ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ಟ್ಯಾಕ್ಸ್ ಉಳಿಸುವ ಮಾರ್ಗಗಳ್ಯಾವುವು ತಿಳಿದಿರಿ

Planned Investments to Save Taxes: 80ಸಿ ಸರಣಿಯ ವಿವಿಧ ಸೆಕ್ಷನ್​ಗಳು ವರ್ಷಕ್ಕೆ 2 ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ನೆರವಾಗುತ್ತವೆ. ತೆರಿಗೆ ಉಳಿಸಬಲ್ಲ ಹಲವು ಯೋಜನೆಗಳಿಗೆ ತೊಡಗಿಸಲಾಗುವ ಹಣಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಸಂಬಳದಲ್ಲಿ ಎಚ್​ಆರ್​ಎ ಸವಲತ್ತು ಇಲ್ಲದವರು ಬಾಡಿಗೆಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು. ನ್ಯಾಷನಲ್ ಡಿಫೆನ್ಸ್ ಫಂಡ್ ಇತ್ಯಾದಿ ನಿಧಿಗಳಿಗೆ ಮಾಡಲಾಗುವ ದಾನದ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ಟ್ಯಾಕ್ಸ್ ಉಳಿಸುವ ಮಾರ್ಗಗಳ್ಯಾವುವು ತಿಳಿದಿರಿ
ತೆರಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 4:20 PM

ಸಂಬಳ ಪಡೆಯುವ ಹೆಚ್ಚಿನ ಐಟಿ ಪಾವತಿದಾರರು (tax payers) ಶೇ.5ರಿಂದ 30ರಷ್ಟು ಆದಾಯ ತೆರಿಗೆ ಪಾವತಿಸುತ್ತಾರೆ. ಬಹಳಷ್ಟು ಹಣ ತೆರಿಗೆಗೆಯೇ ಕಡಿತಗೊಳ್ಳುತ್ತದೆ. ಹಳೆಯ ಟ್ಯಾಕ್ಸ್ ರಿಟರ್ನ್ ವ್ಯವಸ್ಥೆಯಲ್ಲಿ (old tax regime) ಒಂದಷ್ಟು ತೆರಿಗೆ ರಿಯಾಯಿತಿಗಳು ಸಿಗುತ್ತವೆ. ಟ್ಯಾಕ್ಸ್ ಡಿಡಕ್ಷನ್ ಇರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು. ಈಗ ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಈಗಲೇ ನಿಮ್ಮ ಹೂಡಿಕೆಗಳನ್ನು ಪ್ಲಾನ್ ಮಾಡುವುದು ಉತ್ತಮ ನಿರ್ಧಾರವಾಗಬಹುದು. ಟ್ಯಾಕ್ಸ್ ಡಿಡಕ್ಷನ್​ಗೂ ಮಿತಿ ಇರುವುದರಿಂದ ನಿಮ್ಮ ಎಲ್ಲಾ ಹೂಡಿಕೆಯನ್ನು ಅಂಥ ಯೋಜನೆಗಳಿಗೇ ತೊಡಗಿಸಿಕೊಳ್ಳುವುದೂ ಕೂಡ ತಪ್ಪಾಗುತ್ತದೆ. ಈ ನಿಟ್ಟಿನಲ್ಲಿ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಮನವರಿಕೆ ಮಾಡಿಕೊಳ್ಳುವುದು ಲೇಸು.

ಒಟ್ಟು ಎಷ್ಟು ತೆರಿಗೆ ಉಳಿಸಬಹುದು, ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಯಾವ್ಯಾವ ವಿಧಾನಗಳಿವೆ, ಇತ್ಯಾದಿ ವಿವರವನ್ನು ತಿಳಿದಿರಬೇಕು. ಹಳೆಯ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್​ಗೆ ಮಾಡಲಾಗುವ 50,000 ರೂವರೆಗಿನ ಹೂಡಿಕೆಗೂ ಡಿಡಕ್ಷನ್ ಪಡೆಯಬಹುದು.

ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ನೀಡುವ ಯೋಜನೆಗಳು

ಇಎಲ್​ಎಸ್​ಎಸ್ ಜೋಡಿತ ಹೂಡಿಕೆ ಯೋಜನೆಗಳು, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್​ಸಿಎಸ್​ಎಸ್) ಇತ್ಯಾದಿ ಸ್ಕೀಮ್​ಗಳು; ಎಲ್​ಐಸಿ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ, ಗೃಹ ಸಾಲದ ಅಸಲು ಹಣ ಪಾವತಿ, ಪೆನ್ಷನ್ ಫಂಡ್​ಗಳಿಗೆ ಪಾವತಿ ಇತ್ಯಾದಿ ಹಣಕ್ಕೆ 1.5 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.

ನ್ಯಾಷನಲ್ ಪೆನ್ಷನ್ ಸ್ಕೀಮ್​ನಲ್ಲಿ ಮಾಡುವ 50,000 ರೂ ಹೂಡಿಕೆಗೂ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಇದರೊಂದಿಗೆ 80ಸಿ ಸೆಕ್ಷನ್​ಗಳಲ್ಲಿ ಒಟ್ಟು 2 ಲಕ್ಷ ರೂ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್

ಸಂಬಳದಲ್ಲಿ ಎಚ್​ಆರ್​ಎ ಇಲ್ಲದ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರು ಸೆಕ್ಷನ್ 80ಜಿಜಿ ಅಡಿಯಲ್ಲಿ ಬಾಡಿಗೆ ಹಣ ಪಾವತಿಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಮನೆ ಬಾಡಿಗೆಯಿಂದ ಎಷ್ಟು ತೆರಿಗೆ ವಿನಾಯಿತಿ?

ಈ ಕೆಳಗಿನ ಮೂರು ಅಂಶಗಳಲ್ಲಿ ಯಾವುದು ಕನಿಷ್ಠವೋ ಆ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.

  1. ಒಂದು ವರ್ಷದಲ್ಲಿ ಪಾವತಿಸಲಾದ ಬಾಡಿಗೆ ಮೊತ್ತ ಹಾಗೂ ಶೇ 10ರಷ್ಟು ಒಟ್ಟು ಆದಾಯದ ನಡುವಿನ ವ್ಯತ್ಯಾಸ
  2. ತಿಂಗಳಿಗೆ 5,000 ರೂ
  3. ಒಟ್ಟು ಆದಾಯದ ಶೇ. 25ರಷ್ಟು ಭಾಗ

ಇದರಲ್ಲಿ ಅತಿ ಕಡಿಮೆ ಎನಿಸುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಅವಕಾಶ ಸಿಗುತ್ತದೆ. ಅದರಂತೆ ವರ್ಷಕ್ಕೆ 60,000 ರೂವರೆಗೆ ಡಿಡಕ್ಷನ್ ಸಾಧ್ಯ ಇದೆ.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ದಾನ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ

ಪಿಎಂ ನ್ಯಾಷನಲ್ ರಿಲೀಫ್ ಫಂಡ್, ನ್ಯಾಷನಲ್ ಡಿಫೆನ್ಸ್ ಫಂಡ್ ಇತ್ಯಾದಿ ವಿವಿಧ ಸರ್ಕಾರೀ ಫಂಡ್​ಗಳಿಗೆ ಮಾಡುವ ದಾನಕ್ಕೆ ಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ಜವಾಹರಲಾಲ್ ನೆಹರೂ ಮೆಮೋರಿಯಲ್ ಫಂಡ್, ಪಿಎಂ ಬರ ಪರಿಹಾರ ನಿಧಿ, ಇಂದಿರಾ ಗಾಂದಿ ಮೆಮೋರಿಯಲ್ ಟ್ರಸ್ಟ್, ರಾಜೀವ್ ಗಾಂಧಿ ಫೌಂಡೇಶನ್​ಗೆ ಮಾಡಲಾಗುವ ಡೊನೇಶನ್​ನ ಅರ್ಧದಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಪೈಕಿ ಬರ ಪರಿಹಾರ ನಿಧಿ ಹೊರತುಪಡಿಸಿ ಉಳಿದ ಮೂರು ಫಂಡ್​ಗಳಿಗೆ 2024ರ ಏಪ್ರಿಲ್ 1ರ ಬಳಿಕ ಮಾಡಲಾಗುವ ದಾನದ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಲು ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ