ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.

ಸಂಬಂಧದ ವಿವರ: ನೀವು ಮನೆಯ ಮಾಲೀಕರೇ (Owner) ಅಥವಾ ಬಾಡಿಗೆದಾರರೇ (Tenant) ಎಂಬುದನ್ನು ಆಯ್ಕೆ ಮಾಡಿ.

ಆಧಾರ್ ಇ-ಕೆವೈಸಿ: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಿಯಮಗಳಿಗೆ ಒಪ್ಪಿಗೆ ಸೂಚಿಸಿ ಒಟಿಪಿ ಜನರೇಟ್ ಮಾಡಿ. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ ಆಧಾರ್ ಪರಿಶೀಲನೆ ಪೂರ್ಣಗೊಳಿಸಿ.

ತದನಂತರ ನಿಮ್ಮ ಜಿಲ್ಲೆ, ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.

ಇಲ್ಲಿದೆ ನೋಡಿ ವಿಡಿಯೋ

ಹಂತ 3: ಮತದಾರರ ಚೀಟಿ ಹಾಗೂ ರೇಷನ್ ಕಾರ್ಡ್ ವಿವರಗಳು

ನಿಮ್ಮ ರೇಷನ್ ಕಾರ್ಡ್ ಪ್ರಕಾರ (APL/BPL) ಸೂಕ್ತ ಆಯ್ಕೆಯನ್ನು ಆರಿಸಿ.

ನೀವು ಕರ್ನಾಟಕದ ನೋಂದಾಯಿತ ಮತದಾರರೇ ಎಂಬುದಕ್ಕೆ ‘ಹೌದು’ ಎಂದು ಗುರುತಿಸಿ.

ನಿಮ್ಮ ಮತದಾರರ ಚೀಟಿಯಲ್ಲಿ (Voter ID) ಇರುವಂತೆ ನಿಮ್ಮ ಪೂರ್ಣ ಹೆಸರನ್ನು ಮತ್ತು EPIC ಸಂಖ್ಯೆಯನ್ನು ನಮೂದಿಸಿ.

ನಿಮ್ಮ ವೋಟರ್ ಐಡಿಯ ಮುಂಭಾಗ (Front Side) ಮತ್ತು ಹಿಂಭಾಗದ (Back Side) ಸ್ಪಷ್ಟವಾದ ಫೋಟೋವನ್ನು ಕ್ಯಾಮೆರಾ ಮೂಲಕ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಿ.

ಇದನ್ನೂ ಓದಿ: ಗೃಹ ಜ್ಯೋತಿ ಗ್ರಾಹಕರಿಗೆ ಬೆಸ್ಕಾಂ ಬಿಗ್ ರಿಲೀಫ್; ಮನೆ ಬಾಡಿಗೆದಾರರ ಆಧಾರ್ ವೆರಿಫಿಕೇಶನ್‌ನಿಂದ ಉಚಿತ ವಿದ್ಯುತ್ ಕಟ್ ಆಗಲ್ಲ

ಹಂತ 4: ಆದಾಯ ತೆರಿಗೆ, ವೃತ್ತಿ ಮತ್ತು ವರ್ಗದ ಆಯ್ಕೆ

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದರೆ (Taxpayer) ‘ಹೌದು’ ಎಂದು, ಇಲ್ಲದಿದ್ದರೆ ‘ಇಲ್ಲ’ ಎಂದು ಆಯ್ಕೆ ಮಾಡಿ. (ತೆರಿಗೆದಾರರಾಗಿದ್ದರೆ ಪ್ಯಾನ್ ಕಾರ್ಡ್ ವಿವರ ಹಾಗೂ ಫೋಟೋ ಅಪ್‌ಲೋಡ್ ಮಾಡಬೇಕಾಗುತ್ತದೆ).

ನಿಮ್ಮ ವೃತ್ತಿಯನ್ನು (ಉದಾಹರಣೆಗೆ: ರೈತ, ಸ್ವಯಂ ಉದ್ಯೋಗ, ಶಿಕ್ಷಕ ಇತ್ಯಾದಿ) ಆಯ್ಕೆ ಮಾಡಿ.

ನಿಮ್ಮ ಸಾಮಾಜಿಕ ವರ್ಗವನ್ನು (SC, ST, OBC, Minority, ಇತರೆ) ಆಯ್ಕೆ ಮಾಡಿಕೊಳ್ಳಿ.

ಗಮನಿಸಿ: ನೀವು ‘ST’ ಅಥವಾ ನಿರ್ದಿಷ್ಟ ವರ್ಗವನ್ನು ಆಯ್ಕೆ ಮಾಡಿದರೆ, ಕಡ್ಡಾಯವಾಗಿ ನಿಮ್ಮ RD ಪ್ರಮಾಣಪತ್ರ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. OBC ಅಥವಾ ಇತರೆ ವರ್ಗಗಳಿಗೆ ಇದರ ಅಗತ್ಯವಿರುವುದಿಲ್ಲ.

ಹಂತ 5: ಫೋಟೋ ಅಪ್‌ಲೋಡ್ ಮತ್ತು ಅಂತಿಮ ಸಲ್ಲಿಕೆ

ಕೊನೆಯದಾಗಿ ಅರ್ಜಿದಾರರ ಲೈವ್ ಫೋಟೋವನ್ನು ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು.

ಸ್ವಯಂ ಘೋಷಣೆಯ ನಿಯಮಗಳನ್ನು (Declarations) ಜಾಗರೂಕತೆಯಿಂದ ಓದಿ, ಸರಿಯಾಗಿದೆ ಎಂದು ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.

ಎಲ್ಲಾ ವಿವರಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು, ಕೊನೆಯಲ್ಲಿ “ಅರ್ಜಿ ಸಲ್ಲಿಸಿ” ಬಟನ್ ಒತ್ತಿ.

ಈ ಹಂತಗಳು ಪೂರ್ಣಗೊಂಡ ತಕ್ಷಣ ಪರದೆಯ ಮೇಲೆ ನೋಂದಣಿ ಯಶಸ್ವಿಯಾಗಿ ಸಲ್ಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಮುಂದಿನ ಪ್ರಕ್ರಿಯೆಯ ಕುರಿತು ನಿಮಗೆ ಮಾಹಿತಿ ನೀಡಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಪ್ರಜ್ವಲ್ ದೇವರಾಜ್ ಅಭಿಮಾನಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಗುರುದತ್
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ