ಚಿನ್ನ
Image Credit source: Shutterstock
ನವದೆಹಲಿ, ಮೇ 25: ಕಳೆದ ವಾರಾಂತ್ಯದಲ್ಲಿ 40 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ 30 ರೂ ಹೆಚ್ಚಿದೆ. ಒಂದು ಗ್ರಾಮ್ಗೆ 14,600 ರೂ ಗಡಿ ದಾಟಿದೆ. ಅರಪಂಜಿ ಚಿನ್ನದ ಬೆಲೆ 15,950 ರೂ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲೂ ಕಳೆದ ನಾಲ್ಕೈದು ದಿನಗಳಿಂದ ಯಾವ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,46,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,59,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,46,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 25ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,938 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,610 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,954 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,938 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,610 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 14,610 ರೂ
- ಚೆನ್ನೈ: 14,780 ರೂ
- ಮುಂಬೈ: 14,610 ರೂ
- ದೆಹಲಿ: 14,625 ರೂ
- ಕೋಲ್ಕತಾ: 14,610 ರೂ
- ಕೇರಳ: 14,610 ರೂ
- ಅಹ್ಮದಾಬಾದ್: 14,615 ರೂ
- ಜೈಪುರ್: 14,625 ರೂ
- ಲಕ್ನೋ: 14,625 ರೂ
- ಭುವನೇಶ್ವರ್: 14,610 ರೂ
ಇದನ್ನೂ ಓದಿ: ಮೊದಲ ಬಾರಿ ಇನ್ವೆಸ್ಟ್ಮೆಂಟ್ಗೆ ಪ್ರಯತ್ನಿಸುತ್ತಿದ್ದೀರಾ? ಹೇಗೆ ಆರಂಭಿಸೋದು, ಎಲ್ಲಿ ಹೂಡಿಕೆ ಮಾಡೋದು? ಇಲ್ಲಿದೆ ಟಿಪ್ಸ್
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಮಲೇಷ್ಯಾ: 556 ರಿಂಗಿಟ್ (13,396 ರುಪಾಯಿ)
- ದುಬೈ: 503.25 ಡಿರಾಮ್ (13,063 ರುಪಾಯಿ)
- ಅಮೆರಿಕ: 141 ಡಾಲರ್ (13,457 ರುಪಾಯಿ)
- ಸಿಂಗಾಪುರ: 181.60 ಸಿಂಗಾಪುರ್ ಡಾಲರ್ (13,569 ರುಪಾಯಿ)
- ಕತಾರ್: 501 ಕತಾರಿ ರಿಯಾಲ್ (13,116 ರೂ)
- ಸೌದಿ ಅರೇಬಿಯಾ: 512 ಸೌದಿ ರಿಯಾಲ್ (13,021 ರುಪಾಯಿ)
- ಓಮನ್: 53.35 ಒಮಾನಿ ರಿಯಾಲ್ (13,244 ರುಪಾಯಿ)
- ಕುವೇತ್: 41.58 ಕುವೇತಿ ದಿನಾರ್ (12,918 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 285 ರೂ
- ಚೆನ್ನೈ: 295 ರೂ
- ಮುಂಬೈ: 285 ರೂ
- ದೆಹಲಿ: 285 ರೂ
- ಕೋಲ್ಕತಾ: 285 ರೂ
- ಕೇರಳ: 295 ರೂ
- ಅಹ್ಮದಾಬಾದ್: 285 ರೂ
- ಜೈಪುರ್: 285 ರೂ
- ಲಕ್ನೋ: 285 ರೂ
- ಭುವನೇಶ್ವರ್: 295 ರೂ
- ಪುಣೆ: 285
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ