AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಟೀಸರ್ ಬಗ್ಗೆ ಟೀಕೆ, ನಟ ಹೇಳಿದ್ದೇನು?

Toxic movie: ಇತ್ತೀಚೆಗೆ ಬಿಡುಗಡೆ ಆದ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್​​ನಲ್ಲಿ ಕೆಲ ಹಾಟ್ ದೃಶ್ಯಗಳು ಸಹ ಇದ್ದವು. ವಿಶೇಷವಾಗಿ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಬಂದೂಕಿನ ನಳಿಕೆಯನ್ನು ಫೈಟ್ ಮಾಡಲು ಬಂದ ಮಹಿಳೆಯ ಬಾಯಿಗೆ ಇಡುವ ದೃಶ್ಯದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಆ ದೃಶ್ಯದ ಜೊತೆಗೆ ಬರುವ ಸಂಭಾಷಣೆ ಸಹ ಈ ಟೀಕೆಗೆ ಕಾರಣವಾಗಿತ್ತು. ಈ ವಿಷಯಗಳ ಬಗ್ಗೆ ಸಿನಿಮಾನಲ್ಲಿ ನಟಿಸಿರುವ ವಿದೇಶಿ ನಟ ಬೆನಡಿಕ್ಟ್ ಗ್ಯಾರೆಟ್ ಮಾತನಾಡಿದ್ದಾರೆ.

‘ಟಾಕ್ಸಿಕ್’ ಟೀಸರ್ ಬಗ್ಗೆ ಟೀಕೆ, ನಟ ಹೇಳಿದ್ದೇನು?
Toxic Teaser
ಮಂಜುನಾಥ ಸಿ.
|

Updated on: Jul 07, 2026 | 5:52 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆದಾಗೆಲ್ಲ ಒಂದು ವರ್ಗದ ಜನ ಟೀಕೆ ಮಾಡುತ್ತಲೇ ಬರುತ್ತಿದ್ದಾರೆ. ವಿಶೇಷವಾಗಿ ಸಿನಿಮಾನಲ್ಲಿರುವ ಲೈಂಗಿಕತೆ ಅಂಶಗಳು ಕರಿತಂತೆ ಈ ಟೀಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಹ ‘ಟಾಕ್ಸಿಕ್’ ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಿತ್ತು. ಟೀಸರ್​ನಲ್ಲಿ ಸಿನಿಮಾದ ನಾಯಕಿಯರನ್ನು ಪರಿಚಯಲಾಯ್ತು. ಟೀಸರ್​​ನ ಕೊನೆಯಲ್ಲಿ ಯಶ್, ಮಹಿಳೆಯರ ಜೊತೆ ಫೈಟ್ ಮಾಡುವ ದೃಶ್ಯವಿತ್ತು. ಜೊತೆಗೆ ಕೆಲ ಹಾಟ್ ದೃಶ್ಯಗಳು ಸಹ ಇದ್ದವು. ವಿಶೇಷವಾಗಿ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಬಂದೂಕಿನ ನಳಿಕೆಯನ್ನು ಫೈಟ್ ಮಾಡಲು ಬಂದ ಮಹಿಳೆಯ ಬಾಯಿಗೆ ಇಡುವ ದೃಶ್ಯದ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಆ ದೃಶ್ಯದ ಜೊತೆಗೆ ಬರುವ ಸಂಭಾಷಣೆ ಸಹ ಈ ಟೀಕೆಗೆ ಕಾರಣವಾಗಿತ್ತು. ಈ ವಿಷಯಗಳ ಬಗ್ಗೆ ಸಿನಿಮಾನಲ್ಲಿ ನಟಿಸಿರುವ ವಿದೇಶಿ ನಟ ಬೆನಡಿಕ್ಟ್ ಗ್ಯಾರೆಟ್ ಮಾತನಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಪೋಷಕ ಪಾತ್ರದಲ್ಲಿ ನಟಿಸಿರುವ ಬೆನೆಡಿಕ್ಟ್ ಗ್ಯಾರೆಟ್, ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದು, ‘ಟಾಕ್ಸಿಕ್’ ಟೀಸರ್‌ಗೆ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆ ಮಾತನಾಡಿದ್ದು, ‘ಆ ಬಗ್ಗೆ ನನಗೆ ತಿಳಿದಿಲ್ಲ. ಹಿಂಸಾತ್ಮಕ ದೃಶ್ಯಗಳಿಗಿಂತ ಲೈಂಗಿಕ ವಿಷಯಗಳನ್ನು ನೋಡುವುದರಲ್ಲಿ ಜನರಿಗೆ ಹೆಚ್ಚಿನ ಸಮಸ್ಯೆಗಳಿವೆ ಎಂದು ನಾನು ಭಾವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ ಇದು ತಪ್ಪು. ಹಿಂಸೆಗಿಂತ ಲೈಂಗಿಕ ವಿಷಯಗಳಿರುವ ಪ್ರಪಂಚವೇ ನನಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಜನ, ಸಿನಿಮಾದಲ್ಲಿ ತೋರಿಸಲಾಗುವ ಹಿಂಸೆಯ ಬಗ್ಗೆ ಚರ್ಚಿಸುವುದಿಲ್ಲ, ಬದಲಿಗೆ ಲೈಂಗಿಕತೆ ವಿಷಯಗಳ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆದಾಗಲೂ ಇದೇ ರೀತಿಯ ಟೀಕೆಗಳು ವ್ಯಕ್ತವಾಗಿದ್ದವು. ಆ ಟೀಸರ್​​ನಲ್ಲಿ ಸಹ ಯಶ್, ಮಹಿಳೆಯೊಬ್ಬರ ಜೊತೆಗೆ ಕಾರಿನಲ್ಲಿ ಲೈಂಗಿಕತೆಯನ್ನು ತೊಡಗಿರುವ ದೃಶ್ಯವಿತ್ತು. ಆ ಬಗ್ಗೆ ಹಲವರು ಟೀಕೆ ಮಾಡಿದ್ದರು. ಸಿಬಿಎಫ್​​ಸಿಗೆ, ಮಹಿಳಾ ಆಯೋಗಕ್ಕೆ ದೂರು ಸಹ ನೀಡಲಾಗಿತ್ತು. ಈಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ಲೈಂಗಿಕತೆಯ ದೃಶ್ಯಗಳು ಹೆಚ್ಚಿಗೆ ಇಲ್ಲವಾದರೂ ಅಲ್ಲಲ್ಲಿ ಫಾಸ್ಟ್ ಫಾರ್ವರ್ಡ್​​ನಲ್ಲಿ ಕಾಣಿಸಿಕೊಳ್ಳುತ್ತವೆ. ಕೊನೆಯಲ್ಲಿ ಬಂದೂಕು ಇಡುವ ದೃಶ್ಯವೂ ಸಹ ಪರೋಕ್ಷವಾಗಿ ‘ಅದನ್ನೇ’ ಸೂಚಿಸುತ್ತಿದೆ. ಇದೇ ಕಾರಣಕ್ಕೆ ಮತ್ತೆ ಟೀಕೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು?

ಏನೇ ಆಗಲಿ, ಟೀಸರ್ ಯಶ್ ಅಭಿಮಾನಿಗಳಿಗೆ ಮತ್ತು ದೊಡ್ಡ ಸಂಖ್ಯೆಯ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗುವಂತಾಗಿದೆ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ. ಯಶ್ ಹಾಗೂ ವೆಂಕಟ್ ಕೆ ನಾರಾಯಣ (ಕೆವಿಎನ್) ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಅವರ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಇದ್ದಾರೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದ್ದು, ಇತರ ದಕ್ಷಿಣ ಭಾರತೀಯ ಭಾಷೆಗಳು ಮತ್ತು ಹಿಂದಿಗೆ ಡಬ್ ಮಾಡಲಾಗಿದೆ. ಚಿತ್ರವು ಅನೇಕ ಬಾರಿ ಬಿಡುಗಡೆಯ ದಿನಾಂಕವನ್ನು ಬದಲಾಯಿಸಿದ್ದು, ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಜೋಗ ಜಲಪಾತದ ಜಲವೈಭವ ಕಣ್ತುಂಬಿಕೊಂಡ ಪ್ರವಾಸಿಗರು
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಒಂದೇ ರಾತ್ರಿಯಲ್ಲಿ ದೂದ್​ಗಂಗಾ ನದಿಯಲ್ಲಿ 20 ಅಡಿ ಏರಿಕೆ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಬಂಡಾಜೆ ಫಾಲ್ಸ್​ನಂತಹ ಅಪಾಯಕಾರಿ ಸ್ಥಳದಲ್ಲಿ ಪ್ರವಾಸಿಗರ ಹುಚ್ಚಾಟ!
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಲ್ವ? ನಿರ್ದೇಶಕರ ಸ್ಪಷ್ಟನೆ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ
ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಕೃಷ್ಣಾ: ಚಿಕ್ಕೋಡಿಯಲ್ಲಿ ಪ್ರವಾಹ ಭೀತಿ