AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎಡವಟ್ಟು: ಶಾಲಾ ಮಕ್ಕಳನ್ನು ಬಳಸಿಕೊಂಡ ಮತಗಟ್ಟೆ ಅಧಿಕಾರಿಗಳು

ಬೆಳಗಾವಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎಡವಟ್ಟು: ಶಾಲಾ ಮಕ್ಕಳನ್ನು ಬಳಸಿಕೊಂಡ ಮತಗಟ್ಟೆ ಅಧಿಕಾರಿಗಳು

ಸಹದೇವ್​ ಮಾನೆ
| Edited By: |

Updated on:Jul 07, 2026 | 4:08 PM

Share

ಮುಖ್ಯಾಂಶಗಳು

  • ಬೆಳಗಾವಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ – 2026 ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು
  • ಶಾಲಾ ಮಕ್ಕಳನ್ನ ಬಳಸಿಕೊಂಡು SIR ಮಾಡುತ್ತಿರುವ ಬಿಎಲ್ಒಗಳು
  • ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠ ಶಾಲೆಯಲ್ಲಿ ಘಟನೆ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ - 2026: ಕರ್ನಾಟಕದಲ್ಲಿ ಎಸ್​​ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಹಲವೆಡೆ ಕೆಲ ಎಡವಟ್ಟುಗಳು ಆಗುತ್ತಿವೆ. ಚುನಾವಣೆ ಆಯೋಗವು ಬಿಎಲ್​​​ಒಗಳಿಗೆ ಮತದಾರರ ಮನೆ ಮನೆಗೆ ತೆರಳಿ ಎಸ್​​​ಐಆರ್ ಮಾಡುವಂತೆ ಹೇಳಿದೆ. ಆದ್ರೆ, ಕೆಲ ಬಿಎಲ್​​​ಒಗಳು ದೇವಸ್ಥಾನ, ಮಸೀದಿ, ಊರಿನ ಕಟ್ಟೆಗಳಲ್ಲಿ ಕುಳಿತು ಎಸ್​​ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಮಧ್ಯೆ ಇದೀಗ ಬೆಳಗಾವಿಯಲ್ಲಿ ಎಸ್​​ಐಆರ್​​​ಗೆ ಶಾಲಾ ಮಕ್ಕಳನ್ನು ಬಳಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠದ ಗ್ರಾಮಸ್ಥರನ್ನು ಬಿಎಲ್​​​ಒಗಳು ಶಾಲೆಗೆ ಕರೆಸಿ ಎಸ್ಐಆರ್ ಮಾಡುತ್ತಿದ್ದು,ಫೋಟೋ ಅಂಟಿಸಲು ಮತ್ತು ಫಾರಂ ತುಂಬಲು ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗಿದೆ.

ಬೆಳಗಾವಿ, (ಜುಲೈ 07): ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ – 2026 ಪ್ರಕ್ರಿಯೆ ನಡೆಯುತ್ತಿದ್ದು, ಹಲವೆಡೆ ಕೆಲ ಎಡವಟ್ಟುಗಳು ಆಗುತ್ತಿವೆ. ಚುನಾವಣಾ ಆಯೋಗವು ಬಿಎಲ್​​​ಒಗಳಿಗೆ ಮತದಾರರ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವಂತೆ ಹೇಳಿದೆ. ಆದ್ರೆ, ಕೆಲ ಬಿಎಲ್​​​ಒಗಳು ದೇವಸ್ಥಾನ, ಮಸೀದಿ, ಊರಿನ ಕಟ್ಟೆಗಳಲ್ಲಿ ಕುಳಿತು ಎಸ್​​ಐಆರ್ ಪ್ರಕ್ರಿಯೆ ಮಾಡುತ್ತಿರುವುದು ಕಂಡುಬಂದಿದೆ. ಇದರ ಮಧ್ಯೆ ಇದೀಗ ಬೆಳಗಾವಿಯಲ್ಲಿ ಎಸ್​​ಐಆರ್​​​ಗೆ ಶಾಲಾ ಮಕ್ಕಳನ್ನು ಬಳಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠದ ಗ್ರಾಮಸ್ಥರನ್ನು ಬಿಎಲ್​​​ಒಗಳು ಶಾಲೆಗೆ ಕರೆಸಿ ಎಸ್ಐಆರ್ ಮಾಡುತ್ತಿದ್ದು,ಫೋಟೋ ಅಂಟಿಸಲು ಮತ್ತು ಫಾರಂ ತುಂಬಲು ವಿದ್ಯಾರ್ಥಿಗಳನ್ನು ಬಳಕೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 07, 2026 02:57 PM

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More