Diwali Gold Sales: ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನದ ಮಾರಾಟ ಶೇ 50ಕ್ಕಿಂತ ಹೆಚ್ಚಳ

ಈ ದೀಪಾವಳಿಗೆ ಚಿನ್ನದ ಮಾರಾಟವು ಶೇ 50ಕ್ಕಿಂತ ಹೆಚ್ಚಾಗಿದೆ. ಈ ಬಗ್ಗೆ ಪ್ರಮುಖ ಆಭರಣ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ವಿವರಗಳು ಇಲ್ಲಿವೆ.

Diwali Gold Sales: ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನದ ಮಾರಾಟ ಶೇ 50ಕ್ಕಿಂತ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Nov 09, 2021 | 11:24 PM

ಚಿನ್ನದ ಬೆಲೆಯು ಕಡಿಮೆ ಆಗಿದ್ದರಿಂದಾಗಿ ಎಲ್ಲ ದೊಡ್ಡ ಆಭರಣ ಮಳಿಗೆಗಳು ಬೇಡಿಕೆಯಲ್ಲಿ ಹೆಚ್ಚಳವನ್ನು ದಾಖಲಿಸಿವೆ. ವಾಸ್ತವವಾಗಿ ಇದು ಮೂರು-ನಾಲ್ಕು ವರ್ಷಗಳಲ್ಲೇ ಹೆಚ್ಚು ಮಾರಾಟವಾದ ಋತುವಾಗಿ ಹೊರಹೊಮ್ಮಿದೆ. ದೊಡ್ಡ ಮಳಿಗೆಗಳು ಚಿನ್ನಾಭರಣಗಳ ಮಾರಾಟದ ವಿಷಯದಲ್ಲಿ ಶೇ 40ರಿಂದ ಶೇ 50ರಷ್ಟು ಜಿಗಿತವನ್ನು ಕಂಡಿವೆ. ಕೆಲವು ಶೇ 55ಕ್ಕಿಂತ ಹೆಚ್ಚು ಏರಿಕೆಗೆ ಸಾಕ್ಷಿಯಾಗಿವೆ. ಪೂರ್ವ ಭಾರತದ ದೊಡ್ಡ ಮಳಿಗೆಗಳಾದ ಪಿಸಿ ಚಂದ್ರ ಮತ್ತು ಸೆಂಕೋ ಗೋಲ್ಡ್‌ನ ಮಾರಾಟವು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಶೇಕಡಾ 40ಕ್ಕಿಂತ ಕಡಿಮೆಯಾಗದಂತೆ ಹೆಚ್ಚಾಗಿಲ್ಲ. “ಈ ವರ್ಷ ನಾವು ಕಳೆದ 6-7 ದಿನಗಳಲ್ಲಿ ಮಾರಾಟದಲ್ಲಿ ಉತ್ತಮ ಜಿಗಿತವನ್ನು ಕಂಡಿದ್ದೇವೆ. 2020 ಅಥವಾ 2019ರಲ್ಲಿ ಮಾರಾಟ ಮಾಡಿದ್ದಕ್ಕಿಂತ ಕನಿಷ್ಠ ಶೇ 40- ಶೇ 45 ಹೆಚ್ಚು ಎಂದು ಅಂಕಿಅಂಶಗಳನ್ನು ನೀವು ಹೇಳಬಹುದು. ಮಾರುಕಟ್ಟೆ ನಿಜವಾಗಿಯೂ ಉತ್ತಮವಾಗಿದೆ,” ಎಂದು ಪಿಸಿ ಚಂದ್ರ ಜ್ಯುವೆಲರ್ಸ್‌ನ ಸುಭ್ರ ಚಂದ್ರ ಹೇಳಿದ್ದಾರೆ.

ಆಶಾವಾದ ತನಿಷ್ಕ್, ಕಲ್ಯಾಣ್ ಜ್ಯುವೆಲರ್ಸ್ ಮತ್ತು ಇತರರು ಧನ್​ತೇರಸ್ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಉತ್ತಮವಾಗಿದೆ ಎಂದು ಖಚಿತಪಡಿಸಿದ್ದಾರೆ. ಅವರು ಮುಂಬರುವ ವರ್ಷ ಸಹ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸುತ್ತಾರೆ. ”ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನದ ಬೆಲೆ ಕಡಿಮೆಯಾಗಿದೆ. ಖರೀದಿದಾರರು ಮತ್ತು ವ್ಯಾಲ್ಯೂಮ್ ಬೆಳವಣಿಗೆಯ ವಿಷಯದಲ್ಲಿ ನಾವು ಉತ್ತಮ ಏರಿಕೆ ಗಮನಿಸುತ್ತಿದ್ದೇವೆ. ಈ ಹಬ್ಬದ ಋತುವಿನಲ್ಲಿ ನಾವು ಸರ್ವತೋಮುಖ ಬೆಳವಣಿಗೆಯನ್ನು ಕಂಡಿದ್ದೇವೆ,” ಎಂದು ತನಿಷ್ಕ್‌ನ ಸಿಇಒ ಅಜೋಯ್ ಚಾವ್ಲಾ ಹೇಳಿದ್ದಾರೆ.

“ಧನ್​ತೇರಸ್‌ನಲ್ಲಿ ನಾವು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಂದ ಹೆಚ್ಚಿನ ಮಾರಾಟ ನೋಂದಾಯಿಸಿದ್ದೇವೆ. ಇದರಿಂದಾಗಿ ದೃಢವಾದ ಆದಾಯದ ಬೆಳವಣಿಗೆಯಾಗಿದೆ. ಸಾದಾ ಚಿನ್ನದ ವಿಭಾಗದಲ್ಲಿ ಮಾರಾಟದ ವೇಗ ಮುಂದುವರಿದಿದ್ದರೂ ಸ್ಟಡ್ ಜ್ಯುವೆಲ್ಲರಿ ವಿಭಾಗದಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿದ್ದೇವೆ,” ಎಂದು ಕಲ್ಯಾಣ್ ಜ್ಯುವೆಲರ್ಸ್‌ನ ಇಡಿ ರಮೇಶ್ ಕಲ್ಯಾಣರಾಮನ್ ಹೇಳಿದ್ದಾರೆ.

ಸಣ್ಣ ನಗರಗಳು ಮತ್ತು ಹಗುರ ಆಭರಣಗಳು ಸಣ್ಣ ನಗರಗಳಲ್ಲಿ ಕೂಡ ಮಾರಾಟವು ವೇಗವಾಗಿ ಹೆಚ್ಚುತ್ತಿದೆ ಎಂದು ಚಾವ್ಲಾ ದೃಢಪಡಿಸಿದ್ದಾರೆ. “3/4 ಶ್ರೇಣಿಯ ನಗರಗಳು ಉತ್ತಮವಾಗಿ ಮಾರಾಟ ಕಂಡಿವೆ ಮತ್ತು ವಜ್ರದ ಆಭರಣಗಳಿಗೆ ಉತ್ತಮ ಬೇಡಿಕೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಧನ್​ತೇರಸ್‌ನಲ್ಲಿ ಹೆಚ್ಚಿನ ಗ್ರಾಹಕರು ಖರೀದಿಸಿದ್ದಾರೆ. ಮದುವೆಯ ಆಭರಣಗಳ ಹೊರತಾಗಿ ಹಗುರವಾದ, ಧರಿಸಬಹುದಾದ ಆಭರಣಗಳಿಗೆ ಉತ್ತಮ ಬೇಡಿಕೆಯಿದೆ,” ಎಂದು ಚಾವ್ಲಾ ತಿಳಿಸಿದ್ದಾರೆ.

ಆದರೆ, ಈ ವರ್ಷವೂ ಮಾರುಕಟ್ಟೆಯಲ್ಲಿ ಕಡಿಮೆ ತೂಕದ ಆಭರಣಗಳು ಪ್ರಾಬಲ್ಯ ಹೊಂದಿವೆ. “ಈ ಋತುವಿನಲ್ಲಿ ನಾವು ಹಗುರ ಚಿನ್ನ ಮತ್ತು ಸಾಮಾನ್ಯ ಆಭರಣ ವಿಭಾಗಗಳಲ್ಲಿ ಹೊಸ ಸಂಗ್ರಹಗಳನ್ನು ಪರಿಚಯಿಸಿದ್ದೇವೆ. ಇವು ಹಲವಾರು ಖರೀದಿದಾರರ ಮೆಚ್ಚಿನವುಗಳಾಗಿವೆ. ಇದುವರೆಗಿನ ಋತುವು ಲವಲವಿಕೆಯಿಂದ ಕೂಡಿದೆ ಮತ್ತು ವರ್ಗಗಳಾದ್ಯಂತ ಆದಾಯದ ಬೆಳವಣಿಗೆಯು ಅತ್ಯುತ್ತಮವಾಗಿದೆ,” ಎಂದು ಚಂದ್ರ ಸೇರಿಸಿದ್ದಾರೆ.

ಇದನ್ನೂ ಓದಿ: Dhanteras 2021: 1 ರೂಪಾಯಿಗೂ ಚಿನ್ನ ಖರೀದಿಸಿ; ಶುದ್ಧತೆ, ತೆರಿಗೆ, ಆನ್​ಲೈನ್​ ಖರೀದಿ ಹೇಗೆಂದು ತಿಳಿಯಿರಿ