Unilever: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ

ಲಂಡನ್ ಮೂಲದ ಯೂನಿಲಿವರ್ ಸಂಸ್ಥೆ ತನ್ನ ಐಸ್​ಕ್ರೀಮ್ ಬಿಸಿನೆಸ್ ಅನ್ನು ಪ್ರತ್ಯೇಕಗೊಳಿಸುತ್ತಿದೆ. ಬೆನ್ ಅಂಡ್ ಜೆರ್ರಿ ಮತ್ತು ಮ್ಯಾಗ್ನಂ ಬ್ರ್ಯಾಂಡ್ ಸೇರಿದಂತೆ ಐಸ್ ಕ್ರೀಮ್ ವ್ಯವಹಾರವೆಲ್ಲವೂ ಹೊಸ ಸಂಸ್ಥೆಯಡಿ ಬರಲಿವೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್​ನ ಮಾತೃ ಸಂಸ್ಥೆಯಾಗಿರುವ ಯುನಿಲಿವರ್ ತನ್ನ ಬಿಸಿನೆಸ್ ಮರುರಚನೆ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕವಾಗುತ್ತಿದೆ. ವೆಚ್ಚ ಉಳಿತಾಯಕ್ಕಾಗಿ 7,500 ಮಂದಿಯನ್ನು ಲೇ ಆಫ್ ಮಾಡುವ ಪ್ಲಾನ್ ಕೂಡ ಇದೆ.

Unilever: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ
ಯುನಿಲಿವರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 6:29 PM

ನವದೆಹಲಿ, ಮಾರ್ಚ್ 19: ಹಿಂದೂಸ್ತಾನ್ ಯೂನಿಲಿವರ್​ನ (HUL) ಮಾತೃಸಂಸ್ಥೆಯಾದ ಯುನಿಲಿವರ್ (Unilever) ತನ್ನ ಬಿಸಿನೆಸ್ ಮರು ರಚಿಸುತ್ತಿದೆ. ತನ್ನ ಐಸ್ ಕ್ರೀಮ್ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯಾಗಿ ಮಾಡಲು ಯೋಜಿಸಿದೆ. ವೆಚ್ಚ ಉಳಿಸುವ ಅಮೂಲಾಗ್ರ ಯೋಜನೆಯ ಭಾಗವಾಗಿ ಈ ಪ್ಲಾನ್ ಮಾಡಲಾಗಿದೆ. ಅದರಂತೆ 7,500 ಮಂದಿ ಕೆಲಸ ಕಳೆದುಕೊಳ್ಳುವ (job cuts) ಸಾಧ್ಯತೆಯೂ ಇದೆ. ವರದಿಗಳ ಪ್ರಕಾರ ಐಸ್​ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ತತ್​ಕ್ಷಣದಿಂದಲೇ ಆರಂಭವಾಗಲಿದ್ದು, 2025ರ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದು. ಯೂನಿಲಿವರ್​ನಲ್ಲಿ ಬೆನ್ ಅಂಡ್ ಜೆರ್ರೀಸ್, ಮ್ಯಾಗ್ನಸ್ ಮೊದಲಾದ ಬ್ರ್ಯಾಂಡ್​ನ ಐಸ್​ಕ್ರೀಮ್ ಬಿಸಿನೆಸ್​ಗಳಿವೆ. ಅವೆಲ್ಲವೂ ಸೇರಿ ಪ್ರತ್ಯೇಕ ಸಂಸ್ಥೆಯಾಗಿ ಹೊರಬರಬಹುದು.

ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವುದರಿಂದ ಯೂನಿಲಿವರ್​ಗೆ ಹೆಚ್ಚು ಅನುಕೂಲವಾಗಬಹುದು. ಸಂಸ್ಥೆಯ ಗಮನ ನಿರ್ದಿಷ್ಟಗೊಳಿಸಲು ಮತ್ತು ವ್ಯವಹಾರ ಸರಳಗೊಳಿಸಲು ಸಹಾಯವಾಗಲಿದೆ. ಹಾಗೆಯೇ, ವಿಶ್ವದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಬಿಸಿನೆಸ್ ಸೃಷ್ಟಿ ಕೂಡ ಸಾಧ್ಯವಾಗುತ್ತದೆ. ಇದರಿಂದ ಐಸ್ ಕ್ರೀಮ್ ಬಿಸಿನೆಸ್ ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಯೂನಿಲಿವರ್​ನ ಮುಖ್ಯಸ್ಥರಾದ ಇಯಾನ್ ಮೀಕಿನ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಚಿನ್ನದ ಬೆಲೆ ಈ ಸೆಪ್ಟಂಬರ್​ನೊಳಗೆ 70,000 ರೂ ಆಗುತ್ತಾ? ಈ ಏರಿಕೆಗೆ ಸಂಭಾವ್ಯ ಕಾರಣಗಳಿವು

2023ರಲ್ಲಿ ಯುನಿಲಿವರ್​ನ ಐಸ್ ಕ್ರೀಮ್ ವಿಭಾಗ ಜಾಗತಿಕವಾಗಿ 8.6 ಬಿಲಿಯನ್ ಡಾಲರ್ ಮೊತ್ತದಷ್ಟು ಮಾರಾಟ ಕಂಡಿತ್ತು. ಈಗ ಪ್ರತ್ಯೇಕ ಸಂಸ್ಥೆಯಾಗುವುದರಿಂದ ಆ ವ್ಯವಹಾರದ ಮೇಲೆ ಪ್ರತ್ಯೇಕವಾಗಿ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ.

ವಿವಾದಗಳಿಂದಲೂ ಮುಕ್ತ

ಯುನಿಲಿವರ್​ನ ಐಸ್ ಕ್ರೀಮ್ ವಿಭಾಗದಲ್ಲಿರುವ ಬೆನ್ ಅಂಡ್ ಜೆರ್ರೀಸ್ ಇತ್ತೀಚೆಗೆ ಒಂದಷ್ಟು ವಿವಾದ ಹುಟ್ಟುಹಾಕಿತ್ತು. ಯುನಿಲಿವರ್ ಮತ್ತು ಬೆನ್ ಅಂಡ್ ಜೆರ್ರೀಸ್​ನ ರಾಜಕೀಯ ನಿಲುವು ವ್ಯತಿರಿಕ್ತ ಎನಿಸಿವೆ. ತನ್ನ ಬ್ರ್ಯಾಂಡ್​ನ ಐಸ್ ಕ್ರೀಮ್​ಗಳನ್ನು ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಭಾಗದಲ್ಲಿ ಮಾರಲಾಗುತ್ತಿದೆ ಎಂದು ಬೆನ್ ಅಂಡ್ ಜೆರೀಸ್ ತಗಾದೆ ತೆಗೆದಿತ್ತು. ಇದು ಎರಡು ಅಂಗಸಂಸ್ಥೆಗಳನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು.

ಉಕ್ರೇನ್ ಅನ್ನು ರಷ್ಯಾ ಆಕ್ರಮಿಸುವ ಮುನ್ನ ಯೂರೋಪ್​ಗೆ ಅಮೆರಿಕದ ಸೇನಾ ಪಡೆಗಳನ್ನು ಕಳುಹಿಸುವ ಮೂಲಕ ಅಧ್ಯಕ್ಷ ಜೋ ಬೈಡನ್ ಯುದ್ಧದ ಕಿಡಿ ಹತ್ತಿಸುತ್ತಿದ್ದಾರೆ ಎಂದು ಬೆನ್ ಅಂಡ್ ಜೆರ್ರೀಸ್ ಸೋಷಿಯಲ್ ಮೀಡಿಯಾದಲ್ಲಿ ಆರ್ಭಟಿಸಿತ್ತು. ಇದಕ್ಕೆ ಯುನಿಲಿವರ್ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಯುನಿಲಿವರ್​ಗೆ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಂಡರೆ ವಿವಾದದಿಂದಲೂ ಮುಕ್ತಿ ಸಿಕ್ಕಂತಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬುಲೆಟ್ ಟ್ರೈನ್ ಸಂಚಾರ 2026ರಲ್ಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಯುನಿಲಿವರ್ 190 ದೆಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅದು ವಿಶವದ ಅತಿದೊಡ್ಡ ಸೋಪು ತಯಾರಕ ಕಂಪನಿ. ನೀರು, ಆಹಾರ, ಸೌಂದರ್ಯ ವರ್ಧಕ, ಐಸ್​ಕ್ರೀಮ್, ಔಷಧ, ಡ್ರಿಂಕ್ಸ್, ಚಹಾ ಇತ್ಯಾದಿ ಬಹಳಷ್ಟು ಉತ್ಪನ್ನಗಳನ್ನು ಅದು ತಯಾರಿಸುತ್ತದೆ. ರೆಕ್ಸೋನಾ, ಲಕ್ಸ್, ಲೈಫ್​ಬಾಯ್, ಸನ್​ಸಿಲ್ಕ್, ಡೋವ್ ಇತ್ಯಾದಿ ಅದರ ಪ್ರಸಿದ್ಧ ಬ್ರ್ಯಾಂಡ್​ಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್