ಚಿನ್ನದ ಬೆಲೆ ಈ ಸೆಪ್ಟಂಬರ್​ನೊಳಗೆ 70,000 ರೂ ಆಗುತ್ತಾ? ಈ ಏರಿಕೆಗೆ ಸಂಭಾವ್ಯ ಕಾರಣಗಳಿವು

Reasons Why Gold Rates Increasing: ಚಿನ್ನದ ಬೆಲೆ ದೀಪಾವಳಿ ಹಬ್ಬದ ವೇಳೆಗೆ ಸಾಕಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಎಚ್​ಡಿಎಫ್​ಸಿ ಸೆಕ್ಯೂರಿಟೀಸ್​ನ ತಜ್ಞ ಅನುಜ್ ಗುಪ್ತಾ ಪ್ರಕಾರ ಸೆಪ್ಟಂಬರ್​ನೊಳಗೆ ಎಂಸಿಎಕ್ಸ್​ನಲ್ಲಿ 10 ಗ್ರಾಮ್​ನ ಚಿನ್ನದ ಬೆಲೆ 67,500 ರೂಗೆ ಏರಬಹುದು ಎನ್ನಲಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಜಾಗತಿಕ ಆರ್ಥಿಕ ಕಗ್ಗಂಟು ಇತ್ಯಾದಿ ಪ್ರತಿಕೂಲ ಪರಿಸ್ಥಿತಿಯು ಚಿನ್ನಕ್ಕೆ ಬೇಡಿಕೆ ಹೆಚ್ಚಿಸಬಹುದು. ಅಮೆರಿಕದ ಬಡ್ಡಿದರ ಇಳಿಸಿದರೂ ಚಿನ್ನದ ಬೆಲೆ ಹೆಚ್ಚಿಸಬಹುದು ಎಂದು ಅಂದಾಜು ಮಾಡಲಾಗಿದೆ.

ಚಿನ್ನದ ಬೆಲೆ ಈ ಸೆಪ್ಟಂಬರ್​ನೊಳಗೆ 70,000 ರೂ ಆಗುತ್ತಾ? ಈ ಏರಿಕೆಗೆ ಸಂಭಾವ್ಯ ಕಾರಣಗಳಿವು
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 5:21 PM

ಚಿನ್ನ ಮತ್ತು ಬೆಳ್ಳಿ ಬೆಲೆ (gold rates) ಕಳೆದ ಎರಡು ವಾರದಲ್ಲಿ ಪಲ್ಟಿ ಹೊಡೆಯುತ್ತಿದೆ. ಎರಡು ವಾರದ ಹಿಂದೆ ಭರ್ಜರಿ ಜಿಗಿತ ಕಂಡಿದ್ದ ಚಿನ್ನದ ಬೆಲೆ ಕಳೆದ ವಾರ ಸುಮಾರು ಇಳಿಕೆ ಕಂಡಿತ್ತು. ಈಗ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ಪರಿಷ್ಕರಣೆ ಘೋಷಿಸುವ ಮುನ್ನ ಏರಿಕೆ ಕಾಣುತ್ತಿದೆ. ಈ ಅನಿಶ್ಚಿತ ಸಂದರ್ಭದಲ್ಲಿ ಚಿನ್ನದ ಬೆಲೆ ಹೀಗೇ ಸಾಗುತ್ತದೆ ಎಂದು ಅಂದಾಜಿಸುವುದು ಕಷ್ಟ. ಸೀಮಿತ ಪ್ರಮಾಣದಲ್ಲಿ ಭೂಮಿಯಲ್ಲಿ ಲಭ್ಯ ಇರುವ ಸಂಪನ್ಮೂಲವಾದ್ದರಿಂದ ಚಿನ್ನಕ್ಕೆ ಯಾವತ್ತಿದ್ದರೂ ಬೆಲೆಯೇ. ಅದರ ಜೊತೆಗೆ ಬೇರೆ ಬೇರೆ ಅಂಶಗಳು ಚಿನ್ನದ ಬೆಲೆಯನ್ನು ಪ್ರಭಾವಿಸುತ್ತವೆ. ಚಿನ್ನದ ಬೆಲೆ 2024ರ ದೀಪಾವಳಿಯಷ್ಟರಲ್ಲಿ ಭಾರತದಲ್ಲಿ 70,000 ರೂ ತಲುಪಬಹುದು ಎಂದು ಹಿಂದಿನ ವರ್ಷದ ದೀಪಾವಳಿ ಸಂದರ್ಭದಲ್ಲೇ ತಜ್ಞರು ಅಂದಾಜಿಸಿದ್ದರು. ಅದರಂತೆ ಚಿನ್ನದ ಬೆಲೆ ಏರುತ್ತಿದೆ. ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 61,000 ರೂ ಸಮೀಪಕ್ಕೆ ಬಂದಿದೆ.

ಎಚ್​ಡಿಎಫ್​ಸಿ ಸೆಕ್ಯೂರಿಟೀಸ್​ನ ತಜ್ಞರಾದ ಅನುಜ್ ಗುಪ್ತಾ ಅವರು 2024ರ ಸೆಪ್ಟಂಬರ್​ನೊಳಗೆ ಎಂಸಿಎಕ್ಸ್​ನಲ್ಲಿ 10 ಗ್ರಾಮ್ ಚಿನ್ನದ ಬೆಲೆ 67,500 ರೂ ತಲುಪಬಹುದು ಎಂದು ಅಂದಾಜು ಮಾಡಿದ್ದಾರೆ.

ಇದನ್ನೂ ಓದಿ: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ

ಜಾಗತಿಕ ರಾಜಕೀಯ ಬಿಕ್ಕಟ್ಟು, ಯೂರೋಪ್ ಮತ್ತು ಚೀನಾ ಆರ್ಥಿಕತೆಯ ದೌರ್ಬಲ್ಯಗಳು ಚಿನ್ನದ ಬೆಲೆ ಹೆಚ್ಚಲು ಕಾರಣವಾಗಬಹುದು. ಹಾಗೆಯೇ, ವಿಶ್ವದ ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿವೆ. ಇದೂ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಬಹುದು ಎಂದು ಅನುಜ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಅಮೆರಿಕದ ಫೆಡರಲ್ ರಿಸರ್ವ್​ನಿಂದ ಬಡ್ಡಿದರ ಬದಲಾವಣೆ ಚಿನ್ನದ ಮೇಲೆ ಪರಿಣಾಮ ಬೀರಬಹುದು. ಮಾರ್ಚ್ 20, ಬುಧವಾರದಂದು ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಪ್ರಕಟಿಸುತ್ತದೆ. ಸಾಮಾನ್ಯವಾಗಿ ಬಡ್ಡಿದರ ಹೆಚ್ಚಾದರೆ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಬಾಂಡ್, ಠೇವಣಿ ಇತ್ಯಾದಿಗಳಲ್ಲಿ ಹಣ ತೊಡಗಿಸಿದರೆ ಹೆಚ್ಚು ಬಡ್ಡಿ ಸಿಗುವುದರಿಂದ ಅಲ್ಲಿ ಹೂಡಿಕೆ ಹೆಚ್ಚುತ್ತದೆ. ಚಿನ್ನಕ್ಕೆ ಬೇಡಿಕೆ ತುಸು ತಗ್ಗುತ್ತದೆ. ಇನ್ನು, ಬಡ್ಡಿದರ ಕಡಿಮೆ ಮಾಡಿದರೆ ಚಿನ್ನಕ್ಕೆ ಬೇಡಿಕೆ ಕುದುರುತ್ತದೆ. ಇದು ಸಾಮಾನ್ಯವಾಗಿರುವ ಟ್ರೆಂಡ್.

ಇದನ್ನೂ ಓದಿ: ಜಪಾನ್​ನಲ್ಲಿ 17 ವರ್ಷ ಬಳಿಕ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ; ನೂರಕ್ಕೆ ಕೇವಲ 10 ಪೈಸೆ ಬಡ್ಡಿ

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಈ ಬಾರಿ ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅಂದಾಜು ಪ್ರಕಾರ ಜುಲೈನಲ್ಲಿ ಬಡ್ಡಿದರ ಕಡಿಮೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು